ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 24, 2017
ಮಂಜೇಶ್ವರ ಅನಂತೇಶ್ವರ ಸನ್ನಿಧಿಯಲ್ಲಿ ಅಭೂತಪೂರ್ವ ರಥೋತ್ಸವದೊಂದಿಗೆ ಷಷ್ಠಿ
ಮಂಜೇಶ್ವರ: ಇತಿಹಾಸ ಪ್ರಸಿದ್ದ, ಹದಿನೆಂಟು ಪೇಟೆಗಳ ದೇವಸ್ಥನ ಮಂಜೇಶ್ವರ ಶ್ರೀಮದ್ ಅನಂತೇಶ್ವರ ಕ್ಷೇತ್ರದಲ್ಲಿ ಶುಕ್ರವಾರ ಸಂಜೆ ಷಷ್ಠೀ ಮಹೋತ್ಸವದ ವಿಶಿಷ್ಟ ರಥ ಉತ್ಸವ ಸಾವಿರಾರು ಭಕ್ತರ ಪಾಲ್ಗೊಳ್ಳುವಿಕೆಯೊಂದಿಗೆ ಸಾಂಪ್ರದಾಯಿಕ ಶ್ರದ್ದಾ ಭಕ್ತಿಯಿಂದ ನೆರವೇರಿತು.
ಶ್ರೀಕ್ಷೇತ್ರದ ಅಧ್ಯಕ್ಷ ಡಾ.ಅನಂತ ಕಾಮತ್ ಕಾಸರಗೋಡು, ಉಪಾಧ್ಯಕ್ಷ ದಿನೇಶ್ ಶೆಣೈ ಮಂಜೇಶ್ವರ, ಆಡಳಿತ ಮೊಕ್ತೇಸರುಗಳಾದ ಉಮೇಶ್ ಕಿಣಿ, ಗುರುದತ್ ಕಾಮತ್ ಮಂಗಳೂರು, ಖಜಾಂಜಿ ಸುರೇಶ್ ಶೆಣೈ, ಹದಿನೆಂಟು ಪೇಟೆಗಳ ಪ್ರತಿನಿಧಿಗಳಾದ ಎಂ.ವಿಠಲದಾಸ್ ಭಟ್ ಮಂಜೇಶ್ವರ ಪೇಟೆ, ಕೆ.ಯೋಗೀಶ್ ಕಾಮತ್ ಮಂಗಳೂರು ಪೇಟೆ, ಆರ್.ವಿಠೋಭ ಶೆಣೈ ಮಂಗಳೂರು ಪೇಟೆ, ಎಂ.ತಿಮ್ಮಪ್ಪ ಆರ್ ಹೆಗ್ಡೆ ಮುಲ್ಕಿ ಪೇಟೆ, ಶ್ರೀಪತಿ ಪ್ರಭು ಕಾಪು ಪೇಟೆ, ದೀಪಕ್ ಶೆಣೈ ಉಡುಪಿ ಪೇಟೆ, ಕೆ.ನಿರಂಜನ್ ಎಸ್ ಕಾಮತ್ ಕುಂದಾಪುರ ಪೇಟೆ, ಬಿ.ಪ್ರಕಾಶ್ ಪಡಿಯಾರ್ ಗಂಗೊಳ್ಳಿ ಪೇಟೆ, ಪಿ.ನರಸಿಂಹ ಪೈ ಕಾರ್ಕಳ ಪೇಟೆ, ಜಿ.ಉಮೇಶ್ ಪೈ ಮೂಡಬಿದಿರೆ ಪೇಟೆ, ಜಿ.ವಿಶ್ವನಾಥ ಪ್ರಭು ಗುರುಪುರ ಪೇಟೆ, ಎಂ.ವೇದವ್ಯಾಸ ಪ್ರಭು ಬಂಟ್ವಾಳ ಪೇಟೆ, ಡಾ.ಎಂ.ಸುಧೀರ್ ಪ್ರಭು ಬೆಳ್ತಂಗಡಿ ಪೆಟೆ, ಕೆ.ದೇವದಾಸ್ ಕಿಣಿ ಪುತ್ತೂರು ಪೇಟೆ, ಎಂ.ಲಕ್ಷ್ಮೀನಾರಾಯಣ ಶಾನುಭೋಗ್ ಬೆಳ್ಳಾರೆ ಪೇಟೆ, ಯು.ರಾಜಾರಾಮ ನಾಯಕ್ ಉಳ್ಳಾಲ ಪೇಟೆ, ಪಿ.ರಾಜೇಶ್ ಪೈ ಕಾಸರಗೋಡು ಪೇಟೆ, ಕೆ.ನಾರಾಯಣ ಶೆಣೈ ಕಾಂಞಿಂಗಾಡ್ ಪೇಟೆ ಭಾಗವಹಿಸಿದ್ದರು.
ಶುಕ್ರವಾರ ಬೆಳಿಗ್ಗೆ 10 ರಿಂದ 12 ರವರೆಗೆ ಧರ್ಮ, 12.30ಕ್ಕೆ ಮಹಾಪೂಜೆ, 1ಕ್ಕೆ ಯಜ್ಞ, 3.30 ಕ್ಕೆ ಪೂಣರ್ಾಹುತಿ,4ಕ್ಕೆ ಯಜ್ಞಾರತಿ, ಬಳಿಕ 6 ಕ್ಕೆ ಸ್ವರ್ಣ ಲಾಲ್ಕಿಯಲ್ಲಿ ಬಲಿ, ರಥಾರೋಹಣ, ಬಳಿಕ ವಿವಿಧ ಸೇವೆಗಳು, 8.30ಕ್ಕೆ ಧ್ವಜಾವರೋಹಣ, ಮಂಗಳಾರತಿ ಸಮಾರಾಧನೆಗಳು ನಡೆಯಿತು.
ಶುಕ್ರವಾರ ಸಂಜೆ 6ಕ್ಕೆ ಆರಂಭಗೊಂಡ ರಥೋತ್ಸವದ ವೇಳೆ ನಾಡಿನ ಉದ್ದಗಲದಿಂದ 10 ಸಾವಿರಕ್ಕಿಂತಲೂ ಮಿಕ್ಕಿದ ಭಗವದ್ಬಕ್ತರು ಪಾಲ್ಗೊಂಡಿದ್ದರು.
ನ.25 ರಂದು ಅಪರಾಹ್ನ 1.30ಕ್ಕೆ ಅವಭೃತ, 2.30 ರಿಂದ 4.30ರ ವರೆಗೆ ಲಾಲ್ಕಿ, ರಥುತ್ಸವ, 5ಕ್ಕೆ ಶೇಷ ತೀರ್ಥ ಸ್ನಾನ, 6ಕ್ಕೆ ಧ್ವಜಾವರೋಹಣ, 7 ರಿಂದ ಗಡಿ ಪ್ರಸಾದ ವಿತರಣೆ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಸೋಮವಾರ ಧ್ವಜಾರೋಹಣ ನೆರವೇರಿತ್ತು.




