HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               ಬೆದ್ರಡ್ಕ ದೈವಸ್ಥಾನ ಅಭಿವೃದ್ಧಿ ಸಮಿತಿಯ ಯೋಜನೆಗಳಿಗೆ ಚಾಲನೆ
           ಧಾಮರ್ಿಕ ಕೇಂದ್ರಗಳ ಅಭಿವೃದ್ಧಿ ಜೀವನದ ಮಹತ್ಕಾರ್ಯ: ಉಳಿಯತ್ತಾಯ ವಿಷ್ಣು ಅಸ್ರ
  ಕುಂಬಳೆ: ಧಾಮರ್ಿಕ ಕೇಂದ್ರಗಳ ಅಭಿವೃದ್ಧಿಯು ಮನುಷ್ಯ ಜೀವನದಲ್ಲಿ ಬರುವ ಸತ್ಕಾರ್ಯಗಳಲ್ಲಿ ಅತೀ ಮಹತ್ವದ್ದು ಹಾಗೂ ಇದರಿಂದ ಪುಣ್ಯಸಂಪಾದನೆಯಾಗುತ್ತದೆ. ಇದಕ್ಕೆ ಸರ್ವ ಭಕ್ತಜನರ ಸೇವಾ ಮತ್ತು ಸಮರ್ಪಣಾ ಮನೋಭಾವನೆಯಿಂದ ಸಂಘಟಿತರಾಗಿ ಪ್ರಯತ್ನಿಸಬೇಕು ಎಂದು ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ ಅವರು ಕರೆನೀಡಿದರು.
   ಅವರು  ಬೆದ್ರಡ್ಕ ಶ್ರೀಪೂಮಾಣಿ ಕಿನ್ನಿಮಾಣಿ ದೈವಸ್ಥಾನದಲ್ಲಿ  ಶ್ರೀ ದೈವಸ್ಥಾನದ ಅಭಿವೃದ್ಧಿ ಸಮಿತಿಯ ಯೋಜನೆಗಳಿಗೆ  ಚಾಲನೆ ನೀಡುವ ಸಲುವಾಗಿ ನಿಧಿ ಸಂಗ್ರಹ ಅಭಿಯಾನದ ವಿಜ್ಞಾಪನಾ ಪತ್ರ ಹಾಗೂ ಕೂಪನ್ ನನ್ನು ಶುಕ್ರವಾರ ರಾತ್ರಿ ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.
    ಇಂದಿನ ದಿನಗಳಲ್ಲಿ  ದೈವ-ದೇವರುಗಳು ನಂಬಿದವರಿಗೆ ಇಷ್ಠಾರ್ಥವನ್ನು ಕರುಣಿಸಿ ಸಲಹುವ ವೇಳೆ ನಾವೂ ಕೂಡಾ ಈ  ಶ್ರದ್ಧಾ ಕೇಂದ್ರಗಳನ್ನು ಸಂರಕ್ಷಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವ ಅನಿವಾರ್ಯತೆಯಿದೆ. ಬೆದ್ರಡ್ಕ ಕ್ಷೇತ್ರವು ತನ್ನದೇ ಆದ ವಿಶಾಲ ಭೂಮಿಯಲ್ಲಿ   ಕಂಗೊಳಿಸುತ್ತಿದೆ. ಇಲ್ಲಿ ನಡೆಯುವ ಎಲ್ಲ ಅಭಿವೃದ್ಧಿ ಕಾರ್ಯಗಳು ಅತಿ ಶೀಘ್ರದಲ್ಲಿ ನೆರವೇರಲು ರಾಜನ್ ದೈವಗಳಾದ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಗಳು ಸರ್ವರಿಗೂ ಸಕಲ ಶಕ್ತಿಯನ್ನು ನೀಡಿ ಅನುಗ್ರಹಿಸಲಿ ಎಂದು ಶ್ರೀ ದೈವಸ್ಥಾನದ ತಂತ್ರಿವರ್ಯರೂ ಅಗಿರುವ ಉಳಿಯತ್ತಾಯರು ಹಾರೈಸಿದರು.
   ಇದೇ ವೇಳೆ ಅವರು ಭಕ್ತಜನರಿಂದ ಶ್ರೀ ದೈವಸ್ಥಾನಕ್ಕೆ ಕೊಡಮಾಡಿದ ಬೆಳಿಗ್ಗೆ ಹಾಗೂ ಸಂಜೆ  ದೇವರ ನಾಮ ಹಾಡುವ ಧ್ವನಿವರ್ಧಕ ವ್ಯವಸ್ಥೆ ಹಾಗೂ ಭಕ್ತಜನರಿಗೆ ದೈವಸ್ಥಾನದ ಒಳಗೆ ಶುಚಿಯಾಗಿ ಪ್ರವೇಶಿಸಲು ಕೈಕಾಲು ತೊಳೆಯುವ ನಳ್ಳಿ ನೀರಿನ ವ್ಯವಸ್ಥೆಗಳಿಗೆ ಚಾಲನೆ ನೀಡಿದರು.
   ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೋಟೆಕುಂಜ ರವೀಂದ್ರ ಆಳ್ವ್ವ ಕಂಬಾರು ಅವರು  ಮಾತನಾಡಿ ಶ್ರೀ ದೈವಸ್ಥಾನದ ಭೂಮಿಯ ಪವಿತ್ರವಾಗಿ ಸಂರಕ್ಷಿಸಲು ಇದೀಗ ಇರುವ ಸುತ್ತು ಬೇಲಿಯ ನವೀಕರಣ, ಧಾಮರ್ಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಸುವ್ಯವಸ್ಥಿತವಾದ ರಂಗ ವೇದಿಕೆ, ಇದೀಗ ಇಲ್ಲಿ ನಾಟ್ಯ ಅಭ್ಯಸಿಸುವ ಮಕ್ಕಳಿಗಾಗಿ ತರಬೇತಿ ಕಲಾಮಂದಿರ, ಸಭಾಭವನ,  ಶ್ರೀ ಬೀನರ್ಾಳ್ವ ಮತ್ತು ಶ್ರೀ ದೂಮಾವತಿ ದೈವಗಳು ಕ್ಷೇತ್ರಕ್ಕೆ ಪ್ರವೇಶಿಸುವ ಸ್ವಾಗತ ಗೋಪುರ, ಪಾಪೆಬಂಡಿ ಪ್ರದಕ್ಷಿಣೆ ಬರುವ ಹಾದಿಗೆ ಕಲ್ಲು ಹಾಸುವುದು ಹೀಗೆ ವ್ಯವಸ್ಥಿತವಾದ ಹಲವು ಯೋಜನೆಗಳನ್ನು ಅಭಿವೃದ್ಧಿ ಸಮಿತಿಯು ಮುಂದಿನ ದಿನಗಳಲ್ಲಿ ಜಾರಿಗೊಳಿಸಲಿದೆ. ಈ ಎಲ್ಲ ಯೋಜನೆಗಳನ್ನು ಸರ್ವರ ಸಹಕಾರದಿಂದ ನಡೆಸುವ ಸಲುವಾಗಿ ಅಭಿವೃದ್ಧಿ ನಿಧಿ ಸಂಗ್ರಹ ಅಭಿಯಾನವನ್ನು ಆರಂಭಿಸಲಾಗಿದೆ. ಈ ಮಹತ್ತರವಾದ ಯೋಜನೆಯ ಸಾಕಾರಕ್ಕೆ ಊರ ಹಾಗೂ ಪರವೂರ ಎಲ್ಲರೂ ಸಹಕರಿಸಬೇಕು ಎಂದು ಅವರು ವಿನಂತಿಸಿದರು.
   ಸಮಾರಂಭದಲ್ಲಿ  ಸಲಹಾ ಮಂಡಳಿಯ ಮುಖ್ಯಸ್ಥರಾದ ಬೆದ್ರಡ್ಕ ಶಿಲ್ಪಿ ರಮೇಶ ಕಾರಂತ, ಮೊಕ್ತೇಸರ ಉಡುವಣ್ಣಾಯ ಅನಂತವಿಷ್ಣು ಹೇರಳ, ಕೋಟೆಕುಂಜ ಪ್ರಭಾಕರ ಆಳ್ವ, ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ವಾಸುದೇವ ಕಾರಂತ ಉಜಿರೆಕೆರೆ, ಸುಬ್ರಹ್ಮಣ್ಯ ಕಾರಂತ ದೇಶಮಂಗಲ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು, ಸದಸ್ಯರು, ಗ್ರಾಮಗಳ ಮುಖಂಡರು, ಮಾತೆಯರು ಸಕ್ರೀಯವಾಗಿ ಭಾಗವವಹಿಸಿದ್ದರು. ಶ್ರೀ ದೈವಸ್ಥಾನದ ಆಡಳಿತ ಮೊಕ್ತೇಸರ ಕೋಟೆಕುಂಜ ಮಂಜುನಾಥ ರೈ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಮಿತಿ ಉಪಾಧ್ಯಕ್ಷ ಪದ್ಮನಾಭ ಬಳ್ಳೂರು ವಂದಿಸಿದರು. ಸಮಿತಿ ಕಾರ್ಯದಶರ್ಿ ಲೋಕೇಶ್ ಎಂ.ಬಿ ಆಚಾರ್ ಕಂಬಾರು ಕಾರ್ಯಕ್ರಮ ನಿರೂಪಿಸಿದರು. ನಂತರ ಸಂಕ್ರಮಣದ ಅಂಗವಾಗಿ ನಡೆಯುವ ಕಟ್ಟೆಪೂಜೆ, ಅಪ್ಪಸೇವೆ ಹಾಗೂ ದೈವಗಳ ಪೂಜಾ ಕಾರ್ಯಕ್ರಮಗಳು ನಡೆಯಿತು. ಅಭಿವೃದ್ಧಿ ನಿಧಿಸಂಗ್ರಹ ಅಭಿಯಾನವನ್ನು ಸಮಪರ್ಕವಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಸಮಿತಿ, ಮಹಿಳಾ ಸಮಿತಿ, ಗ್ರಾಮಗಳ ಮುಖಂಡರ, ಸಂಘಸಂಸ್ಥೆಗಳ ವಿಶೇಷ ಸಭೆಯನ್ನು ಶ್ರೀ ದೈವಸ್ಥಾನದಲ್ಲಿ  ಡಿಸೆಂಬರ್ 24ರಂದು ಭಾನುವಾರ ಬೆಳಿಗ್ಗೆ 10.30ಕ್ಕೆ ಆಯೋಜಿಸಲಾಗಿದೆ.
 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries