ಲಕ್ಷ್ಮೀ ಕುಂಜತ್ತೂರು ಅವರ `ಪ್ರಜ್ಞಾಭೂಮಿ' ಲೋಕಾರ್ಪಣೆ
ವೈಚಾರಿಕತೆ, ಸಂಶೋಧನೆ, ಜಿಜ್ಞಾಸೆಯ ತಥ್ಯದರ್ಶನ : ಡಾ.ಬನಾರಿ
ಮಂಜೇಶ್ವರ: ಲಕ್ಷ್ಮೀ ಕುಂಜತ್ತೂರು ಅವರು ಬದುಕನ್ನು ಸತ್ಕಾರ್ಯಗಳಿಗಾಗಿ ಸಮಪರ್ಿಸಿದವರು. ಅವರ `ಪ್ರಜ್ಞಾಭೂಮಿ' ವೈಚಾರಿಕತೆ, ಸಂಶೋಧನೆ, ಜಿಜ್ಞಾಸೆಯ ತಥ್ಯದರ್ಶನ ಎಂಬುದಾಗಿ ಸಾಹಿತಿ, ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಅಧ್ಯಕ್ಷ ಡಾ.ಕೆ.ರಮಾನಂದ ಬನಾರಿ ಅಭಿಪ್ರಾಯಪಟ್ಟರು.
ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಗಿಳಿವಿಂಡು ಆವರಣದಲ್ಲಿ ಲಕ್ಷ್ಮೀ ಕುಂಜತ್ತೂರು ಅವರ ಸಂಸ್ಮರಣೆ ಮತ್ತು `ಪ್ರಜ್ಞಾಭೂಮಿ' ಕೃತಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಲಕ್ಷ್ಮೀಯವರು ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದು, ಅದಕ್ಕೆ ಸಂಪೂರ್ಣ ನಿಷ್ಠರಾಗಿದ್ದುಕೊಂಡೇ ಅನ್ವೇಷಣೆ, ವಿಶ್ಲೇಷಣೆ ಪ್ರವೃತ್ತಿಯ ಮೂಲಕ ಮಹತ್ವದ ಕೃತಿಗಳನ್ನು ರಚಿಸಿದವರು. ಸಾಹಿತ್ಯ ತಪಸ್ಸಿನ ಮೂಲಕ ಸಾರ್ಥಕ ಬದುಕನ್ನು ಕಂಡವರು ಎಂದು ಡಾ.ರಮಾನಂದ ಬನಾರಿ ಹೇಳಿದರು.
ಕನ್ನಡ ಭಾಷೆಯ ಲಿಪಿಯನ್ನು ಗಣಕಕ್ಕೆ ಅಳವಡಿಸಿದ ಹಾಗೂ `ಸೇಡಿಯಾಪು' ತಂತ್ರಾಂಶವನ್ನು ಸಂಶೋಧಿಸಿದ ವಿದ್ವಾಂಸ ಕೆ.ಪಿ. ರಾವ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಲಕ್ಷ್ಮೀ ಕುಂಜತ್ತೂರು ಅಭಿಮಾನಿ ಬಳಗ ಸಮಾರಂಭವನ್ನು ಆಯೋಜಿಸಿತ್ತು. ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಸಂಸ್ಮರಣ ಭಾಷಣ ಮಾಡಿದರು.
ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕಾ`್ಯಕ್ಷ ಎಸ್.ವಿ.ಭಟ `ಪ್ರಜ್ಞಾ ಭೂಮಿ' ಕೃತಿ ಬಿಡುಗಡೆಗೊಳಿಸಿದರು. ಲಕ್ಷ್ಮೀಯವರ ಜಿಜ್ಞಾಸೆಯ ಫಲಶ್ರುತಿಯಾಗಿರುವ ಈ ಕೃತಿ ಕಾಸರಗೋಡಿನ ಸಂದರ್ಭಕ್ಕೆ ಚಾರಿತ್ರಿಕ ದಾಖಲೆಯಾಗಿದೆ ಎಂದು ಅವರು ಹೇಳಿದರು. ಚಿಂತಕ ಜಯರಾಮ ದೇವಸ್ಯ `ಪ್ರಜ್ಞಾಭೂಮಿ'ಯನ್ನು ಪರಿಚಯಿಸಿ ಭಾರತೀಯ ಇತಿಹಾಸ ಮತ್ತು ಪರಂಪರೆಯ ಬಗ್ಗೆ ಲಕ್ಷ್ಮೀಯವರಿಗಿದ್ದ ಅಪಾರ ಕಾಳಜಿ ಮತ್ತು ಕುತೂಹಲವನ್ನು ತಿಳಿಯಪಡಿಸಿದರು. ಇದೇ ಸಂದರ್ಭದಲ್ಲಿ `ಪ್ರಜ್ಞಾಭೂಮಿ' ಕೃತಿ ಪ್ರಕಟಣೆಯ ಹಿನ್ನೆಲೆಯಲ್ಲಿ ದುಡಿದ ಡಾ.ಯು.ಮಹೇಶ್ವರಿ ಮತ್ತು ವೇದಿಕೆಯಲ್ಲಿ ಉಪಸ್ಥಿತರಿದ್ದ ಅತಿಥಿಗಳಿಗೆ ಗೌರವಾಭಿನಂದನೆ ಸಲ್ಲಿಸಲಾಯಿತು.
ಲಕ್ಷ್ಮೀ ಕುಂಜತ್ತೂರು ಅವರ ಹಿರಿಯ ಪುತ್ರಿ ಹರಣಾಕ್ಷಿ ಎಸ್. ಉಚ್ಚಿಲ ಪ್ರಾರ್ಥನೆ ಹಾಡಿದರು. ಅಭಿಮಾನಿ ಬಳಗದ ಸಂಚಾಲಕ, ಸಮಾಜ ಸೇವಕ ಹರೀಶ್ ಮಾಡ ಸ್ವಾಗತಿಸಿ, ನಿವೃತ್ತ ಮುಖ್ಯ ಶಿಕ್ಷಕಿ ಹಾಗೂ ಲಕ್ಷ್ಮೀಯವರ ಪುತ್ರಿ ಜಯಶೀಲ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಹಾಯಕ ಪ್ರಾಧ್ಯಾಪಕಿ ವೇದಾವತಿ ಎಸ್. ವಂದಿಸಿದರು. `ಗಿಳಿವಿಂಡು' ಆಡಳಿತಾಧಿಕಾರಿ ಡಾ.ಕೆ.ಕಮಲಾಕ್ಷ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಅನಂತ ಮಂಜೇಶ್ವರ ಮತ್ತು ಬಳಗದಿಂದ ಲಕ್ಷ್ಮೀ ಕುಂಜತ್ತೂರು ಅವರ ಭಾವಗೀತೆಗಳ ಗಾಯನ ಜರಗಿತು. ಅನಂತ ಮಂಜೇಶ್ವರ, ಪೂಜಾ ಭಕ್ತ, ನಿಶ್ಮಿತಾ ಶ್ರುತಿಮಧುರವಾಗಿ ಹಾಡಿದರು. ಚಂದ್ರಿಕಾ ಕಾರ್ಯಕ್ರಮ ನಿರೂಪಿಸಿದರು. ಲಕ್ಷ್ಮೀ ಅವರ ಪ್ರಕಟಿತ ಕೃತಿಗಳ ಪ್ರದರ್ಶನ ವ್ಯವಸ್ಥೆಗೊಳಿಸಲಾಗಿತ್ತು. ಕುಟುಂಬದ ಸದಸ್ಯರು, ಶಿಷ್ಯಂದಿರು, ಅಭಿಮಾನಿಗಳು, ಸಾಹಿತಿ-ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.