HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಕೋಪ-ದ್ವೇಷ ರಾಜಕಾರಣದ ವಿರುದ್ಧ ನಮ್ಮ ಹೋರಾಟ: ಕಾಂಗ್ರೆಸ್ ಅಧ್ಯಕ್ಷರಾಗಿ ರಾಹುಲ್ ಮೊದಲ ಭಾಷಣ
                 ಕಾಂಗ್ರೆಸ್ ಅಧ್ಯಕ್ಷರಾದ ಬಳಿಕ ಮೊದಲ ಭಾಷಣ ಮಾಡಿದ ಕಾಂಗ್ರೆಸ್ ಯುವರಾಜ
     ನವದೆಹಲಿ: ಕೋಪ, ಕೋಮು ದ್ವೇಷ ರಾಜಕಾರಣದ ವಿರುದ್ಧದ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷ ರಾಹುಲ್ ಗಾಂಧಿ ಶನಿವಾರ ಹೇಳಿದರು.
    ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ನೇರವಾಗಿ ಆಡಳಿತಾ ರೂಢ ಬಿಜೆಪಿ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ  ನಡೆಸಿದರು. ಈ ವೇಳೆ ಮಾತನಾಡಿದ ಅವರು, ಕೋಪ, ಕೋಮು ದ್ವೇಷ ರಾಜಕಾರಣದ ವಿರುದ್ಧದ ನಮ್ಮ ಹೋರಾಟ ಮುಂದುವರೆಯಲಿದೆ. ರಾಜಕೀಯ ಎನ್ನುವುದು ಜನರಿಗಾಗಿ.. ಆದರೆ ಇಂದಿನ ಬದಲಾದ ಪರಿಸ್ಥಿತಿಯಲ್ಲಿ  ರಾಜಕಾರಣ ಮತ್ತು ರಾಜಕೀಯ ಜನರ ಏಳಿಗೆಗಾಗಿ ಬಳಕೆಯಾಗುತ್ತಿಲ್ಲ. ಸಮಾಜದ ಕೆಲ ನಿದರ್ಿಷ್ಟ ಸಮುದಾಯ ಮತ್ತು ವರ್ಗದವರ ಏಳಿಗೆಗಾಗಿ ಬಳಕೆಯಾಗುತ್ತಿದೆ. ಜನರ ಏಳ್ಗೆಗಾಗಿ ಬಳಕೆಯಾಗಬೇಕಾದ ರಾಜಕೀಯ ಅವರ  ಸಮಸ್ಯೆಗಳಿಗೆ ಕಾರಣವಾಗುತ್ತಿದೆ.
    ಕಾಂಗ್ರೆಸ್ ಪಕ್ಷ ಹರಸಾಹಸ ಪಟ್ಟು ಭಾರತವನ್ನು 21ನೇ ಶತಮಾನಕ್ಕೆ ತಂದು ನಿಲ್ಲಿಸಿದ್ದರೆ ಇಂದಿನ ಪ್ರಧಾನಿ ಮೋದಿ ಅವರು ದೇಶವನ್ನು ಮತ್ತೆ ಮದ್ಯಕಾಲೀನ ಯುಗಕ್ಕೆ ತೆಗೆದು ಹೋಗಲು ಪಣತೊಟ್ಟಿದ್ದಾರೆ. ಇದಕ್ಕೆ ಈಗಾಗಲೇ  ನಿಮ್ಮ ಮುಂದೆಯೇ ಸ್ಪಷ್ಟ ಉದಾಹರಣೆಯೊಂದು ನಿಮ್ಮ ಮುಂದಿದೆ. ಬೆಂಕಿ ವ್ಯಾಪಿಸುವ ಮೊದಲೇ ಅದನ್ನು ನಂದಿಸುವುದು ಸುಲಭ..ಇದನ್ನೇ ನಾವು ಬಿಜೆಪಿ ನಾಯಕರಿಗೆ ಹೇಳುತ್ತಿದ್ದೇವೆ. ನೀವು ದೇಶವನ್ನು ಕೋಮು ದಳ್ಳುರಿದೆ  ದೂಡಿದರೆ ಖಂಡಿತಾ ದೇಶ ಮತ್ತೊಮ್ಮೆ ಹೊತ್ತಿ ಉರಿಯುತ್ತದೆ. ಬಿಜೆಪಿ ನಾಯಕ ಈ ದ್ವೇಷದ ರಾಜಕಾರಣವನ್ನು ತಡೆಯಬಲ್ಲ ಏಕೈಕ ಶಕ್ತಿ ಎಂದರೆ ಅದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಕಾಂಗ್ರೆಸ್ ಪಕ್ಷ ನೇತಾರರು  ಮಾತ್ರ. ಹೀಗಾಗಿ ಕೋಪ, ಕೋಮು ದ್ವೇಷ ರಾಜಕಾರಣದ ವಿರುದ್ಧದ ನಮ್ಮ ಹೋರಾಟ ಮುಂದುವರೆಯಲಿದೆ.
   ನಿಜ ಬಿಜೆಪಿ ಪಕ್ಷವನ್ನು ನಾವು ನಮ್ಮ ಸಹೋದರ-ಸಹೋದರಿ ಪಕ್ಷವಾಗಿರಬಹುದು. ಆದರೆ ಅವರ ಸಿದ್ಧಾಂತವನ್ನು ನಾವು ಎಂದೂ ಒಪ್ಪುವುದಿಲ್ಲ. ಅವರು ಪ್ರಶ್ನೆ ಮಾಡುವ ದನಿಯನ್ನು ಕ್ಷೀಣಿಸುತ್ತಿದ್ದಾರೆ. ನಾವು ಪ್ರಶ್ನೆ ಮಾಡುವ  ಮನೋಭಾವಕ್ಕೆ ಉತ್ತೇಜನ ನೀಡುತ್ತಿದ್ದೇವೆ. ನಾವು ಅವರಿಗೆ ಪ್ರಶ್ನೆ ಮಾಡಲು ಅವಕಾಶ ನೀಡುತ್ತಿದ್ದರೆ, ಅವರ ನಮ್ಮನ್ನು ಅವಮಾನಿಸಿದರೆ, ನಾವು ಅವರನ್ನು ಗೌರವಿಸುತ್ತಿದ್ದೇವೆ, ರಕ್ಷಿಸುತ್ತಿದ್ದೇವೆ. ಅವರು ಬೆಂಕಿ ಹಚ್ಚುತ್ತಿದ್ದರೆ ನಾವು  ಶಾಂತಿ ಸ್ಥಾಪನೆಗಾಗಿ ಹೋರಾಡುತ್ತಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries