HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಗ್ರಂಥಾಲಯಗಳು ಓದುಗರನ್ನು ಸೆಳೆಯಲು ಸಂಘಟನಾತ್ಮಕ ರೂಪು ನೀಡಬೇಕು-ಅಹಮ್ಮದ್ ಹುಸೈನ್ ಪಿ.ಕೆ.
    ಉಪ್ಪಳ: ಗ್ರಾಮೀಣ ಪ್ರದೇಶದಲ್ಲಿಯೂ ಪ್ರೌಢ ಓದುಗ ಜನ ಸಮೂಹವಿದ್ದು, ಜನರು ಬೌದ್ಧಿಕ ಶ್ರೀಮಂತಿಕೆ ಹೊಂದಿದ್ದಾರೆ, ಆದರೆ ಇತ್ತೀಚಿನ ವರ್ಷಗಳಲ್ಲಿ ಓದುಗರ ಸಂಖ್ಯೆ ಇಳಿಮುಖಗೊಳ್ಳುತ್ತಿದ್ದು ಗ್ರಾಮೀಣ ಭಾಗದ ಗ್ರಂಥಾಲಯ ಹಾಗೂ ಮಿತ್ರ ಮಂಡಳಿಗಳು ಓದುಗರ ಸಂಖ್ಯೆ ಹೆಚ್ಚಿಸಲು ಸಂಘಟನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ ಎಂದು ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯದಶರ್ಿ ಪಿ.ಕೆ ಅಹಮ್ಮದ್ ಹುಸೈನ್ ಹೇಳಿದರು.
   ಪೈವಳಿಕೆ ಸಮೀಪದ ಬಾಯಾರು ಹೆದ್ದಾರಿ ಶಾಲಾ ಮಿತ್ರ ಮಂಡಳಿ, ಗ್ರಂಥಾಲಯ ಮತ್ತು ವಾಚನಾಲಯ ಹೆದ್ದಾರಿ ಪ್ರೌಢ ಶಾಲೆಯಲ್ಲಿ ಸಂಘಟಿಸಿದ ಹೊಸ ಪುಸ್ತಕ- ಹೊಸ ವಾಚನ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
   ಸಮಾಜ ಹಾಗೂ ದೇಶದ ಪ್ರಸ್ತುತ ವಿಚಾರಧಾರೆಗಳ ಬಗ್ಗೆ ಅರಿವು ಮೂಡಿಸುವಲ್ಲಿ ಗ್ರಂಥಾಲಯಗಳ ಪಾತ್ರ ಮಹತ್ತರ, ಪುಸ್ತಕಗಳ ಓದಿನ ಜೊತೆಯಲ್ಲಿ ವಿಮಶರ್ಾತ್ಮಕ ವಿವೇಚನೆಯು ಅಗತ್ಯವಾಗಿದ್ದು, ಕೃತಿ, ಸಾಹಿತ್ಯದ ಮೂಲಕ ಸಾಮಾಜಿಕ ಬದಲಾವಣೆ ಸಾಧ್ಯ ಎಂದರು.ಓದುಗರನ್ನು ಸೆಳೆಯುವ ನಿಟ್ಟಿನಲ್ಲಿ ವರ್ಷದಲ್ಲಿ ಕನಿಷ್ಠ 20 ಕಾರ್ಯಕ್ರಮಗಳನ್ನು ಸ್ಥಳೀಯ ಗ್ರಂಥಾಲಯ ಹಾಗೂ ಮಿತ್ರ ಮಂಡಳಿಗಳು ಒಗ್ಗೂಡಿ ನಡೆಸಬೇಕಿದೆ ಎಂದು ಹೇಳಿದರು.ಸ್ಥಳೀಯ ಬರಹಗಾರರು, ಸಾಹಿತಿಗಳ ಪುಸ್ತಕ ಅವಲೋಕನ, ಯುವ ಸಾಹಿತಿ, ವಾಗ್ಮಿಗಳಿಗೆ ಸ್ಫೂತರ್ಿ ಸಿಗುವಂತೆ ಗ್ರಂಥಾಲಯಗಳು ಪೂರಕ ವಾತಾವರಣ ಸೃಷ್ಠಿಸಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.
    ಶಶಿಕಲಾ  ಬಾಯಾರು ವಿರಚಿತ ಪತ್ರಾಜರ್ಿತ ಪುಸ್ತಕದ ಬಗ್ಗೆ ವಿಷಯಾವತರಣ ನಡೆಸಿದ ಜಿಲ್ಲಾ ಲೈಬ್ರರಿ ಕೌನ್ಸಿಲ್ ಸದಸ್ಯೆ ವನಿತಾ ಆರ್.ಶೆಟ್ಟಿ ಮಾತನಾಡಿ ಪುಸ್ತಕಗಳು ಮನುಷ್ಯ ಜೀವನದ ಮಾರ್ಗದಶರ್ಿ ಸೂತ್ರಗಳು, ಪ್ರಸಿದ್ದ ಲೇಖಕರ ಪತ್ರಗಳು ಪತ್ರಾಜರ್ಿತದಲ್ಲಿದ್ದು ಅಭಿವ್ಯಕ್ತಿಯ ಸಂಕೇತವಾಗಿದೆ ಎಂದರು. ಬದುಕಿನ ಜಂಜಾಟಗಳ ಮಧ್ಯೆ ಸಾಹಿತ್ಯ ಹಾಗೂ ಕಸೂತಿ ಕಲೆಗೆ ಸಮಯ ಮೀಸಲಿಟ್ಟು ವಿಶೇಷ ಸಾಧನೆಗೈದ ಶಶಿಕಲಾ ಅವರು ಯುವ ಸಾಹಿತಿ ಹಾಗೂ ಮಹಿಳೆಯರಿಗೆ ಮಾದರಿ ಎಂದರು. ರಹಮತ್ ತರೀಕೆರೆ ಅವರ ನಡೆದಷ್ಟೂ ನಾಡು ಪುಸ್ತಕದ ಬಗ್ಗೆ ಮೀಯಪದವು ಎಸ್.ವಿ.ವಿ ಶಾಲೆಯ ವಿದ್ಯಾಥರ್ಿ ಶಿವೇಶ್.ಎಸ್ ವಿಷಯಾವತರಣ ನಡೆಸಿದರು. ಕಾರ್ಯಕ್ರಮದಲ್ಲಿ ಶಶಿಕಲಾ ಬಾಯಾರು ಇವರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಅಧ್ಯಕ್ಷ ಎಸ್.ನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು, ಗ್ರಂಥಾಲಯ ಕಾರ್ಯದಶರ್ಿ ಸಿ.ಎಚ್ ಈಶ್ವರ ಭಟ್ ಸ್ವಾಗತಿಸಿ, ಸಹ ಕಾರ್ಯದಶರ್ಿ ಗಣಪತಿ ಭಟ್ ವಂದಿಸಿದರು.  ಸಾಹಿತಿಕ ವಿಚಾರ ಮಂಥನದಲ್ಲಿ ಕಾರ್ಯಕ್ರಮದಲ್ಲಿ ಶಾಲಾ ಪ್ರಬಂಧಕ ಎನ್.ರಾಮಕೃಷ್ಣ ಭಟ್, ಮುಖ್ಯೋಪಾಧ್ಯಾಯ ಆದಿನಾರಾಯಣ ಭಟ್.ಎಂ, ಕುಮಾರಿ, ಗೋಪಾಲಕೃಷ್ಣ ಭಟ್, ಸಂಧ್ಯಾಗೀತಾ, ಶ್ರೀರಾಮ ಪದಕಣ್ಣಾಯ, ದೀನೇಶ್ವರಿ ನಾಗೇಶ್, ವೆಂಕಟ್ರಮಣ ಆಚಾರ್ಯ, ಹಮೀದ್ ಮಾಸ್ಟರ್ ಮೊದಲಾದವರು ಭಾಗವಹಿಸಿದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries