HEALTH TIPS

ಯಾವುದೇ ಶೀರ್ಷಿಕೆಯಿಲ್ಲ

             ದಿ.ಕೆ.ಕರುಣಾಕರನ್ ಪುಣ್ಯತಿಥಿ
    ಬದಿಯಡ್ಕ : ಹಿರಿಯ ನೇತಾರರ ಪರಿಶ್ರಮದ ಫಲವಾಗಿ ಕಾಂಗ್ರೆಸ್ಸ್ ಪಕ್ಷ ರಾಷ್ಟ್ರ ನಿಮರ್ಾಣದಲ್ಲಿ ಮಹತ್ತರ ಪಾತ್ರ ವಹಿಸಿತ್ತು. ಕಾಂಗ್ರೆಸ್ ಪಕ್ಷವನ್ನು ಕಟ್ಟಿಬೆಳೆಸಿದ ಮಹಾನ್ ನೇತಾರ, ರಾಷ್ಟ್ರ ಮಟ್ಟದ ನಾಯಕರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿ ಕೇಂದ್ರ ಸರಕಾರದ ಅನುದಾನಗಳು  ರಾಜ್ಯಕ್ಕೆ ಲಭಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ  ನೆಚ್ಚಿನ ನಾಯಕ ಕೆ.ಕರುಣಾಕರನ್ ಅವರು ನಮಗೆಲ್ಲ ಆದರ್ಶಪ್ರಾಯರಾಗಿದ್ದಾರೆ ಎಂದು ಕೇರಳ ಪ್ರದೇಶ್ ಕಾಂಗ್ರೆಸ್ಸ್ ಸಮಿತಿ(ಕೆಪಿಸಿಸಿ) ಕಾರ್ಯದಶರ್ಿ ಕೆ.ನೀಲಕಂಠನ್ ಅಭಿಪ್ರಾಯಪಟ್ಟರು.
ಅವರು ಶನಿವಾರ ಮಂಡಲ ಸಮಿತಿ ಹಾಗೂ ಕಾರಡ್ಕ ಬ್ಲಾಕ್ ಸಮಿತಿಯ ಆಶ್ರಯದಲ್ಲಿ ಬದಿಯಡ್ಕ ಕಾಂಗ್ರೆಸ್ ಪಕ್ಷದ ಮಂಡಲ ಕಛೇರಿಯಲ್ಲಿ ಹಿರಿಯ ನೇತಾರ ಕೆ.ಕರುಣಾಕರನ್ ಅವರ 7ನೇ ಪುಣ್ಯತಿಥಿಯ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿದರು.
   ಬ್ಲಾಕ್ ಅಧ್ಯಕ್ಷ ವಾರಿಜಾಕ್ಷನ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಕಾಂಗ್ರೆಸ್ಸ್ ಕಾರ್ಯದಶರ್ಿ ಕುಂಞಂಬು ನಾಯರ್, ನೇತಾರರಾದ ಪಿ.ಜಿ.ಚಂದ್ರಹಾಸ ರೈ, ಕೆ.ಎನ್. ಕೃಷ್ಣಭಟ್, ಕುಂಜಾರು ಮುಹಮ್ಮದ್ ಹಾಜಿ, ಜೋನಿ ಕ್ರಾಸ್ತಾ, ಶ್ಯಾಮಪ್ರಸಾದ ಮಾನ್ಯ, ಐತ್ತಪ್ಪ ಚೆನ್ನೆಗುಳಿ, ಜಯಶ್ರೀ, ಅನಿತಾ ಕ್ರಾಸ್ತಾ, ಪ್ರಸನ್ನ ಕುಮಾರಿ, ಜಗನ್ನಾಥ ರೈ, ಗಂಗಾಧರ ಗೋಳಿಯಡ್ಕ ಉಪಸ್ಥಿತರಿದ್ದರು. ಬ್ಲಾಕ್ ಸಮಿತಿ ಕಾರ್ಯದಶರ್ಿ ಖಾದರ್ ಮಾನ್ಯ ಸ್ವಾಗತಿಸಿ, ಕಾರಡ್ಕ ಮಂಡಲಾಧ್ಯಕ್ಷ ಕೆ.ಶಂಕರ ವಂದಿಸಿದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries