ಬಿಜೆಪಿಯನ್ನು ಬೆಂಬಲಿಸಿದ್ದಕ್ಕೆ ಎರಡು ರಾಜ್ಯದ ಜನತೆಗೆ ನವಿಸುವೆ: ಪ್ರಧಾನಿ ಮೋದಿ
ಜಿಎಸ್ಟಿ ಗೆಲುವು ಇಡೀ ದೇಶದ ಗೆಲುವು, ಜೈ ಜೈ ಗುಜರಾತ್, ಹಿಮಾಚಲದಲ್ಲಿ ಅಭಿವೃದ್ಧಿಗೆ ಜನ ಬೆಂಬಲಿಸಿದ್ದಾರೆ!
ನವದೆಹಲಿ: ತೀವ್ರ ಕುತೂಹಲ ಕೆರಳಿಸಿದ್ದ ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಎರಡು ರಾಜ್ಯಗಳಲ್ಲೂ ಬಿಜೆಪಿಗೆ ಸ್ಪಷ್ಟ ಬಹುಮತ ಸಿಕ್ಕಿದ್ದು ಈ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿಯನ್ನು ಬೆಂಬಲಿಸಿದ್ದಕ್ಕೆ ಎರಡು ರಾಜ್ಯದ ಜನತೆಗೆ ನಮಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಟ್ವೀಟ್ ನಲ್ಲಿ ಪ್ರಧಾನಿ ಮೋದಿ ಅಭಿವೃದ್ಧಿಗೆ ಗೆಲವು, ಗುಜರಾತ್ ಗೆ ಗೆಲುವು. ಜಿಎಸ್ ಟಿ ಗೆಲುವು ಇಡೀ ದೇಶದ ಗೆಲವು. ನನ್ನ ಹೆಮ್ಮೆಯ ಗುಜರಾತ್ ಗೆ ಜೈಜೈ. ಇನ್ನೊಂದೆಡೆ ಅಭಿವೃದ್ಧಿ ಕಾರ್ಯಗಳಿಂದ ಹಿಮಾಚಲ ಪ್ರದೇಶದಲ್ಲಿ ಬಿಜೆಪಿಗೆ ಗೆಲುವು ಸಿಕ್ಕಿದೆ. ಈ ಮೂಲಕ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಬಾವುಟ ಹಾರಿದೆ ಎಂದು ಟ್ವೀಟ್ ಮಾಡಿದ್ದಾರೆ.
ಗುಜರಾತ್ ವಿಧಾನಸಭೆ ಚುನಾವಣೆ ಮೋದಿಗೆ ಕಠಿಣ ಸವಾಲಾಗಿತ್ತು. ಗುಜರಾತ್ ಚುನಾವಣೆ ಫಲಿತಾಂಶ ದೇಶದಲ್ಲಿ ಮುಂದೆ ನಡೆಯಲಿದ್ದ ಚುನಾವಣೆಗಳಿಗೆ ದಾರಿ ದೀಪವಾಗಲಿತ್ತು. ಈ ಹಿನ್ನೆಲೆಯಲ್ಲಿ ತವರು ನೆಲದಲ್ಲಿ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಿದ ಚುಕ್ಕಾಣಿ ಹಿಡುವಂತೆ ಮಾಡುವುದು ಮೋದಿಗೆ ದೊಡ್ಡ ಸವಾಲಾಗಿತ್ತು.
ಇನ್ನು ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಕ್ಕಿರುವುದು ಬಿಜೆಪಿ ವಲಯದಲ್ಲಿ ಸಂತಸಕ್ಕೆ ಕಾರಣವಾಗಿದೆ.
ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಗಳಿಸಲು ಪಕ್ಷದ ಕೆಲ ಮಟ್ಟದಿಂದ ಕಾರ್ಯಕರ್ತರು ಉತ್ತಮ ಕೆಲಸ ಮಾಡಿರುವುದರಿಂದಲೇ ಪಕ್ಷ ಈ ಮಟ್ಟಿಗೆ ಜಯ ಗಳಿಸಲು ಸಾಧ್ಯವಾಗಿದೆ ಎಂದು ಕಾರ್ಯಕರ್ತರಿಗೆ ಶುಭಾಶಯ ತಿಳಿಸಿದ್ದಾರೆ.