HEALTH TIPS

ಯಾವುದೇ ಶೀರ್ಷಿಕೆಯಿಲ್ಲ

         ಯಕ್ಷಪಂಚಕ ಸಮಾರೋಪ-ಅಭಿನಂದನೆ
   ಪೆರ್ಲ: ಧನಾತ್ಮಕ ಚಿಂತನೆಗಳನ್ನು ವ್ಯಾಪಕಗೊಳಿಸುವ ನಿಟ್ಟಿನ ಪ್ರೇರಣದಾಯಿ ಚಟುವಟಿಕೆಗಳು ಸಮಾಜವನ್ನು ಮುನ್ನಡೆಸುತ್ತದೆ. ಸಮರ್ಥ ಗುರು ಮತ್ತು ನಿಖರ ಗುರಿಗಳನ್ನು ವ್ಯಕ್ತಿ, ಸಮಾಜಕ್ಕೆ ನಿದರ್ೇಶಿಸುವಲ್ಲಿ ಯಕ್ಷಗಾನ, ತತ್ ಸಂಬಂಧಿ ಸಂಘಟನೆಗಳು ಈ ಮಣ್ಣಿನ ಮಹತ್ವದ ಕೊಡುಗೆಗಳೆಂದು ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಅಭಿಪ್ರಾಯ ವ್ಯಕ್ತಪಡಿಸಿದರು.
   ಶ್ರೀದುಗರ್ಾಪರಮೇಶ್ವರಿ ಯಕ್ಷಗಾನ ಮಂಡಳಿ ಕೊಲ್ಲಂಗಾನ ಮತ್ತು ಶೇಣಿ ರಂಗಜಂಗಮ ಟ್ರಸ್ಟ್ ಕಾಸರಗೊಡು ಜಂಟಿಯಾಗಿ ಪೆರ್ಲ ಸಮೀಪದ ಇಡಿಯಡ್ಕ ಶ್ರೀದುಗರ್ಾಪರಮೇಶ್ವರಿ(ಉಳ್ಳಾಲ್ತಿ)ವಿಷ್ಣುಮೂತರ್ಿ ದೇವಸ್ಥಾನದಲ್ಲಿ ಭಾನುವಾರ ಆಯೋಜಿಸಿದ್ದ ಯಕ್ಷಪಂಚಕ  ಸಮಾರೋಪ ಮತ್ತು ಅಭಿನಂದನಾ ಸಮಾರಂಭದಲ್ಲಿ ಆಶೀರ್ವಚನಗೈದು ಅವರು ಮಾತನಾಡಿದರು.
   ಕರಾವಳಿಯಾದ್ಯಂತ ಮಾನವತೆಯನ್ನು ಭಿತ್ತುವಲ್ಲಿ ಯಕ್ಷಗಾನ ಕಲಾ ಕ್ಷೇತ್ರದ ಕೊಡುಗೆ ಅಪಾರವಾದುದು ಎಂದು ತಿಳಿಸಿದ ಅವರು, ಆ ಕ್ಷೇತ್ರದ ಸಾಧಕ ಮಹನೀಯರನ್ನು ಗುರುತಿಸಿ ಗೌರವಿಸುವುದು ಇತರರಿಗೆ ಸತ್ ಚಿಂತನೆಯ ಪ್ರೇರಣೆ ನೀಡುತ್ತದೆ ಎಂದು ತಿಳಿಸಿದರು. ಸಂಘಟನಾತ್ಮಕವಾಗಿ ವ್ಯಕ್ತಿಗಳನ್ನು ಜೋಡಿಸಿ ಮುನ್ನಡುಸುವುದು ಸವಾಲಾಗುತ್ತಿರುವ ಇಂದಿನ ಸಂದರ್ಭದಲ್ಲಿ ಕಲಾವಿದರನ್ನು, ಪೋಷಕರನ್ನು ಜೀವಸ್ನೇಹಿಯಾಗಿ ಕಟ್ಟಿಬೆಳೆಸುವ ಕೊಲ್ಲಂಗಾನ ಮೇಳದ ರೂವಾರಿ ಬ್ರಹ್ಮಶ್ರೀ ಗಣಾಧಿರಾಜ ಉಪಾಧ್ಯಾಯರ ಬಹುಮುಖಿ ವ್ಯಕ್ತಿತ್ವದ ಚತುರತೆ ಶ್ರೇಷ್ಠ ಸಾಧಕನ ಮಾದರಿ ಎಂದು ಪ್ರಶಂಸಿಸಿದರು.
   ಇಡಿಯಡ್ಕ ಕ್ಷೇತ್ರದ ಗೌರವಾಧ್ಯಕ್ಷ ಟಿ.ಆರ್.ಕೆ.ಭಟ್ ಅಧ್ಯಕ್ಷತೆ ವಹಿಸಿದ್ದರು. ಧಾಮರ್ಿಕ ಮುಖಮಡ ಸೀತಾರಾಮ ಕುಂಜತ್ತಾಯ ನಾರಂಪಾಡಿ, ಪೆರ್ಲ ಸತ್ಯನಾರಾಯಣ ಹೈಸ್ಕೂಲಿನ ಮುಖ್ಯೋಪಾಧ್ಯಾಯ ರಾಜೇಂದ್ರ ಬಿ, ಹಿರಿಯ ಕಲಾಪೋಷಕ ತತ್ವಮಸಿ ವೇಣುಗೋಪಾಲ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು.
   ಸಮಾತಂಭದಲ್ಲಿ ಬ್ರಹ್ಮಶ್ರೀ ಗಣಾಧಿರಾಜ ಉಪಾಧ್ಯಾಯ ಕೊಲ್ಲಂಗಾನರನ್ನು ವಿಶೇಷ ಆದರಾತಿಥ್ಯಗಳೊಂದಿಗೆ ಗಣ್ಯರ ಸಮಕ್ಷಮ ಅಭಿನಂದಿಸಲಾಯಿತು. ಭಾಗವತ ಸತೀಶ ಪುಣಿಚಿತ್ತಾಯ ಪೆರ್ಲ ಅಭಿನಂದನಾ ಭಾಷಣಗೈದರು. ಮೇಳದ ಪ್ರಬಂಧಕ ಮಹೇಶ್ ರನ್ನು ಗೌರವಿಸಲಾಯಿತು. ಶೇಣಿ ರಂಗಜಂಗಮ ಟ್ರಸ್ಟ್ ನಿದರ್ೇಶಕ ವೇಣುಗೋಪಾಲ ಶೇಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಮಾ. ಸಮೃದ್ದ ಪುಣಿಚಿತ್ತಾಯರ ಗಣೇಶ ಸ್ತಿತಿಯ ಭಾಗವತಿಕೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದಕ್ಕೂ ಮೊದಲು ಸಂಜೆ 4 ರಿಂದ ವಿದುಷಿಃ ಕಾವ್ಯಾ ಭಟ್ ಪೆರ್ಲ ಇವರ ಶಿವ್ಯವೃಂದದವರಿಂದ ಭರತನಾಟ್ಯ ವೈವಿಧ್ಯತೆ ಪ್ರದರ್ಶನಗೊಂಡಿತು. ಅಭಿನಂದನಾ ಸಮಾರಂಭದ ಬಳಿಕ ಶ್ರೀಕ್ಷೇತ್ರ ಕೊಲಂಗಾನ ಮೇಳದವರಿಂದ ಬೇಡರ ಕಣ್ಣಪ್ಪ-ಅಗ್ರಪೂಜೆ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.ಡಿ.13 ರಿಂದ ಶ್ರೀಕ್ಷೇತ್ರದಲ್ಲಿ ಕೊಲ್ಲಂಗಾನ ಮೇಳ ಮತ್ತು ಪಡ್ರೆಚಂದು ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ ಪೆರ್ಲದ ವಿದ್ಯಾಥರ್ಿಗಳಿಂದ ಪ್ರತಿನಿತ್ಯ ಯಕ್ಷಗಾನ ಪ್ರದರ್ಶನ ಯಶಸ್ವಿಯಾಗಿ ನಡೆದಿತ್ತು.
   



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries