HEALTH TIPS

ಯಾವುದೇ ಶೀರ್ಷಿಕೆಯಿಲ್ಲ

             ಸವಾಕ್ ಕಾರಡ್ಕ ಬ್ಲಾಕ್ ಸಭೆ
    ಮುಳ್ಳೇರಿಯ: ಕಲಾವಿದರು ಮತ್ತು ಕಲಾ ಕ್ಷೇತ್ರದ ಇತರ ವಿಭಾಗದಲ್ಲಿ ಕಾರ್ಯನಿರ್ವಹಿಸುವವರ ಸಮಗ್ರ ಕ್ಷೇತ್ರ ಚಟುವಟಿಕೆಗಳಿಗೆ ಸವಾಕ್ ಬದ್ದವಾಗಿದ್ದು, ಈಗಾಗಲೇ ಹಲವರಿಗೆ ನ್ಯಾಯಯುತ ರೀತಿಯ ಸವಲತ್ತು-ಸೌಲಭ್ಯಗಳನ್ನು ಸರಕಾರದಿಂದ ಒದಗಿಸುವಲ್ಲಿ ಸಫಲವಾಗಿದೆ ಎಂದು ಸ್ಟೇಜ್ ಆಟರ್ಿಸ್ಟ್ ಆಂಡ್ ವರ್ಕಸರ್್ ಅಸೋಸಿಯೇಶನ್(ಸವಾಕ್) ಜಿಲ್ಲಾಧ್ಯಕ್ಷ ಎಂ.ಉಮೇಶ್ ಸಾಲ್ಯಾನ್ ಕಾಸರಗೋಡು ತಿಳಿಸಿದರು.
   ಸವಾಕ್ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಶನಿವಾರ ಸಂಜೆ ನಾಟೆಕಲ್ಲು ಶ್ರೀಅಯ್ಯಪ್ಪ ಮಂದಿರ ಪರಿಸರದಲ್ಲಿ ನಡೆದ ಸವಾಕ್ ಕಾರಡ್ಕ ಬ್ಲಾಕ್ ಸಮಿತಿ ಪದಾಧಿಕಾರಿಗಳ ವಿಶೇಷ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
   ಸಂಘಟನೆಯನ್ನು ಇನ್ನಷ್ಟು ಬಲಪಡಿಸಿ ಸಂಕಷ್ಟದಲ್ಲಿರುವ ಕಲಾವಿದರು-ಕಲಾಕ್ಷೇತ್ರಗಳ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುವವರ ಪಿಂಚಣಿ ಸಹಿತ ವಿವಿಧ ನೆರವುಗಳನ್ನು ಈಗಾಗಲೇ ಅರ್ಹರಿಗೆ ಲಭಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದು, ಕಾರಡ್ಕ ಸಹಿತ ವಿವಿಧ ಬ್ಲಾಕ್ ಗಳ ಸಂಘಟನೆಗಳನ್ನು ಬಲಪಡಿಸಲು ಉದ್ದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬ್ಲಾಕ್ ಮಟ್ಟದ ಸಮಾವೇಶಗಳನ್ನು ಆಯೋಜಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
   ಸವಾಕ್ನ ಕಾರಡ್ಕ ಬ್ಲಾಕ್ ಘಟಕಾಧ್ಯಕ್ಷ ಮಧುಸೂದನ ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದಶರ್ಿ ತುಳಸೀಧರನ್, ಬ್ಲಾಕ್ ಜೊತೆ ಕಾರ್ಯದಶರ್ಿ ವಿನು ಬೋವಿಕ್ಕಾನ, ಶ್ರೀಲತಾ ಉಪಸ್ಥಿತರಿದ್ದರು. ಬ್ಲಾಕ್ ಖಜಾಂಜಿ ಚಂದ್ರಶೇಖರ್ ಸ್ವಾಗತಿಸಿ, ವಂದಿಸಿದರು.
   ಸಭೆಯಲ್ಲಿ ಕಾರಡ್ಕ ಬ್ಲಾಕ್ ಮಟ್ಟದ ಸವಾಕ್ ಸಮಾವೇಶವನ್ನು ಜುಲೈ 1 ರಂದು ಮುಳ್ಳೇರಿಯದ ವ್ಯಾಪಾರಿ ಭವನ ಸಭಾಂಗಣದಲ್ಲಿ ನಡೆಸಲು ತೀಮರ್ಾನಿಸಲಾಯಿತು. ಸಮಾವೇಶದಲ್ಲಿ ಕಳೆದ ವರ್ಷದ ಹತ್ತನೇ ತರಗತಿ ಮತ್ತು ಪ್ಲಸ್ ಟು ಗಳಲ್ಲಿ ಅತ್ಯಧಿಕ ಅಂಕಗಳಿಸಿದ ಸವಾಕ್ ಸದಸ್ಯರ ಮಕ್ಕಳನ್ನು ಅಭಿನಂದಿಸಲು ತೀಮರ್ಾನಿಸಲಾಯಿತು.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries