ಕುಂಟಾರು ಅಯ್ಯಪ್ಪ ದೀಪೋತ್ಸವ ಸಮಾರೋಪ
ಮುಳ್ಳೇರಿಯ: ಕುಂಟಾರು ಶ್ರೀರಾಮನಗರದ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ 7ನೇ ವರ್ಷದ ಪ್ರತಿಷ್ಠಾ ವಾಷರ್ಿಕೋತ್ಸವ ಮತ್ತು ಅಯ್ಯಪ್ಪ ದೀಪೋತ್ಸವ ಶುಕ್ರವಾರ ಮುಕ್ತಾಯಗೊಂಡಿತು.
ಕಾರ್ಯಕ್ರಮದ ಅಂಗವಾಗಿ ಗಣಪತಿ ಹೋಮ, ಲಕ್ಷ್ಮೀಪೂಜೆ, ನಿಕುಂಭ ಸಮರ್ಪಣೆ, ಪವಮಾನಪೂಜೆ, ದಂಪತಿ ಆರಾಧನೆ ನಡೆಯಿತು. ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಇವರು ನೂತನವಾಗಿ ನಿಮರ್ಿಸಿರುವ ಶಾಶ್ವತ ಚಪ್ಪರವನ್ನು ಲೋಕಾರ್ಪಣೆ ಮಾಡಿದರು. ಮನೀಶ್ ಪಣಿಕ್ಕರ್ ಶ್ರೀಶೈಲ ನಾರಂಪಾಡಿ ಇವರಿಂದ ತಾಯಂಬಕ ಸ್ಥಳೀಯ ಅಂಗನವಾಡಿ ಮಕ್ಕಳಿಂದ ಮತ್ತು ಸ್ಥಳೀಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು ಕುಂಟಾರು ಎಯುಪಿ ಶಾಲೆಯ ಮಕ್ಕಳಿಂದ. ಜಿಲ್ಲಾ ಕಲೋತ್ಸವದಲ್ಲಿ ಎ ಗ್ರೇಡ್ನೊಂದಿಗೆ ದ್ವಿತೀಯ ಸ್ಥಾನ ಪಡೆದ ನಾಟಕದ ಪ್ರದರ್ಶನ ನಡೆಯಿತು. ಕುಂಟಾರು ಶ್ರೀ ಕ್ಷೇತ್ರದಿಂದ ಹೊರಟ ಉಲ್ಪೆ ಮೆರವಣಿಗೆ ಚೆಂಡೆಮೇಳ, ನಾಸಿಕ್ ಬ್ಯಾಂಡ್, ಅಯ್ಯಪ್ಪ ವ್ರತಧಾರಿಗಳ ಕುಣಿತದೊಂದಿಗೆ ಭಜನಾ ಮಂದಿರ ತಲಪಿತು. ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು.