ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 25, 2017
ಉಕ್ಕಿನಡ್ಕ ವೈದ್ಯಕೀಯ ಕಾಲೇಜು ನಿಮರ್ಾಣ ಆಮೆಗತಿ-ಜನಪರ ಕ್ರಿಯಾ ಸಮಿತಿಯಿಂದ ಹೋರಾಟ ಎಚ್ಚರಿಕೆ
ಬದಿಯಡ್ಕ : ಕಾಸರಗೋಡು ಜಿಲ್ಲೆಯ ಬಹುನಿರೀಕ್ಷಿತ ಉಕ್ಕಿನಡ್ಕದಲ್ಲಿ ಸ್ಥಾಪಿಸಲುದ್ದೇಶಿಸಿದ ಸರಕಾರೀ ವೈದ್ಯಕೀಯ ಕಾಲೇಜು ಶಿಲಾನ್ಯಾಸಗೈದು ನಾಲ್ಕು ವರ್ಷ ಪೂರ್ಣಗೊಂಡರೂ, ಕಟ್ಟಡ ನಿಮರ್ಾಣದ ಕಾಮಗಾರಿ ಇನ್ನೂ ಕೂಡ ಆಮೆ ನಡಿಗೆಯಲ್ಲಿ ಸಾಗುತ್ತಿರುವುದನ್ನು ಪ್ರತಿಭಟಿಸಿ ಜನಪರ ಆಂದೋಲನ ಸಮಿತಿಯ ನೇತೃತ್ವದಲ್ಲಿ ನ.28ರಂದು ಸಂಜೆ 4 ಘಂಟೆಗೆ ಉಕ್ಕಿನಡ್ಕದಲ್ಲಿರುವ ವೈದ್ಯಕೀಯ ಕಾಲೇಜು ನಿಮರ್ಾಣ ಪರಿಸರದಲ್ಲಿ ಚಳುವಳಿಯನ್ನು ನಡೆಸಲು ತೀಮರ್ಾನಿಸಲಾಗಿದೆ. ಈ ಬಗ್ಗೆ ಬದಿಯಡ್ಕ ವ್ಯಾಪಾರಿ ವ್ಯವಸಾಯೀ ಏಕೋಪನಾ ಸಮಿತಿಯ ಸಭಾಂಗಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಜನಪರ ಆಂದೋಲನ ಸಮಿತಿ ಪದಾಧಿಕಾರಿಗಳು ತಿಳಿಸಿರುತ್ತಾರೆ.
2013 ನವಂಬರ್ 30ರಂದು ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಶಿಲಾನ್ಯಾಸಗೈದ ವೈದ್ಯಕೀಯ ಕಾಲೇಜು ಅಕಾಡೆಮಿಕ್ ಬ್ಲಾಕ್ ಕಟ್ಟಡ ಕಾಮಗಾರಿ ಪೂರ್ಣಗೊಳ್ಳುತ್ತಿದ್ದು, ಇದೇ ಸಂದರ್ಭದಲ್ಲಿ 68ಕೋಟಿ ಮೀಸಲಿರಿಸಿದ ಆಸ್ಪತ್ರೆ ಕಟ್ಟಡದ ಟೆಂಡರ್ನ್ನು ವಿವಿಧ ಕಾರಣಗಳನ್ನು ನೀಡಿ ಕಾಮಗಾರಿ ಆರಂಭಕ್ಕೆ ವಿಳಂಬಗೊಳಿಸಲಾಗುತ್ತಿದ್ದು, ಕಳೆದ 2 ವರ್ಷಗಳಿಂದ ಈ ಬಗ್ಗೆ ಯಾವುದೇ ಕ್ರಮಕೈಗೊಳ್ಳದಿರುವುದನ್ನು ಖಂಡಿಸಿ ಈ ಚಳುವಳಿಗೆ ನೇತೃತ್ವ ನೀಡುವುದಾಗಿ ಸಂಬಂಧಪಟ್ಟವರು ತಿಳಿಸಿರುತ್ತಾರೆ. ಇದೇ ಸಂದರ್ಭದಲ್ಲಿ ಕೇರಳ ರಾಜ್ಯದಲ್ಲಿ ಮಂಜೂರಾದ ಮಂಜೇರಿ, ಪಾಲಕ್ಕಾಡು ವೈದ್ಯಕೀಯ ಕಾಲೇಜುಗಳು ಕಾಯರ್ಾರಂಭಗೊಂಡಿದ್ದು ಕಾಸರಗೋಡು ಜಿಲ್ಲೆಯನ್ನು ಕಾಲೇಜು ಸ್ಥಾಪಿಸಲು ಶಿಲಾನ್ಯಾಸಗೈದು ಬಳಿಕ ನಿರ್ಲಕ್ಷ್ಯ ವಹಿಸಲಾಗಿದೆ. 