HEALTH TIPS

ಯಾವುದೇ ಶೀರ್ಷಿಕೆಯಿಲ್ಲ

            ಮೌನ ಭಾಷೆ
     ಎಲ್ಲೋ ಒಂದು ಗುನುಗುವ ಕವನ
     ಇಲ್ಲೇ ಬಂದು ನಗಬಾರದೇ
    ಎಲ್ಲೋ ಒಂದು ನೆನಪಿನ ಕಥೆಗಳು
     ಇಲ್ಲೇ ಬಂದು ಕುಣಿಯಬಾರದೇ
   ಮುಗಿಲಾಚೆ ಈಚೆ ಕುಣಿವ
   ಭಾವಗಳೆ ಮೀಟಿ ಬಂದು ಗೆಲಿಸಬಾರದೇ/
   ನೀನೇಕೆ ಕೊಲ್ಲುವೆ ನನ್ನ ನಿನ್ನೆ ನೆನಪು ಮಾಡಿ
    ಇಂದೇಕೆ ನಾಳೆಗಳ ಬಿರುಬಿಸಿಲ ಮೋಡಿ
    ನೋಡುನೋಡು ನೋಡಲ್ಲಿ ನೆರಳುಗಳು ಓಡುತಿವೆ
    ನಾನೇಕೆ ಇನ್ನೂ ಇಲ್ಲೆ ಬಿದ್ದು ಏಳಲೊಲ್ಲೆ/
    ಅಂತರಾಳ ಕುಸಿಯದಿರಲಿ
    ಎದ್ದು ಸದ್ದು ಮಾಡುವೆ
    ನಡೆವ ಕಾಲು ಕಂಪಿಸದಿರಲಿ
    ಮುಂದೆ-ಮುಂದೆ ಓಡುವೆ
     ನನ್ನ ನೆರಳ ನಾನೇ ಮತ್ತೆ ಜೊತೆಜೊತೆಗೆ ಒಯ್ಯುವೆ//
                  - ಸಿದ್ದಾಥ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries