ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 17, 2017
ಭಾಗವತ ಸಪ್ತಾಹ ಯಜ್ಞ ಆರಂಭ
ಕಾಸರಗೋಡು: ಬೇಕಲದ ಅರವತ್ತ್ ಶ್ರೀ ಮೂವಾಳಂಕುಯಿ ಚಾಮುಂಡಿ ಅಮ್ಮ ಉದ್ಭವ ಸ್ಥಾನ ನವೀಕರಣ ಸಮಿತಿಯ ಆಶ್ರಯದಲ್ಲಿ ನ.23 ರ ವರೆಗೆ ಭಾಗವತ ಸಪ್ತಾಹ ಯಜ್ಞ ನಡೆಯಲಿದ್ದು, ನ.16 ರಂದು ಬ್ರಹ್ಮಶ್ರೀ ಮರಂಗಾಡ್ ಇಲ್ಲತ್ ಮುರಳಿಕೃಷ್ಣ ನಂಬೂದಿರಿ ಅವರ ನೇತೃತ್ವದಲ್ಲಿ ಭಾಗವತ ಸಪ್ತಾಹ ಯಜ್ಞ ಆರಂಭಗೊಂಡಿತು.
ನ.16 ರಂದು ಕ್ಷೇತ್ರದ ತಂತ್ರಿವರ್ಯರನ್ನು ಮತ್ತು ಶ್ರೀಮದ್ ಭಾಗವತ ಸಪ್ತಾಹ ಯಜ್ಞಾಚಾರ್ಯರನ್ನು ಸ್ವಾಗತಿಸಲಾಯಿತು. ಆ ಬಳಿಕ ಶ್ರೀ ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ಕೆ.ಎಂ.ದಾಮೋದರನ್ ತಂತ್ರಿ ಅವರು ದೀಪ ಪ್ರಜ್ವಲಿಸಿ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಆಚಾರ್ಯವರೇಣ್ಯ ಬ್ರಹ್ಮಶ್ರೀ ಮರಂಗಾಟ್ ಇಲ್ಲತ್ ಮುರಳಿಕೃಷ್ಣ ನಂಬೂದಿರಿ ಉಪಸ್ಥಿತರಿದ್ದರು.
ನ.17 ರಂದು ಬೆಳಗ್ಗೆ ಸಹಸ್ರನಾಮ ಜಪ, ಆ ಬಳಿಕ ಭಾಗವತ ಪಾರಾಯಣ ಮತ್ತು ಧಾಮರ್ಿಕ ಭಾಷಣ ನಡೆಯಿತು.


