ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಉಡುಪಿ ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶ ಶ್ರೀಪಾದಂಗಳು ಶುಕ್ರವಾರ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ರಾತ್ರಿ ಶ್ರೀಮದ್ ಎಡನೀರು ಮಠದಲ್ಲಿ ಮೊಕ್ಕಾಂ ಹೂಡಿದರು. ಈ ಸಂದರ್ಭ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳು ಹಾಗೂ ಬಾಳೆಕುದ್ರು ಮಠದ ಶ್ರೀನೃಸಿಂಹಾಶ್ರಮ ಶ್ರೀಗಳು ಉಪಸ್ಥಿತರಿದ್ದು ಪಲಿಮಾರು ಶ್ರೀಗಳನ್ನು ಸ್ವಾಗತಿಸಿದರು.