ಕನ್ನಡವರಿಯದ ಪ್ರೌಢ ಶಾಲಾ ಗಣಿತ ಶಿಕ್ಷಕರ ನೇಮಕಾತಿ ಸಂದರ್ಶನದ ಬಗ್ಗೆ ಭಾಷಾ ತಜ್ಞರಿಗೆ ಎಚ್ಚರವಿರಲಿ
ಕುಂಬಳೆ: ಕನ್ನಡ ಮಾಧ್ಯಮ ಪ್ರೌಢ ಶಾಲೆಗಳಲ್ಲಿ ಗಣಿತ ಶಿಕ್ಷಕರ ನೇಮಕಾತಿಗಾಗಿ ಡಿ.20 ರಂದು ಮತ್ತು 21 ರಂದು ಅಭ್ಯಥರ್ಿಗಳ ಸಂದರ್ಶನ ಜರಗಲಿದೆ. ಕೇಟಗರಿ ನಂಬ್ರ 266 ರ ಅಡಿಯಲ್ಲಿ 2013 ರಲ್ಲಿ ಹುದ್ದೆಗಾಗಿ ಅಜರ್ಿ ಸಲ್ಲಿಸಿರುವ ಅನೇಕ ಅಭ್ಯಥರ್ಿಗಳು ಕನ್ನಡ ಬಲ್ಲವರಲ್ಲವೆಂದು ತಿಳಿದು ಬಂದಿರುವುದರಿಂದ ಇಂತಹ ಅಭ್ಯಥರ್ಿಗಳು ಸಂದರ್ಶನದಲ್ಲಿ ಪಾಲುಗೊಳ್ಳಲಿರುವುದಂತೂ ಖಂಡಿತ. ಈ ಅಭ್ಯಥರ್ಿಗಳಿಗೆ ಕನ್ನಡ ಭಾಷೆ ತಿಳಿದಿದೆಯೇ ಮತ್ತು ಕನ್ನಡ ಭಾಷೆಯಲ್ಲಿ ಗಣಿತ ಪಾಠ ಮಾಡುವಲ್ಲಿ ಭಾಷಾ ಜ್ಞಾನವಿದೆಯೇ ಎಂಬುದನ್ನು ಪರೀಕ್ಷಿಸಲು ಸಂದರ್ಶನ ಸಮಯದಲ್ಲಿ ಕನ್ನಡ ಭಾಷಾ ತಜ್ಞರ ನೇಮಕಾತಿಯೂ ನಡೆಯಲಿದೆ. ಭಾಷಾ ತಜ್ಞರು ಕನ್ನಡವರಿಯದ ಅಭ್ಯಥರ್ಿಗಳಿಗೆ ಅಂಕಗಳನ್ನು ನೀಡಿದರೆ ಕನ್ನಡ ಮಾಧ್ಯಮ ತರಗತಿಗಳಿರುವಲ್ಲಿ ಅವರ ನೇಮಕಾತಿ ನಡೆದು ಕನ್ನಡ ವಿದ್ಯಾಥರ್ಿಗಳಿಗೆ ಈ ಹಿಂದಿನಂತೆ ತೊಂದರೆಯಾಗಬಹುದು. ಎಂಬುದರಲ್ಲಿ ಅನುಮಾನವಿಲ್ಲ. ಆದುದರಿಂದ ಇಂತಹ ಕನ್ನಡ ಭಾಷಾ ತಜ್ಞರಿಗೆ ಮುಂದಿನ ದಿನಗಳಲ್ಲಿ ಕನ್ನಡ ವಿದ್ಯಾಥರ್ಿಗಳೇ ಛೀಮಾರಿ ಹಾಕಬೇಕಾಗಬಹುದು. ಈ ನೆಲೆಯಲ್ಲಿ ಅಭ್ಯಥರ್ಿಗಳ ಕನ್ನಡ ಭಾಷಾ ಜ್ಞಾನವನ್ನು ಪರೀಕ್ಷಿಸಲು ನೇಮಕಾತಿ ಹೊಂದುವ ಭಾಷಾ ತಜ್ಞರುಗಳು ಬಹಳ ಎಚ್ಚರವಹಿಸಬೇಕೆಂದು ಕನ್ನಡ ಪರ ಸಂಘ ಸಂಸ್ಥೆಗಳು ಮುಂದಾಗಿಯೇ ಈ ಮೂಲಕ ಕರೆ ನೀಡಿದೆ. ಮಾತ್ರವಲ್ಲದೆ ತೀರಾ ಕಡಿಮೆ ಅಂಕಗಳನ್ನು ನೀಡಿದ್ದಾದರೂ ಅವರ ನೇಮಕಾತಿ ನಡೆಯಬಹುದೆಂಬುದನ್ನು ಭಾಷಾ ತಜ್ಞರು ಪ್ರತ್ಯೇಕವಾಗಿ ಗಮನಿಸಬೇಕಾಗಿದೆ ಎಂದು ವಿವಿಧ ಕನ್ನಡ ಪರ ಸಂಘಟನೆಗಳು ತಿಳಿಸಿವೆ.