ಕುಂಜತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಭೂತ ಬಲಿ ಉತ್ಸವ ಸಂಪನ್ನ
ಮಂಜೇಶ್ವರ: ಕುಂಜತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಮೂರು ದಿನಗಳ ಭೂತಬಲಿ ಉತ್ಸವ ಶನಿವಾರ ಸಂಪನ್ನಗೊಂಡಿತು.
ಆಡಳಿತ ಮೊಕ್ತೇಸರಾದ ವಿ.ರವೀಂದ್ರ ರಾವ್, ಪವಿತ್ರಪಾಣಿ ಕೆ ಎಸ್ ಕೃಷ್ಣ ಭಟ್ , ಪಿ ಕೆ ರವೀಂದ್ರ ಶೆಟ್ಟಿ, ಕೆ ವಿಶ್ವನಾಥ ಶೆಟ್ಟಿ ಹಾಗೂ ಸುರೇಶ್ ಶೆಟ್ಟಿ ಯವರ ನೇತೃತ್ವದಲ್ಲಿ ಗುರುವಾರ ಪ್ರಾರ್ಥನೆ , ನಿತ್ಯಪೂಜೆ ಮತ್ತು ಶ್ರೀ ಮಹಾಗಣಪತಿ ದೇವರಿಗೆ ರಂಗಪೂಜೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರಕಿತ್ತು. ಬಳಿಕ ಶ್ರೀ ಬಾಲಕೃಷ್ಣ ಮಾಸ್ಟರ್ ಮಂಜೇಶ್ವರ ಮತ್ತು ಬಳಗದವರಿಂದ ನಾಟ್ಯ ಸಮ್ಮೋಹನಂ 2017 ನಡೆಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀ ರಾಮಚಂದ್ರ ಸ್ವಾಮೀಜಿ ಕಪಿಲಾಶ್ರಮ, ಉತ್ತರಕಾಶಿ ಆಶೀರ್ವಚನ ನೀಡಿದರು. ಸಭಾ ಕಾರ್ಯಕ್ರಮದಲ್ಲಿ ಚಿತ್ರ ನಟಿ ಅಮೂಲ್ಯ , ಡಾ. ಸುಧೀರ್ ಹೆಗ್ಡೆ , ಡಾ. ಲಕ್ಷ್ಮೀಶ ಕೊಡ್ಗಿ, ಪುರುಷೋತ್ತಮ ಭಂಡಾರಿ ಅಡ್ಯಾರ್ , ಲಕ್ಷ್ಮಣ ಕುಂಬಳೆ, ಜಯಶೀಲ ಶೆಟ್ಟಿ ಹಾಗೂ ಈಶ್ವರ ಪೂಜರಿ ಬೇಕೂರು ಮೊದಲಾದವರು ಮುಖ್ಯ ಅತಿಥಿಗಳಾಗಿದ್ದರು.
ಬಳಿಕ ಶುಕ್ರವಾರ ಶ್ರೀದೇವರ ಬಯ್ಯನ ಬಲಿ ಹೊರಟ ಬಳಿಕ ರಾತ್ರಿ ಉದ್ಯಾವರ ಶ್ರೀ ಭವಗವತೀ ಅಮ್ಮನವರ ಭೇಟಿ ಉತ್ಸವ ನಡೆದು ವಸಂತ ಕಟ್ಟೆ ಪೂಜೆ, ರಂಗಪೂಜೆ ಪ್ರಸಾದ ವಿತರಣೆ ನಡೆಯಿತು. ಬಳಿಕ ಕುಂಜತ್ತೂರು ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ಮಾಯಾಮೃಗ ಯಕ್ಷಗಾನ ತಾಳಮದ್ದಳೆ, ನೃತ್ಯ ವೈವಿಧ್ಯ ಹಾಗೂ ಶ್ರೀ ವನದುರ್ಗ ಪ್ರಸಾದಿತ ದಶಾವತಾರ ಯಕ್ಷ್ಜಗಾನ ಮಂಡಳಿ ದೆಂತಡ್ಕ ಬಂಟ್ವಾಳ ಇವರಿಂದ " ದ್ರೌಪದಿ ವಸ್ತ್ರಾಪಹಾರ - ಅಬ್ಬರದ ಬಬ್ಬರ್ಯ " ಎಂಬ ಯಕ್ಷಗಾನ ಪ್ರಸಂಗದ ಪ್ರದರ್ಶನ ನಡೆಯಿತು.
ಶನಿವಾರ ಬೆಳಗ್ಗಿನ ಬಲಿ ಹೊರಟ ಬಳಿಕ ದರ್ಶನ ಬಲಿ ಹಾಗೂ ಉದ್ಯಾವರ ಶ್ರೀ ದೈವಗಳ ಭೇಟಿ ಮತ್ತು ಬಟ್ಲು ಕಾಣಿಕೆ, ಮಹಾಪ್ರಸಾದ ವಿತರಣೆ ನಡೆಯಿತು. ಬಳಿಕ ಮಹಾ ಮಂತ್ರಾಕ್ಷತೆ, ಶ್ರೀ ನಾಗದೇವರಿಗೆ ಮತ್ತು ಶ್ರೀ ರಕ್ತೇಶ್ವರಿ ಅಮ್ಮನವರಿಗೆ ತಂಬಿಲ ಸೇವೆ ಹಾಗೂ ಮಹಾ ಪೂಜೆ ಮತ್ತು ಪ್ರಸಾದ ವಿತರಣೆಯೊಂದಿಗೆ ಮೂರು ದಿನಗಳ ಕಾಲ ವಿಜೃಂಭಣೆಯಿಂದ ಜರಗಿದ ಭೂತಬಲಿ ಉತ್ಸವ ಶನಿವಾರ ಸಂಪನ್ನಗೊಂಡಿತು.