ನಲ್ಕ ಶಾಲೆಗೆ ಕೊಡುಗೆ
ಪೆರ್ಲ: ಕುದ್ಕೋಳಿ ಸಿ. ಎ. ಅಬ್ದುಲ್ಲ ಅವರು ಹವ್ವಾ ಹಸನ್ ಫೌಂಡೇಶನ್ ವತಿಯಿಂದ ಇಲ್ಲಿನ ವಾಗ್ದೇವಿ ಕಿರಿಯ ಪ್ರಾಥಮಿಕ ಶಾಲೆಗೆ ಕೊಡುಗೆಯಾಗಿ ಒದಗಿಸಿದ ಕೊಳವೆ ಬಾವಿ ಹಾಗೂ ನೀರಾವರಿ ವ್ಯವಸ್ಥೆಯನ್ನು ಎಣ್ಮಕಜೆ ಗ್ರಾಮ ಪಂಚಾಯತು ಅಧ್ಯಕ್ಷೆ ರೂಪ ವಾಣಿ ಆರ್.ಭಟ್ ಇತ್ತೀಚೆಗೆ ಉದ್ಘಾಟಿಸಿದರು.
ಉಪಾಧ್ಯಕ್ಷ ಪುಟ್ಟಪ್ಪ, ಸ್ಥಾಯಿ ಸಮಿತಿಯ ಅಧ್ಯಕ್ಷರುಗಳಾದ ಉದಯ ಚೆಟ್ಟಿಯಾರ್, ಆಯಿಷಾ ಎ.ಎ.ಪೆರ್ಲ,ಬ್ಲಾಕ್ ಪಂಚಾಯತು ಸದಸ್ಯೆ ಸಫ್ರೀನಾ ಉಪಸ್ಥಿತರಿದ್ದು ಶುಭ ಹಾರೈಸಿದರು. ಗ್ರಾಮ ಪಂಚಾಯತು ಸದಸ್ಯ ಸತೀಶ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ಪೆರ್ಲ ನಾಲಂದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಆನೆಮಜಲು ವಿಷ್ಣು ಭಟ್ ಮುಖ್ಯ ಅತಿಥಿಗಳಾಗಿ ಭಾಗ ವಹಿಸಿದ್ದರು.ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕೃಷ್ಣ ನಾಯ್ಕ, ಮಾತೃ ಸಂಘದ ಅಧ್ಯಕ್ಷೆ ವಿನೋದ, ಅಬ್ಬಾಸ್ ನಲ್ಕ ಉಪಸ್ಥಿತರಿದ್ದರು. ದಾನಿ ಸಿ. ಎ. ಅಬ್ದುಲ್ಲ ಅವರಿಗೆ ಶಾಲಾ ವತಿಯಿಂದ ಸನ್ಮಾನ ಏರ್ಪಡಿಸಲಾಗಿತ್ತು. ಮುಖ್ಯ ಶಿಕ್ಷಕ ಶ್ರೀ ಪತಿ ಸ್ವಾಗತಿಸಿ, ಶಿಕ್ಷಕಿ ಪಾರ್ವತಿ ಕೈಲಾಸ ವಂದಿಸಿ ದರು. ಶಿಕ್ಷಕಿ ಉಷಾ ದೇವಿ ಕಾರ್ಯಕ್ರಮ ನಿರೂಪಿಸಿದರು.