HEALTH TIPS

ಯಾವುದೇ ಶೀರ್ಷಿಕೆಯಿಲ್ಲ

       ಫಲಿಮಾರು ಶ್ರೀಗಳ ಭೇಟಿ
   ಮುಳ್ಳೇರಿಯ: ಪಯರ್ಾಯ ಪೂರ್ವಭಾವಿ ಸಂಚಾರದಲ್ಲಿರುವ ಉಡುಪಿ ಫಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಕುಂಬಳೆ ಸೀಮೆಯ ಪ್ರಥಮ ವಂದ್ಯದೇವನಾದ ಸೀಮಾಧಿಪತಿ ಅಡೂರು ಶ್ರೀ ಮಹತೋಭಾರ ಮಾಹಲಿಂಗೇಶ್ವರ ಕ್ಷೇತ್ರವನ್ನು ಶುಕ್ರವಾರ ಸಂಜೆ  ಸಂದಶರ್ಿಸಿದರು.
   ದ್ವೈತಮತ ಸಂಸ್ಥಾಪಕರು, ಉಡುಪಿ ಶ್ರೀಕೃಷ್ಣದೇವರನ್ನು ಪ್ರತಿಷ್ಠಾಪಿಸಿ ಅಷ್ಠಮಠಗಳನ್ನು ಸ್ಥಾಪಿಸಿದ ಶ್ರೀಮನ್ ಮದ್ವಾಚಾರ್ಯರು ಸುಮಾರು 800 ವರ್ಷಗಳ ಹಿಂದೆ  ಅಡೂರು ಕ್ಷೇತ್ರದಲ್ಲಿ ಪ್ರತಿಷ್ಠಾಪನೆ ಮಾಡಿದ ಶ್ರೀಮಹಾವಿಷ್ಣುಮೂತರ್ಿ ದೇವರ ಕ್ಷೇತ್ರವನ್ನೂ ಸಂದಶರ್ಿಸಿದರು. ಈ ಸಂದರ್ಭದಲ್ಲಿ ದೇವಾಲಯ ಸಮಿತಿಯವರು ಮತ್ತು ಊರವರು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಂಡು ಗೌರವಾರ್ಪಣೆಗಳನ್ನು ಸಮಪರ್ಿಸಿದರು.ಶ್ರೀ ಶ್ರೀಗಳ ಕಾಸರಗೋಡು ಪ್ರವಾಸದ ಸಂಯೋಜಕರಾದ ಹಿಂದು ಐಕ್ಯವೇದಿಯ ನೇತಾರ ಎಸ್.ಎಂ ಉಡುಪ ಇನ್ನಿತರ ಗಣ್ಯನೇತಾರರು ಉಪಸ್ಥಿತರಿದ್ದರು.
  ಬಳಿಕ ಕುಂಟಾರು ಶ್ರೀಮಹಾವಿಷ್ಣು ಕ್ಷೇತ್ರವನ್ನು ಸಂದಶರ್ಿಸಿದರು. ಈ ಸಮಯದಲ್ಲಿ ಮಧ್ವಾಚಾರ್ಯರು ಪುಣ್ಯಸ್ನಾನ ಮಾಡಿದ ಶ್ರೀಕ್ಷೇತ್ರದ ಬಳಿಯಿರುವ ನದಿ ಪಯಸ್ವಿನಿಯಲ್ಲಿ ಪುಣ್ಯಸ್ನಾನ ಮಾಡಿದರು. ಈ ಸಂದರ್ಭದಲ್ಲಿ ಬ್ರಹ್ಮಶ್ರೀ ವಾಸುದೇವತಂತ್ರಿ ಮತ್ತು ಬ್ರಹ್ಮಶ್ರೀ ರವೀಶ ತಂತ್ರಿ ಇವರ ನೇತೃತ್ವದಲ್ಲಿ ತಾಂತ್ರಿಕಸದನ ಕುಂಟಾರು ಮತ್ತು ಸಿಬ್ಬಂದಿ ವರ್ಗದವರು ಹಾಗು ಊರ ಹಿರಿಯರು, ಭಗವದ್ಭಕ್ತರಿಂದ ಶ್ರೀ ಶ್ರೀಗಳಿಗೆ ಪಾದಪೂಜೆ, ಗೌರವಾರ್ಪಣೆ ನಡೆಯಿತು. ಇದೇ ಸಂದರ್ಭದಲ್ಲಿ ಕುಂಟಾರಿನ ಹಲವು ಸಂಘಸಂಸ್ಥೆಗಳಿಂದ ವಿಶೇಷ ಗೌರವಾರ್ಪಣೆಯೂ ನಡೆಯಿತು. ಶ್ರೀ ಶ್ರೀಗಳನ್ನು ಸಿಂಗಾರಿಮೇಳ ಚೆಂಡೆವಾದ್ಯ, ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು. ಈ ಸಮಯದಲ್ಲಿ ಊರಿನ ಹಿರಿಯ ನೇತಾರರಾದ ಲೋಕೆಶ್ ಮಾಟೆಯಡ್ಕ, ದಿಲೀಪ್ ಕುಂಟಾರು, ಊರಿನ ಹಲವು ಸಂಘಸಂಸ್ಥೆಗಳ ಹಿರಿಯರು, ಇನ್ನಿತರ ಹಿರಿಯರು  ಉಪಸ್ಥಿತರಿದ್ದರು.
  ಬಳಿಕ  ಮಧೂರು ಕ್ಷೇತ್ರವನ್ನು ಸಂದಶರ್ಿಸಿ ದೇವರದರ್ಶನ ಪಡೆದರು. ಈ ಸಮಯದಲ್ಲಿ ಶ್ರೀಕ್ಷೇತ್ರದ ಆಡಳಿತ ಸಮಿತಿಯವತಿಯಿಂದ  ಗೌರವಾರ್ಪಣೆ ನಡೆಯಿತು. ಶ್ರೀ ಶ್ರೀಗಳ ಕಾಸರಗೋಡು ಪ್ರವಾಸದ ಸಂಯೋಜಕರಾದ ಹಿಂದುಐಕ್ಯವೇದಿಯ ನೇತಾರ ಎಸ್.ಎಂ ಉಡುಪ ಇನ್ನಿತರ ಗಣ್ಯನೇತಾರರು ಉಪಸ್ಥಿತರಿದ್ದರು.
  ಬಳಿಕ ಕಾವುಗೋಳಿ ಮಠ ಸಂದಶರ್ಿಸಿ, ಶ್ರೀಎಡನೀರು ಮಠದಲ್ಲಿ ಮೊಕ್ಕಾಂ ನಡೆಸಿದರು.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries