ಸಂಘಪರಿವಾರದ ಕಾರ್ಯಕರ್ತರ ಮೇಲೆ ಕೇಸು ದಾಖಲಿಸಿದ ಪೊಲೀಸರ ದ್ವಂದ್ವ ನೀತಿ ಖಂಡನೀಯ: ಬಿಜೆಪಿ
ಕುಂಬಳೆ: ಸಿಪಿಎಂ ಮತ್ತು ಮುಸ್ಲಿಂಲೀಗ್ನ ಕೆಲವು ತುಂಡು ನೇತಾರರ ಒತ್ತಡಕ್ಕೆ ಮಣಿದು ಸಂಘಪರಿವಾರದ ನಾಯಕರ ಮತ್ತು ಕಾರ್ಯಕರ್ತರ ಮೇಲೆ ಸುಳ್ಳು ಕೇಸು ದಾಖಲಿಸಿದ ಕುಂಬಳೆ ಪೊಲೀಸರ ಪ್ರಜಾಪ್ರಭುತ್ವ ವಿರೋಧಿ ನೀತಿಯನ್ನು ಬಿಜೆಪಿ ಕುಂಬಳೆ ಪಂಚಾಯತು ಸಮಿತಿಯು ಕಟುಶಬ್ಧಗಳಲ್ಲಿ ಖಂಡಿಸಿದೆ.
ಅಘೋಷಿತ ಹರತಾಳದ ಹೆಸರಿನಲ್ಲಿ ಕೆಲವು ಸಮಾಜದ್ರೋಹಿಗಳು ನಡೆಸಿದ ಹರತಾಳದಂದು (ಎ.16ರಂದು) ವ್ಯಾಪಕವಾಗಿ ಹಿಂದುಗಳ ಅಂಗಡಿ ಮುಂಗಟ್ಟು ಹಾಗೂ ವಾಹನಗಳನ್ನು ಬಲವಂತವಾಗಿ ಬೆದರಿಸಿ ಬಲಪ್ರಯೋಗಿಸಿ ಬಂದ್ ಮಾಡಿದ ವಿರುದ್ಧ ಕುಂಬಳೆಯಲ್ಲಿ ಎ.17ರಂದು ಸಂಘಪರಿವಾರದ ನೇತೃತ್ವದಲ್ಲಿ ಶಾಂತಿಯುತ ಪ್ರತಿಭಟನಾ ಮೆರವಣಿಗೆ ನಡೆಸಲಾಗಿತ್ತು.
ಈ ಪ್ರತಿಭಟನೆಗೆ ಸಂಬಂಧಿಸಿ ಕುಂಬಳೆ ಪೊಲೀಸರು ಸಿಪಿಎಂ ಮತ್ತು ಮುಸ್ಲಿಂಲೀಗ್ನ ಒತ್ತಡಕ್ಕೆ ಮಣಿದು ದಾಖಲಿಸಿದ ಸುಳ್ಳು ಕೇಸುಗಳನ್ನು ಹಿಂಪಡೆಯಬೇಕೆಂದು ಬಿಜೆಪಿ ಪಂಚಾಯತು ಸಮಿತಿಯ ಸಭೆಯಲ್ಲಿ ಆಗ್ರಹಿಸಲಾಗಿದೆ. ಹರತಾಳದ ದಿನದಂದು ಕುಂಬಳೆ ಹಾಗೂ ಇನ್ನಿತರ ಕಡೆಗಳಲ್ಲಿ ಎಸ್ಡಿಪಿಐ ನೇತೃತ್ವದಲ್ಲಿ ನಡೆಸಲಾದ ಸಮಾಜ ಬಾಹಿರ ಕೃತ್ಯಗಳಿಗೆ ಸಂಬಂಧಿಸಿ ಸರಿಯಾದ ಕೇಸು ದಾಖಲಿಸದ ಪೊಲೀಸರು ಸಂಘಪರಿವಾರದ ಶಾಂತಿಯುತ ಮೆರವಣಿಗೆಯ ಮೇಲೆ ಕೇಸು ದಾಖಲಿಸಿರುವುದು ಅವರ ದ್ವಂದ್ವ ನೀತಿಯಾಗಿದ್ದು, ಈ ಬಗ್ಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಇಂತಹ ಸುಳ್ಳು ಕೇಸುಗಳನ್ನು ಹಿಂಪಡೆಯದಿದ್ದರೆ ಕುಂಬಳೆ ಪೊಲೀಸ್ ಠಾಣೆಗೆ ಮುತ್ತಿಗೆ ಸಹಿತ ಪ್ರಬಲವಾದ ಬೃಹತ್ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಬಿಜೆಪಿ ಪಂಚಾಯತು ಸಮಿತಿಯ ಸಭೆಯಲ್ಲಿ ಎಚ್ಚರಿಸಲಾಗಿದೆ.
ಕುಂಬಳೆ ಬಿಜೆಪಿ ಕಚೇರಿಯಲ್ಲಿ ಕಮಲಾಕ್ಷ ಆರಿಕ್ಕಾಡಿ ಇವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಈ ಕುರಿತು ಸಮಾಲೋಚಿಸಲಾಯಿತು. ಬಿಜೆಪಿ ಮಂಜೇಶ್ವರ ಮಂಡಲ ಉಪಾಧ್ಯಕ್ಷ ಕೆ.ವಿನೋದನ್ ಕಡಪ್ಪುರ, ಸತ್ಯಶಂಕರ ಭಟ್ ಹಿಳ್ಳೆಮನೆ, ಪಂಚಾಯತು ಸದಸ್ಯರಾದ ಸುಧಾಕರ ಕಾಮತ್ ಕುಂಬಳೆ, ಮುರಳೀಧರ ಯಾದವ್ ನಾಯ್ಕಾಪು, ರಮೇಶ್ ಭಟ್ ಕುಂಬಳೆ, ಸುಜಿತ್ ರೈ ಕೋಟೆಕ್ಕಾರು, ಹರೀಶ್ ಗಟ್ಟಿ, ಪ್ರೇಮಲತಾ ಎಸ್, ಪುಷ್ಪಲತಾ ಎನ್. ಮಾತನಾಡಿದರು. ಬಿಜೆಪಿ ಪಂಚಾಯತು ಸಮಿತಿಯ ಪ್ರಧಾನ ಕಾರ್ಯದಶರ್ಿ ವಸಂತಕುಮಾರ್ ಕೆ. ಸ್ವಾಗತಿಸಿ, ಓಬಿಸಿ ಮೋಚರ್ಾದ ಮಂಡಲ ಪ್ರಧಾನ ಕಾರ್ಯದಶರ್ಿ ಶಶಿ ಕುಂಬಳೆ ವಂದಿಸಿದರು.