ಕಾಟುಕುಕ್ಕೆ ಎನ್ಸಿಸಿ ಘಟಕದಿಂದ ಸ್ವಚ್ಛತಾ ಆಂದೋಲನ
ಪೆರ್ಲ: ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯ ಹೈಯರ್ ಸೆಕಂಡರಿ ಶಾಲೆಯ ಎನ್ಸಿಸಿ ಘಟಕದ ಆಶ್ರಯದಲ್ಲಿ ಎನ್ಸಿಸಿ ದಿನಾಚರಣೆಯ ಅಂಗವಾಗಿ ಸ್ವಚ್ಛತಾ ಆಂದೋಲನ ನಡೆಯಿತು.
ಎನ್ಸಿಸಿ ಕೆಡೆಟ್ಗಳು ಪರಿಸರ ಶುಚೀಕರಿಸಿ ವ್ಯಾಪಾರಿಗಳಿಗೆ ತ್ಯಾಜ್ಯ ವಿಲೇವಾರಿಗೆ ಬಕೆಟ್ಗಳನ್ನು ಉಚಿತವಾಗಿ ವಿತರಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಕಾಟುಕುಕ್ಕೆ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಸಂಜೀವ ರೈ ಮಾತನಾಡಿ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯುವುದನ್ನು ನಾವು ರೂಢಿ ಮಾಡಿಕೊಂಡಿದ್ದೇವೆ. ಇದು ಮನುಷ್ಯನಿಗೆ ಇಂದು ಬಾಧಿಸುತ್ತಿರುವ ಹಲವು ರೋಗಗಳಿಗೆ ಮುಖ್ಯ ಕಾರಣ. ಇಂದು ಎನ್ಸಿಸಿ ಈ ಪ್ರದೇಶದಲ್ಲಿ ಜಾಗೃತಿ ಮೂಡಿಸಿರುವುದು ಪ್ರಶಂಸನೀಯ ಎಂದು ಅಭಿಪ್ರಾಯಪಟ್ಟರು.
ಕಾಟುಕುಕ್ಕೆ ಬಿಎಯುಪಿ ಶಾಲೆಯ ಸಂಚಾಲಕ ಶ್ರೀಕೃಷ್ಣ ಭಟ್ ಮಾತನಾಡಿ ಅಬ್ದುಲ್ ಕಲಾಂ ನುಡಿದಂತೆ ಪ್ರತಿಯೊಬ್ಬ ಪ್ರಜೆಯ ಒಳಮನಸ್ಸು ಜಾಗೃತಗೊಂಡು ದೇಶಕ್ಕಾಗಿ ಯಾವುದಾದರೂ ರೀತಿಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಪ್ರಾಂಶುಪಾಲ ಪದ್ಮನಾಭ ಶೆಟ್ಟಿ, ಆಡಳಿತ ಮಂಡಳಿ ಸದಸ್ಯರಾದ ಬಿ.ಎಸ್.ಗಾಂಭೀರ್ ಸಂದೇಶ್ ರೈ, ಶಿಕ್ಷಕಿ ವಾಣಿ ಕೆ., ಎನ್ಸಿಸಿ ಕೇರಳ ಬೆಟಾಲಿಯನ್ ಸಿಬಂದಿ ಸುರೇಶ್ದತ್, ಅಂಗಡಿ ಮಾಲೀಕ ತುಕರಾಂ ಶುಭಾಶಂಸನೆಗೈದರು. ಎನ್ಸಿಸಿ ಅಧಿಕಾರಿ ಈಶ್ವರ ನಾಯಕ್ ಕೆ. ಸ್ವಾಗತಿಸಿ,ರಾಜಕೀಯ ಶಾಸ್ತ್ರ ಪ್ರಾಧ್ಯಾಪಿಕೆ ರಮಣಿ ಎಂ.ಎಸ್. ವಂದಿಸಿದರು.