ಹಿರಿಯ ಸಾಧಕರ ಸ್ಮರಣೆ ಸಂಸ್ಕೃತಿ-ರಾಜಾರಾಮ ಮಧ್ಯಸ್ಥ ಕುಂಜಾರು
ಬದಿಯಡ್ಕ: ಗ್ರಾಮೀಣ ಪ್ರದೇಶದಲ್ಲಿ ಜನಸಾಮಾನ್ಯರಿಗೆ ಸತ್ ಚಿಂತನೆಯ ಕಲಾ ಮಾಧ್ಯಮದ ಮೂಲಕ ಸಮಸ್ಕಾರ, ಸಮೃದ್ದಿಗೆ ಪ್ರೇರಣೆ ನೀಡಿದ ಮಹಾನ್ ಸಾಧಕರ ಸ್ಮರಣೆ ಯುವ ತಲೆಮಾರಿಗೆ ಆದರ್ಶಯುತ ಜೀವನದ ಮಾರ್ಗದಶರ್ಿಯಾಗಿದೆ.ಗಡಿನಾಡು ಕಾಸರಗೊಡು ಯಕ್ಷಗಾನ ಕ್ಷೇತ್ರದ ಸಮಗ್ರ ಪುನರುತ್ಥಾನ, ಪ್ರಸರಣ ಮತ್ತು ಸಂಸ್ಕಾರದ ಪೋಷಣೆಗೆ ಆದ್ಯ ಕೊಡುಗೆ ನೀಡಿದ ಪುಣ್ಯದ ಮಣ್ಣು ಎಂದು ಹಿರಿಯ ಶಿಕ್ಷಕ, ಕಲಾವಿದ ರಾಜಾರಾಮ ಮಧ್ಯಸ್ಥ ಕುಂಜಾರು ಅಭಿಪ್ರಾಯ ವ್ಯಕ್ತಪಡಿಸಿದರು.
ನೀಚರ್ಾಲು ಕುಮಾರಸ್ವಾಮಿ ಸಭಾ ಭವನದಲ್ಲಿ ಭಾನುವಾರ ಸಂಜೆ ಆಯೋಜಿಸಲಾಗಿದ್ದ ನೀಚರ್ಾಲಿನ ಹಿರಿಯ ಕಲಾಪೋಷಕ ದಿ. ಪರಮೇಶ್ವರ ಆಚಾರ್ಯರ 15ನೇ ಸಂಸ್ಮರಣಾ ಕಾರ್ಯಕ್ರಮ ಮತ್ತು ಸುರತ್ಕಲ್ಲಿನ ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ ನ 47ನೇ ಕಾರ್ಯಕ್ರಮದಲ್ಲಿ ಸಂಸ್ಮರಣಾ ಭಾಷಣಗೈದು ಅವರು ಮಾತನಾಡಿದರು.
ಯಕ್ಷಗಾನದ ಶಕಪುರುಷ ಶೇಣಿ ಗೋಪಾಲಕೃಷ್ಣ ಭಟ್ ರವರು ದಾಖಲಿಸಿದ ಹೊಸ ದೃಷ್ಟಿಕೋನದ ಚಿಂತನೆಗಳು ಸಮಗ್ರ ಯಕ್ಷಗಾನದ ಅಭ್ಯುದಯಕ್ಕೆ ನಾಂದಿ ಹಾಡಿ ಇಂದಿನ ಉಚ್ಚ್ರಾಯತೆಗೆ ಮೂಲ ಕಾರಣವಾಯಿತು. ಯಕ್ಷಗಾನದ ಮಟ್ಟಿಗೆ ಅತ್ಯಂತ ಕ್ಲಿಷ್ಟ ಕಾಲಘಟ್ಟದಲ್ಲಿ ಅದನ್ನು ಮುನ್ನಡೆಸಿದ ಶೇಣಿಯವರ ಸಮಕಾಲೀನರಾಗಿ ಪರಮೇಶ್ವರ ಆಚಾರ್ಯರರು ತಮ್ಮ ಮಿತಿಯೊಳಗಿನ ವ್ಯಾಪ್ತಿಯಲ್ಲಿ ಮುನ್ನಡೆದ ಹಾದಿ ಗಮನೀಯ ಎಂದು ನೆನಪಿಸಿದರು.
ಸಹಕಾರಿ ಇಲಾಖೆಯ ನಿವೃತ್ತ ಅಧಿಕಾರಿ ಕಲ್ಯ ಜನಾರ್ಧನ ಆಚಾರ್ಯ ಪೆಣರ್ೆ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕ, ಭಾರತ ಪರಿಕ್ರಮ ಯಾತ್ರೆಯ ಸಾಧಕ ಸೀತಾರಾಮ ಕೆದಿಲಾಯ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ, ರಾಷ್ಟ್ರದ ಭವ್ಯ ಸಾಂಸ್ಕ್ರತಿಕತೆ, ಬಹುಮುಖಿ ಚಿಂತನೆಗಳ ಜೀವನ ಕ್ರಮಗಳು ಸುಧೀರ್ಘ ಕಾಲ ಮುಮದುವರಿದು ಬರುವಲ್ಲಿ ಕಲಾಕ್ಷೇತ್ರದ ಕೊಡುಗೆಗಳು ತನ್ನದೇ ವಿಶಿಷ್ಟ ಪಾತ್ರ ನಿರ್ವಹಿಸಿವೆ ಎಂದು ತಿಳಿಸಿದರು. ವ್ಯಕ್ತಿ, ಸಮಾಜ, ಧರ್ಮ, ರಾಷ್ಟ್ರವನ್ನು ನಿಖರ ಚಿಂತನೆ, ಸನ್ಮಾರ್ಗದ ರೂಪಗಳಲ್ಲಿ ಕಟ್ಟಿಬೆಳೆಸುವಲ್ಲಿ ಯಕ್ಷಗಾನ ಸಹಿತ ದೇಶೀಯ ಕಲೆಗಳು ವ್ಯಾಪಕ ಪ್ರಮಾಣದಲ್ಲಿ ಕೊಡುಗೆ ನೀಡಿದ್ದು, ಹೊಸ ತಲೆಮಾರು ಸವಾಲುಗಳ ಮಧ್ಯೆಯೂ ಸ್ವೀಕರಿಸಿ ಮುನ್ನಡೆಸುತ್ತವೆ ಎಂದು ಆಶಯ ವ್ಯಕ್ತಪಡಿಸಿದರು. ಸಾಧಕರ, ಕೊಡುಗೆ ನೀಡಿದವರ ಸ್ಮರಣೆ ಸಂಸ್ಕಾರದ ಪ್ರತೀಕವಾಗಿದ್ದು, ಮುನ್ನಡೆಯುವಲ್ಲಿ ಪ್ರೇರಣೆ ನೀಡುತ್ತದೆ ಎಂದವರು ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ಹಿರಿಯ ಯಕ್ಷಗಾನ ಅರ್ಥಧಾರಿ ಸುಂದರಕೃಷ್ಣ ಮಧೂರುರವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.ಸುರತ್ಕಲ್ಲಿನ ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ನ ಪಿ.ವಿ.ರಾವ್ ಉಪಸ್ಥಿತರಿದ್ದರು. ನಿರಂಜನ ಆಚಾರ್ಯ ನೀಚರ್ಾಲು ಸ್ವಾಗತಿಸಿ, ಮೋಹನ ಆಚಾರ್ಯ ವಂದಿಸಿದರು. ವಿಷ್ಣು ಪ್ರಕಾಶ್ ಪೆರ್ವ ಅಭಿನಂದನಾ ಪತ್ರ ವಾಚಿಸಿದರು. ಬಾಲಕೃಷ್ಣ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಸೀತಾ ಪರಿತ್ಯಾಗ ಆಖ್ಯಾಯಿಕೆಯ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಪುರುಷೋತ್ತಮ ಭಟ್ ನಿಡುವಜೆ, ಕುದ್ರೆಕ್ಕೊಡ್ಲು ರಾಮಮೂತರ್ಿ, ವೇದವ್ಯಾಸ ರಾವ್ ಹಾಗೂ ಮುಮ್ಮೇಳದಲ್ಲಿ ಸರ್ಪಂಗಳ ಈಶ್ವರ ಭಟ್, ಎಂ.ಕೆ.ರಮೇಶ್ ಆಚಾರ್ಯ, ಶಂಭು ಶರ್ಮ ವಿಟ್ಲ, ಪಿ.ವಿ.ರಾವ್, ಚಂದ್ರಶೇಖರ ಕೊಡಿಪ್ಪಾಡಿ, ಸುಂದರಕೃಷ್ಣ ಮಧೂರು, ಬಾಲಕೃಷ್ಣ ಆಚಾರ್ಯ ನೀಚರ್ಾಲು ಭಾಗವಹಿಸಿ ವಿವಿಧ ಪಾತ್ರಗಳಿಗೆ ಜೀವ ತುಂಬಿದರು.