ಹಾಲು ಹರಿವ ನದಿ ಪಯಸ್ವಿನಿ ಪರಮ ಪಾವನೆ-ಪಲಿಮಾರು ಶ್ರೀ
ಮುಳ್ಳೇರಿಯ: ಜಗತ್ತಿನ ಜೀವಕೋಟಿಗಳ ನೆಮ್ಮದಿಯ ಬದುಕಿಗೆ ಸವಾಲಾಗುವ ಸಂದರ್ಭದಲ್ಲಿ ಜಗಜ್ಜನನಿ ಶ್ರೀದೇವಿ ಮೈದಳೆದು ಬಂದು ಪರಿಹಾರ ಒದಗಿಸುತ್ತಾಳೆ ಎಂಬ ನಂಬಿಕೆ ನಮ್ಮ ಪರಂಪರೆಯದ್ದು. ಕಾವುಗೋಳಿಯ ನಾರಾಯಣ ಪಂಡಿತರ ಶ್ರೀಮದ್ವ ವಿಜಯದಲ್ಲಿ ಪುಣ್ಯ ಪಾವನೆಯಾದ ಪಯಸ್ವಿನಿಯ ತಟದಲ್ಲಿ ಶ್ರೀಮಾತೆ ಅವತಾರಗೈದು ದುಷ್ಟ ಸಂಹಾರಗೈಯ್ಯುವಳೆಂಬ ಉಲ್ಲೇಖವಿದೆ ಎಂದು ಉಡುಪಿಯ ಶ್ರೀಪಲಿಮಾರು ಮಠಾಧೀಶ ವಿದ್ಯಾಧೀಶ ತೀರ್ಥ ಶ್ರೀಪಾದರು ಆಶೀರ್ವಚನಗೈದು ಆಶೀರ್ವದಿಸಿದರು.
ಪಯರ್ಾಯ ಪೂರ್ವಭಾವಿಯಾಗಿ ಸಂಚಾರದಲ್ಲಿರುವ ಶ್ರೀಗಳು ಕುಂಬಳೆ ಸೀಮೆಯ ಪ್ರಥಮ ವಂದ್ಯ ದೇವರಾದ ಸೀಮಾಧಿಪತಿ ಅಡೂರು ಶ್ರೀಮಹಾಲಿಂಗೇಶ್ವರ ಕ್ಷೇತ್ರಕ್ಕೆ ಭೇಟಿ ನಿಡಿ ಬಳಿಕ ಕುಂಟಾರು ಶ್ರೀ ಮಹಾವಿಷ್ಣು ಕ್ಷೇತ್ರಕ್ಕೆ ಭೇಟಿ ನೀಡಿ ಮದ್ವಾಚಾರ್ಯರು ಪುಣ್ಯಸ್ನಾನಗೈದ ಪಯಸ್ವಿನಿ ನದಿಯಲ್ಲಿ ಸ್ನಾನಗೈದು ಬಳಿಕ ನೆರೆದ ಭಕ್ತರನ್ನು ಹರಸಿ ಮಾತನಾಡಿದರು.
ಶ್ರೀಮನ್ನಾರಾಯಣನ ಆವಾಸ ಸ್ಥಾನವಾದ ಕ್ಷೀರ ಸಾಗರವನ್ನು ಪಯಸ್ವಿನಿ ಎಂದೂ ಕರೆಯುತ್ತಾರೆ. ಹಾಲು ಹರಿಯುವ ನದಿಯೆಂದೂ ಪಯಸ್ವಿನಿಗೆ ವಿಶೇಷ ಅರ್ಥವಿದ್ದು, ಈ ಕಾರಣದಿಂದ ಮಹತ್ವವಿರುವ ಪಯಸ್ವಿನಿಯ ತಟದಲ್ಲಿರುವ ಅಡೂರು ಮತ್ತು ಕುಂಟಾರು ಕ್ಷೇತ್ರ ವಿಶಿಷ್ಟತೆ ಹೊಂದಿದ ಪಾವನ ಕ್ಷೇತ್ರ ಎಂದು ಶ್ರೀಗಳು ಈ ಸಂದರ್ಭ ತಿಳಿಸಿದರು. 800 ವರ್ಷಗಳ ಹಿಂದೆ ಶ್ರೀಮದ್ವಾಚಾರ್ಯರು ರಾಷ್ಟ್ರದ ಉದ್ದಗಳ ಓಡಾಡಿದ್ದು, ಅವರ ಕೃತಿಗಳಲ್ಲಿ ಕೆಲವೇ ನದಿಗಳ ಉಲ್ಲೇಖ ಇದೆ. ಇದರಲ್ಲಿ ಪಯಸ್ವಿನಿ ನದಿಯೂ ಒಂದಾಗಿದ್ದು, ಈ ಕಾರಣದಿಂದ ಮಹಾತ್ಮರು ವಿಶೇಷವೆಂದು ಗುರುತಿಸಿರುವ ಪಯಸ್ವಿನಿ ಜೀವಕೋಟಿಗಳಿಗೆ ನೆಮ್ಮದಿ ನೀಡುವ ಭಗವಂತನ ಸಾನ್ನಿಧ್ಯದ ಸ್ವರ್ಗ ಸದೃಶ ತಟಾಕವೆಂದು ಶ್ರೀಗಳು ತಿಳಿಸಿದರು. ಪ್ರತಿಯೊಬ್ಬ ಸಹೃದಯಿ ಆರಾಧಕನಿಗೆ ಭಗವದ್ ಪ್ರೇರಣೆಯ ಮೂಲಕ ಶಾಂತಿ, ನೆಮ್ಮದಿಯ ಬದುಕು ಸಾಗುವಲ್ಲಿ ಪ್ರೇರಣಾತ್ಮಕ ವಾತಾವರಣ ನಿಮರ್ಾಣವಾಗಲಿ ಎಂದು ಹಾರೈಸಿದ ಅವರು, ಮುಂದಿನ ಪಯರ್ಾಯದ ಸಂದರ್ಭ ಪ್ರತಿಯೊಬ್ಬರೂ ಉಡುಪಿಗೆ ಭೇಟಿ ನೀಡಿ ಸಂಪ್ರಾಪ್ತಿಸಿ ಎಂದು ತಿಳಿಸಿದರು.
ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿ, ಎಸ್.ಎಂ.ಉಡುಪ ಕುಂಟಾರು, ದಿಲೀಪ್ ಕುಂಟಾರು, ಜಗದೀಶ್ ಮಾಸ್ತರ್ , ಕುಂಟಾರು ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಪದ್ಮನಾಭ ಭಟ್ ಕುಂಟಾರು, ಯಾತ್ರೆಯ ಸಂಯೋಜಕ, ಹಿಂದೂ ಐಕ್ಯವೇದಿಯ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಎಸ್.ಎಂ.ಉಡುಪ ಕುಂಟಾರು ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು. ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಉಪಸ್ಥಿತರಿದ್ದು, ಶ್ರೀಗಳನ್ನು ವೇದಸ್ಸರವಾಗಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.