HEALTH TIPS

ಯಾವುದೇ ಶೀರ್ಷಿಕೆಯಿಲ್ಲ

      ಸವಾಕ್ ಪ್ರಯತ್ನದ ಫಲವಾಗಿ ಯಕ್ಷಗಾನ ಸಂಸ್ರ್ಕರತಿ ಇಲಾಖೆಯ ಪಟ್ಟಿಗೆ-ಜಿ.ವಿಶಾಖನ್
    ಕುಂಬಳೆ: ಕರಾವಳಿಯ ಹೆಮ್ಮೆಯ ಕಲಾ ಪ್ರಕಾರವಾದ ಯಕ್ಷಗಾನವನ್ನು ಕೇರಳ ಸಂಸ್ಕ್ರತಿ ಇಲಾಖೆಯ ಇತರ 36 ಅನುಮೋದಿತ ಕಲೆಗಳೊಂದಿಗೆ ಸೇರ್ಪಡೆಗೊಳಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ಸ್ಟೇಜ್ ಆಟರ್ಿಸ್ಟ್ ಆಂಡ್ ವರ್ಕಸರ್್ ಅಸೊಸಿಯೇಶನ್ ಕೇರಳ(ಸವಾಕ್) ರಾಜ್ಯಾಧ್ಯಕ್ಷ ಜಿ.ವಿಶಾಖನ್ ತಿಳಿಸಿದರು.
   ಸವಾಕ್ ಕಾಸರಗೊಡು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಶುಕ್ರವಾರ ಸಂಜೆ ಕಾಸರಗೊಡು ಎಸ್ವಿಟಿ ರಸ್ತೆಯಲ್ಲಿರುವ ಜಿಲ್ಲಾ ಕಾಯರ್ಾಲಯದಲ್ಲಿ ನಡೆದ ಸಾಂಸ್ಕೃತಿಕ ಸಮಾವೇಶದ ವಿಶೇಷ ಪೂರ್ವಭಾವೀ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
   ಕೇರಳ ಸರಕಾರ ಈಗಾಗಲೇ ಅಂತಿಮಗೊಳಿಸಿರುವ ಕಲಾವಿದರ ಕ್ಷೇಮನಿಧಿ ಯೋಜನೆಯು ಕಾಸರಗೊಡು ಜಿಲ್ಲೆಯ ಮಟ್ಟಿಗೆ ಕಾರ್ಯಗತಗೊಳ್ಳದಿರುವುದರಿಂದ ಸವಾಕ್ನ ವಿಶೇಷ ಬೇಡಿಕೆಯ ಮೇರೆಗೆ ಮುಂದಿನ 6 ತಿಂಗಳುಗಳಿಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದ ಅವರು ಅರ್ಹ ಎಲ್ಲಾ ಕಲಾವಿದರಿಗೆ, ಕಲೆ ಸಂಬಂಧಿ ಕಾರ್ಯನಿರ್ವಹಿಸುವವರಿಗೆ ಸವಾಕ್ ಕ್ಷೇಮ ನಿಧಿಯ ಮೂಲಕ ನೆರವು ನೀಡುವುದಾಗಿ ತಿಳಿಸಿದರು. ಸಮಾಜದ ಇತರ ವಿಭಾಗಗಳಂತೆ ಕಲಾವಿದರೂ ಒಕ್ಕೂಟ ವ್ಯವಸ್ಥೆಯಡಿ ಒಗ್ಗೂಡಿ ಸುಭದ್ರ ಸಂಘಟನೆಯಾಗಿ ಮುಂದುವರಿಯುತ್ತಿದೆ ಎಂದು ಅವರು ಈ ಸಂದರ್ಭ ತಿಳಿಸಿದರು.
   ಸವಾಕ್ ಜಿಲ್ಲಾ ಅಧ್ಯಕ್ಷ ಎಂ ಉಮೇಶ್ ಸಾಲ್ಯಾನ್ ಕಾಸರಗೋಡು ಅಧ್ಯಕ್ಷತೆ ವಹಿಸಿದ್ದರು. ಸವಾಕ್ ಜಿಲ್ಲಾ ಗಟಕದ ಮುಖಂಡರಾದ ಮಧುಸೂದನ ಬಲ್ಲಾಳ್ ನಾಟೆಕಲ್ಲು, ಉಮೇಶ್ ಮಾಸ್ತರ್ ಮಾಸ್ಟರ್ ಫ್ಯೂಶನ್, ಗೋವಿಂದ ಭಟ್ ಬಳ್ಳಮೂಲೆ, ವೀ.ಜಿ.ಕಾಸರಗೋಡು, ಗೋವಿಂದ ಮಾರಾರ್, ಸುರೇಶ್ ಬೇಕಲ್, ಚಂದ್ರಹಾಸ ಶೆಟ್ಟಿ, ವಾಮನ ಆಚಾರ್ಯ ಬೋವಿಕ್ಕಾನ, ರಘುರಾಮ ಮಲ್ಲ, ಅಜರ್ುನನ್ ತಾಯಿಲಂಗಾಡಿ, ಬಾಲಕೃಷ್ಣ ರೈ ಮುಳ್ಳೇರಿಯ, ವಿನು ಬೋವಿಕ್ಕಾನ, ಮನೋಜ್ ಪೊಯಿನಾಚಿ, ಶ್ರೀಲತಾ, ಸುಜಾತಾ ಮೊದಲಾದವರು ಉಪಸ್ಥಿತರಿದ್ದರು.
   ಸಭೆಯಲ್ಲಿ ಸವಾಕ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಮುಂದಿನ ಜನವರಿ 20 ರಂದು ಕಾಸರಗೊಡಿನಲ್ಲಿ ನಡೆಯಲಿರುವ ಸಾಂಸ್ಕೃತಿಕ ಸಮಾವೇಶ ನಿರ್ವಹಣೆಯ ಬಗ್ಗೆ ವಿಸ್ಕೃತ ಚಚರ್ೆ ನಡೆಯಿತು. ಸವಾಕ್ ಜಿಲ್ಲಾ ಕಾರ್ಯದಶರ್ಿ  ತುಳಸೀಧರನ್ ಸ್ವಾಗತಿಸಿ, ವೀ.ಜಿ.ಕಾಸರಗೋಡು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries