ಅಯ್ಯಪ್ಪ ಸ್ವಾಮಿಗಳೊಂದಿಗೆ ಶ್ವಾನ ಸಂಗಾತಿ
ಬದಿಯಡ್ಕ : ಅಯ್ಯಪ್ಪ ವ್ರತಧಾರಿಗಳ ಪಾದಯಾತ್ರೆಯಲ್ಲಿ ಶ್ವಾನವೊಂದು ಜೊತೆಗೂಡಿ ಪ್ರಯಾಣಿಸುತ್ತಿರುವುದು ಕುತೂಹಲಕಾರಿಯಾಗಿ ಕಂಡುಬಂದಿದೆ.
ಡಿ.17ರಂದು 21 ಮಂದಿಯ ಅಯ್ಯಪ್ಪ ವೃತಧಾರಿಗಳ ತಂಡವೊಂದು ರಾಮಣ್ಣ ಗುರುಸ್ವಾಮಿಯವರ ನೇತೃತ್ವದಲ್ಲಿ ಬದಿಯಡ್ಕದಿಂದ ಪಾದಯಾತ್ರೆ ಹೊರಟಿತ್ತು. ಕೇರಳದ ಪ್ರಸಿದ್ಧ ತೀರ್ಥಕ್ಷೇತ್ರಗಳಲ್ಲೊಂದಾದ ತೃಕ್ಕನ್ನಾಡು ತ್ರಯಂಬಕೇಶ್ವರ ಕ್ಷೇತ್ರದಿಂದ ಶ್ವಾನವೊಂದು ಇವರ ಜೊತೆ ಸೇರಿತು. ಜೊತೆಯಲ್ಲೇ ಹೆಜ್ಜೆ ಹಾಕಿ ಮುಂದಿನ ವಿಶ್ರಾಂತಿ ಸ್ಥಳ ತಲುಪಿದಂತೆ ನಾಯಿಯೂ ವಿಶ್ರಾಂತಿಯನ್ನು ಪಡೆದುಕೊಂಡು ಇವರ ಜೊತೆ ಭಿಕ್ಷಾನ್ನವನ್ನೂ ಸ್ವೀಕರಿಸಿತು. ಇವರು ನೀಡಿದ ಆಹಾರವನ್ನು ಮಾತ್ರ ಸೇವಿಸಿಕೊಂಡು ಜೊತೆಯಲ್ಲೇ ಸಾಗುತ್ತಿತ್ತು. ಸ್ನಾನದ ಸಂದರ್ಭದಲ್ಲಿ ಸ್ನಾನಕ್ಕೂ ಹಿಂಜರಿಯುತ್ತಿರಲಿಲ್ಲ.
ಇದು ಶಬರಿಮಲೆಯ ವರೆಗೆ ಜೊತೆಗಿರುವ ಸಾಧ್ಯತೆ ಇದೆಯೆಂದು ಯಾತ್ರಾ ತಂಡದಲ್ಲಿರುವ ಬ್ಲಾಕ್ ಪಂಚಾಯತು ಸದಸ್ಯ ಅವಿನಾಶ್ ರೈ ತಿಳಿಸಿದ್ದಾರೆ. ಪುಣ್ಯ ದರ್ಶನ ಮುಗಿಸಿ ಹಿಂತಿರುಗುವ ವೇಳೆ ಪಂಪೆಯಲ್ಲಿ ಇದು ಕಾದು ಕುಳಿತಿದ್ದಲ್ಲಿ ಊರಿಗೆ ಕರೆದುಕೊಂಡು ಹೋಗುವ ಇಚ್ಚೆ ಅಯ್ಯಪ್ಪ ವ್ರತಧಾರಿಗಳದ್ದಾಗಿದೆ. ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿರುವ ಅಯ್ಯಪ್ಪ ವ್ರತಧಾರಿಗಳ ಜೊತೆಗಿನ ಈ ಮೂಕ ಪ್ರಾಣಿಯ ಪಾದಯಾತ್ರೆ ಅಯ್ಯಪ್ಪ ಭಕ್ತರಲ್ಲಿ ಸಂಚಲನ ಮೂಡಿಸಿದೆ.
ಕೋಟ್ಸ್:
ಕಳೆದ ಐದು ದಿನಗಳಿಂದ ಹಸಿವು ದಣಿವನ್ನು ನಮ್ಮೊಂದಿಗೆ ಹಂಚಿಕೊಂಡು ನಮ್ಮ ಜೊತೆ ಬರುವುದು ನೋಡುವಾಗ ಭಕ್ತಿಭಾವ ಉಕ್ಕಿ ಹರಿಯುತ್ತದೆ. ಮೂಕ ಪ್ರಾಣಿಯು ನಮ್ಮ ಜೊತೆಗಿದ್ದು ಈ ಪಾದಯಾತ್ರೆಯನ್ನು ಅವಿಸ್ಮರಣಿಯವನ್ನಾಗಿಸಿದೆ - ಅವಿನಾಶ್ ವಿ ರೈ, ಬ್ಲಾಕ್ ಪಂಚಾಯತ್ ಸದಸ್ಯ.