1000ಕ್ಕಿಂತಲೂ ಅಧಿಕ ಎಂಡೋಸಲ್ಫಾನ್ ಬಾಧಿತರಿರುವ ಈ ಪ್ರದೇಶಕ್ಕೆ ಮಂಜೂರುಗೊಂಡ ಈ ವೈದ್ಯಕೀಯ ಕಾಲೇಜನ್ನು ವಿವಿಧ ಕಾರಣಗಳನ್ನು ನೀಡಿ ಸ್ಥಳಾಂತರಿಸುವ ಹುನ್ನಾರವೂ ನಡೆಯುತ್ತಿದ್ದು, ಈ ನಡುವೆ ಸಮೀಪದ ಕನರ್ಾಟಕ ರಾಜ್ಯದ ಮಂಗಳೂರಿನ ವೈದ್ಯಕೀಯ ಕಾಲೇಜಿನ ಲಾಬಿಯೂ ಇದರ ಹಿಂದಿರುವುದಾಗಿ ಸಂಶಯಿಸಲಾಗಿದೆ. ಇದನ್ನು ಪ್ರಬಲವಾಗಿ ಪ್ರತಿಭಟಿಸಿ ಸ್ಥಳದಲ್ಲಿಯೇ ಕಾಲೇಜನ್ನು ಶೀಘ್ರವಾಗಿ ನಿಮರ್ಿಸಬೇಕೆಂಬ ಬೇಡಿಕೆಯನ್ನೊಡ್ಡಿ ಚಳುವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಪದಾಧಿಕಾರಿಗಳು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜನಕೀಯ ಸಮಿತಿಯ ಅಧ್ಯಕ್ಷ ಮಾಹಿನ್ ಕೇಳೋಟ್, ಕಾಯರ್ಾಧ್ಯಕ್ಷ ಎಸ್.ಎನ್.ಮಯ್ಯ ಬದಿಯಡ್ಕ, ಸಂಚಾಲಕ ಶ್ಯಾಮ ಪ್ರಸಾದ್ ಕಾಸರಗೋಡು, ಕುಂಜಾರು ಮುಹಮ್ಮದ್ ಹಾಜಿ, ಬಿ.ಎಸ್.ಗಾಂಭೀರ್ ಪೆರ್ಲ, ರವಿ ನವಶಕ್ತಿ, ಬದ್ರುದ್ದೀನ್ ಮಾಸ್ಟರ್ ಪಳ್ಳತ್ತಡ್ಕ, ಅಬೂಬಕ್ಕರ್ ಪೆರ್ದಣೆ, ಕರುಣಾಕರನ್, ಎಂ.ಎಚ್.ಜನಾರ್ಧನ ಮೊದಲಾದವರು ಪಾಲ್ಗೊಂಡರು.
ಏನಾಗುತ್ತಿದೆ ಇಲ್ಲಿ....
ಜಿಲ್ಲೆಯ ನಿರಂತರ ಅವಗಣನೆ : ಕಾಸರಗೋಡು ಜಿಲ್ಲೆಯ ಗಡಿಭಾಗದ ಅಭಿವೃದ್ಧಿಯನ್ನು ರಾಜ್ಯ ಸರಕಾರವು ನಿರಂತರವಾಗಿ ಅವಗಣಿಸುತ್ತಿದ್ದು, ಇಲ್ಲಿ ಹಲವಾರು ನಿದರ್ಶನಗಳು ಕಂಡುಬರುತ್ತಿದೆ. ಮುಷ್ಕರ ಸಮಿತಿಯ ನೇತೃತ್ವದಲ್ಲಿ ವೈದ್ಯಕೀಯ ಕಾಲೇಜಿಗಾಗಿ ಸತ್ಯಾಗ್ರಹ, ಮಲೆನಾಡ ರಸ್ತೆಗಳ ಶೋಚನೀಯಾವಸ್ಥೆಗೆದುರಾಗಿ ಮುಷ್ಕರ, ತಿರುವನಂತಪುರದಲ್ಲಿ `ಕೂಗಾಟ ಚಳುವಳಿ' ಹಾಗೂ ಇನ್ನಿತರ ರಾಜಕೀಯ ಪಕ್ಷಗಳಿಂದಲೂ ನಿರಂತರ ಹೋರಾಟ ನಡೆದಿತ್ತು. ಎಲ್ಲಾ ಹೋರಾಟಗಳಲ್ಲೂ ಕೇರಳ ವ್ಯಾಪಾರೀ ವ್ಯವಸಾಯೀ ಏಕೋಪನ ಸಮಿತಿಯು ಮುಂದಾಳುತ್ವವನ್ನು ವಹಿಸಿತ್ತು. ಅಂತರಾಜ್ಯವನ್ನು ಸಂಪಕರ್ಿಸುವ ಚೆರ್ಕಳ ಕಲ್ಲಡ್ಕ ರಸ್ತೆ ಹಲವು ವರ್ಷಗಳಿಂದ ದುರವಸ್ಥೆಯಲ್ಲಿದ್ದು ಈ ಬಗ್ಗೆ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ ಇನ್ನೂ ಕೂಡ ಮೌನಪಾಲಿಸಿರುವುದು ಅವಗಣನೆಗೆ ಸಾಕ್ಷಿಯಾಗಿದೆ. ಇಲ್ಲಿಯ ಜನತೆಯ ಹೋರಾಟಕ್ಕೆ ಬೆಲೆಯಿಲ್ಲದಂತಾಗಲು ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಅನಾಸ್ಥೆಯೇ ಕಾರಣ ಎಂದು ಸಾರ್ವಜನಿಕರು ಆಡಿಕೊಳ್ಳುತ್ತಿದ್ದಾರೆ.


