ಉಳಿಸಿ ಕಸಿದ ಬಿಜೆಪಿ- ಮೋದಿ ಮೇನಿಯಾ ನಿಜವಾಯ್ತು-ಗುಜರಾತ್ನಲ್ಲಿ ಮತ್ತೆ ಅರಳಿದ ಕಮಲ, ಹಿಮಾಚಲ ಪ್ರದೇಶವೂ ಬಿಜೆಪಿ ತೆಕ್ಕೆಗೆ
ಹೊಸದಿಲ್ಲಿ: ಬಿಜೆಪಿ ಹಾಗೂ ಕಾಂಗ್ರೆಸ್?ಗೆ ಪ್ರತಿಷ್ಠೆಯ ಕಣವಾಗಿದ್ದ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್? ನೂತನ ಅಧ್ಯಕ್ಷ ರಾಹುಲ್ ಗಾಂಧಿ ಅವರ ನಡುವೆ ಮಹಾಸಮರವೆಂದೇ ಬಿಂಬಿತವಾಗಿದ್ದ ಗುಜರಾತ್? ಹಾಗೂ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿಜಯದ ಪತಾಕೆ ಹಾರಿಸಿದೆ.
ಗುಜರಾತ್ ವಿಧಾನಸಭೆಯ 182 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 99 ಸ್ಥಾನ, ಕಾಂಗ್ರೆಸ್? 80 ಸ್ಥಾನ ಹಾಗೂ ಇತರರು 03 ಸ್ಥಾನ ಗಳಿಸಿದ್ದಾರೆ. ಅಧಿಕಾರ ಹಿಡಿಯಲು 92 ಸ್ಥಾನಗಳು ಅಗತ್ಯವಿತ್ತು.
ಇತ್ತ ಹಿಮಾಚಲ ಪ್ರದೇಶದಲ್ಲಿ 68 ವಿಧಾನಸಭಾ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಬಿಜೆಪಿ 44 ಸ್ಥಾನ, ಕಾಂಗ್ರೆಸ್? 21 ಸ್ಥಾನ ಹಾಗೂ ಇತರರು 03 ಸ್ಥಾನ ಗಳಿಸಿದ್ದಾರೆ. ಸಕರ್ಾರ ರಚಿಸಲು 35 ಸ್ಥಾನಗಳ ಗುರಿ ತಲುಪಬೇಕಿತ್ತು.
ಎರಡೂ ರಾಜ್ಯಗಳ ಚುನಾವಣೆ ಮತ ಎಣಿಕೆ ಕಾರ್ಯ ಸೋಮವಾರ ಬೆಳಗ್ಗೆ 8 ಗಂಟೆಯಿಂದ ಆರಂಭವಾಗಿ ಮಧ್ಯಾಹ್ನದ ವೇಳೆಗೆ ಬಿಜೆಪಿ ಗೆಲುವಿನ ಹಾದಿಯಲ್ಲಿತ್ತು. ಬೆಳಗ್ಗೆಯಿಂದಲೇ ಬಿಜೆಪಿ ಮತ ಎಣಿಕೆಯಲ್ಲಿ ಮುನ್ನಡೆ ಸಾಧಿಸಿತ್ತು. ಸಂಜೆಯ ವೇಳೆಗೆ ಸಂಪೂರ್ಣ ಫಲಿತಾಂಶ ಪ್ರಕಟವಾಗಿದೆ.
ಬಿಜೆಪಿಯ ಗೆಲುವಿಗೆ ಪ್ರಧಾನಿ ಮೋದಿಯವರ ಆಡಳಿತ, ಸುಧಾರಣಾ ಕ್ರಮಗಳು ಹಾಗೂ ಕಾರ್ಯಕರ್ತರ ಪರಿಶ್ರಮ ಕಾರಣ ಎಂದು ಪಕ್ಷ ಹೇಳಿಕೊಂಡಿದೆ. ಮತ್ತೊಂದೆಡೆ ಕಾಂಗ್ರೆಸ್ ಈ ಗೆಲುವು ಮತಯಂತ್ರದಲ್ಲಿನ ಲೋಪ ಹಾಗೂ ಆಡಳಿತ ಯಂತ್ರದ ದುರ್ಬಳಕೆಯಿಂದ ದೊರತ್ತಿದ್ದು ಎಂದು ಟೀಕಿಸಿದೆ.
ಕನರ್ಾಟಕದಲ್ಲಿ ಮುಂಬರುವ ಚುನಾವಣೆಯಲ್ಲಿ ಗೆಲುವು ಸಾಧಿಸಲು ಇದು ತಳಹದಿ ಎಂದು ಬಿಜೆಪಿ ಬೀಗುತ್ತಿದ್ದರೆ, ಕಾಂಗ್ರೆಸ್ ಮಾತ್ರ ಪ್ರಧಾನಿ ಮೋದಿ ಆಟ ಇಲ್ಲಿ ನಡೆಯುವುದಿಲ್ಲ ಎಂದು ಹೇಳುತ್ತಿದೆ.
ಮತದಾನ ಎಂದು, ಹೇಗೆ?
ಗುಜರಾತಿನ ಮೊದಲ ಹಂತದ ಚುನಾವಣೆ ಡಿಸೆಂಬರ್ 9ರಂದು ನಡೆಯಿತು. ಒಟ್ಟು 89 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಚುನಾವಣೆಯಲ್ಲಿ 977 ಅಭ್ಯಥರ್ಿಗಳು ಕಣದಲ್ಲಿದ್ದರು. ಮೊದಲ ಹಂತದ ಚುನಾವಣೆಯಲ್ಲಿ ಶೇ. 68 ರಷ್ಟು ಮತದಾನವಾಗಿತ್ತು.
ಎರಡನೇ ಹಂತದ ಚುನಾವಣೆ ಡಿಸೆಂಬರ್? 14 ರಂದು ನಡೆಯಿತು. ರಾಜಧಾನಿ ಅಹಮದಾಬಾದ್? ಸೇರಿ ಒಟ್ಟು 14 ಜಿಲ್ಲೆಗಳ 93 ಕ್ಷೇತ್ರಗಳಲ್ಲಿ ಮತದಾನ ನಡೆಯಿತು. ಚುನಾವಣಾ ಕಣದಲ್ಲಿ ಒಟ್ಟು 851 ಅಭ್ಯಥರ್ಿಗಳು ಹಾಗೂ 2.22 ಕೋಟಿ ಮತದಾರರಿದ್ದರು. ಎರಡನೇ ಹಾಗೂ ಅಂತಿಮ ಹಂತದ ಮತದಾನದಲ್ಲಿ ಶೇ. 68.70 ರಷ್ಟು ಮತದಾನವಾಗಿತ್ತು.
2012 ರ ಗುಜರಾತ್ ಚುನಾವಣೆಯ ಫಲಿತಾಂಶ
2012 ರ ಗುಜರಾತ್? ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿ ಒಟ್ಟು 182 ಸ್ಥಾನಗಳಲ್ಲಿ 115 ಸ್ಥಾನಗಳನ್ನು ಗಳಿಸಿತ್ತು. ಕಾಂಗ್ರೆಸ್? 61 ಸ್ಥಾನ, ಗುಜರಾತ್? ಪರಿವರ್ತನಾ ಪಾಟರ್ಿ 2 ಸ್ಥಾನ, ನ್ಯಾಷನಲ್? ಕಾಂಗ್ರೆಸ್? ಪಾಟರ್ಿ 2 ಹಾಗೂ ಇತರೆ 1 ಸ್ಥಾನಗಳನ್ನು ಗಳಿಸಿದ್ದರು.
2012ರ ಹಿಮಾಚಲ ಪ್ರದೇಶ ಚುನಾವಣೆಯ ಬಲಾಬಲ
ಕಳೆದ ಬಾರಿ ನಡೆದ ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಅಮೋಘ ಗೆಲುವು ಸಾಧಿಸಿದ್ದ ಕಾಂಗ್ರೆಸ್? 68 ಸ್ಥಾನಗಳಲ್ಲಿ 36 ಸ್ಥಾನ ಗಳಿಸುವುದರೊಂದಿಗೆ ಅಧಿಕಾರದ ಗದ್ದುಗೆ ಏರಿತ್ತು. ಬಿಜೆಪಿ 26 ಸ್ಥಾನಗಳಿಗಷ್ಟೇ ತೃಪ್ತಿಪಟ್ಟಿತ್ತು.
ಆದರೆ, ಈ ಬಾರಿ 68 ಸ್ಥಾನಗಳಲ್ಲಿ ಬಹುತೇಕ 44 ಸ್ಥಾನಗಳಿಸಿರುವ ಬಿಜೆಪಿ ಕಳೆದ ಬಾರಿಗಿಂತ 18 ಸ್ಥಾನ ಮುಂದಿದೆ. ಇತ್ತ ಆಡಳಿತಾರೂಢ ಕಾಂಗ್ರೆಸ್ ಕಳೆದ ಬಾರಿಗಿಂತ 15 ಸ್ಥಾನಗಳನ್ನು ಕಳೆದುಕೊಂಡು? ತನ್ನ ಬತ್ತಳಿಕೆಯಿಂದ ಮತ್ತೊಂದು ರಾಜ್ಯವನ್ನು ಕಳೆದುಕೊಂಡಿದೆ. ನವೆಂಬರ್ 9 ರಂದು ಹಿಮಾಚಲ ಪ್ರದೇಶದ ಚುನಾವಣೆ ನಡೆದಿತ್ತು.