ಶಬರಿಮಲೆ ಪ್ರವೇಶಕ್ಕೆ ಮಹಿಳೆಯರ ವಿಫಲ ಯತ್ನ
ಕಾಸರಗೋಡು: ಶಬರಿಮಲೆ ಶ್ರೀಕ್ಷೇತ್ರದಲಲಿ ತುಲಾ ಮಾಸಕ್ಕಾಗಿ 5 ದಿನ ತೆರೆದಿದ್ದು ಮುಚ್ಚುವ ಕೊನೆಯ ದಿನವಾದ ಸೋಮವಾರವೂ ಮಹಿಳೆಯೊಬ್ಬಳು ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನ ಪ್ರವೇಶಿಸಲು ಯತ್ನಿಸಿ ವಿಫಲರಾಗಿದ್ದಾರೆ.
ಅಯ್ಯಪ್ಪಸ್ವಾಮಿ ದರ್ಶನಕ್ಕೆ ಸೋಮವಾರ ಬಿಂದು ಎಂಬ ದಲಿತ ಮಹಿಳೆ ಪೊಲೀಸರ ಭದ್ರತೆಯಲ್ಲೇ ದೇವಸ್ಥಾನ ಪ್ರವೇಶಿಸಲು ಯತ್ನಿಸಿದರು. ಆದರೆ ಪ್ರತಿಭಟನಾಕರರ ತೀವ್ರ ವಿರೋಧಕ್ಕೆ ಮಣಿದ ಮಹಿಳೆ ಅರ್ಧಕ್ಕೆ ವಾಪಸ್ ಬಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸ್ ಸಿಬ್ಬಂದಿಯೊಂದಿಗೆ ಕೇರಳ ಸಾರಿಗೆ ಸಂಸ್ಥೆಯ ಬಸ್ ನಲ್ಲಿ ತೆರಳುತ್ತಿದ್ದ ಬಿಂದು ಅವರನ್ನು ಪಂಪಾ ತಲುಪುವ ಮೊದಲೆ ಬಿಜೆಪಿ ಕಾರ್ಯಕರ್ತರು ಮತ್ತು ಅಯ್ಯಪ್ಪಸ್ವಾಮಿ ಭಕ್ತರು ತಡೆದಿದ್ದು, ಬಳಿಕ ಅವರನ್ನು ಪೊಲೀಸ್ ಜೀಪ್ ನಲ್ಲಿ ಸುರಕ್ಷಿತವಾಗಿ ಕರೆದೊಯ್ಯಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇರಳದ ಪ್ರಸಿದ್ಧ ಪುಣ್ಯ ಕ್ಷೇತ್ರ ಶಬರಿಮಲೆ ಅಯ್ಯಪ್ಪ ದೇಗುಲದೊಳಕ್ಕೆ ಯಾವುದೇ ವಯೋಮಾನದ ಮಹಿಳೆಯರು ಪ್ರವೇಶಿಸಬಹುದು ಎಂದು ಸುಪ್ರೀಂಕೋಟರ್್ ಐತಿಹಾಸಿಕ ತೀಪರ್ು ನೀಡಿದ ಬಳಿಕ ದೇಗುಲದ ಬಾಗಿಲು ತೆರೆದು 5 ದಿನಗಳಾಗುತ್ತಾ ಬಂದಿದ್ದರೂ, ಈ ವರೆಗೂ 10-50 ವರ್ಷದೊಳಗಿನ ಒಬ್ಬರೋ ಒಬ್ಬ ಮಹಿಳೆಯರೂ ದರ್ಶನ ಪಡೆದಿಲ್ಲ.
ಹೋರಾಟಗಾತರ್ಿ ರೆಹಾನ ಫಾತಿಮಾ ವಿರುದ್ಧ ಬಿಎಸ್ಎನ್ಎಲ್ ಶಿಸ್ತುಕ್ರಮ
ಶಬರಿಮಲೆ ದೇಗುಲ ಪ್ರವೇಶಿಸಲು ಪ್ರಯತ್ನಿಸಿದ್ದ ಕೇರಳದ ಮಾನವ ಹಕ್ಕು ಹೋರಾಟಗಾತರ್ಿ ರೆಹಾನ ಫಾತಿಮಾ ಅವರಿಗೆ ವಗರ್ಾವಣೆ ಶಿಕ್ಷೆ ನೀಡಿರುವ ಬಿಎಸ್ಎನ್ಎಲ್ ಇದೀಗ ಮತ್ತಷ್ಟು ಕ್ರಮ ಕೈಗೊಳ್ಳುವ ಸುಳಿವನ್ನು ನೀಡಿದೆ.
ಆಂತರಿಕ ತನಿಖೆ ಬಳಿಕ ಶಿಸ್ತು ಕ್ರಮ ಕೈಗೊಂಡಿರುವ ಬಿಎಸ್ಎನ್ಎಲ್ ಫಾತಿಮಾ ಅವರನ್ನು ಕೊಚ್ಚಿಯ ರವಿಪುರಂ ಬ್ರಾಂಚ್'ಗೆ ವಗರ್ಾವಣೆ ಮಾಡಿದೆ ಎಂದು ತಿಳಿದುಬಂದಿದೆ.
ರೂಪದಶರ್ಿಯಾಗಿರುವ ಹೋರಾಟಗಾತರ್ಿ ರೆಹಾನ ಅವರು ಎನರ್ಾಕುಲಂ ಮೂಲದವರಾಗಿದ್ದು, ಕೊಟ್ಟಿ ಬೋಟ್ ಜೆಟ್ಟಿ ಬ್ರ್ಯಾಂಚ್'ನಲ್ಲಿ ಟೆಕ್ನಿಷಿಯನ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಅವರಿಗೆ ವಗರ್ಾವಣೆ ಮಾಡಲಾಗಿದ್ದು, ಸಾರ್ವಜನಿಕರೊಂದಿಗೆ ಸಂಪರ್ಕವಿಲ್ಲದ ಪೋಸ್ಟ್ ವೊಂದನ್ನು ನೀಡಲಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ಧಾಮರ್ಿಕ ನಂಬಿಕೆಗಳಿಗೆ ನೋವುಂಟು ಮಾಡುವಂತಹ ಪೋಸ್ಟ್ ವೊಂದನ್ನು ರೆಹಾನ ಅವರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆಂದು ಕೇರಳ ಪೊಲೀಸರು ಭಾನುವಾರ ರೆಹಾನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.
ಲಕ್ಷಾಂತರ ಹಿಂದೂಗಳ ಭಾವನೆಗೆ ಧಕ್ಕೆಯುಂಟು ಮಾಡಿದ ಹಿನ್ನಲೆಯಲ್ಲಿ ಮುಸ್ಲಿಂ ಸಮುದಾಯ ಈ ಹಿಂದೆ ರೆಹಾನ ಅವರನ್ನು ಕೇರಳ ಮುಸ್ಲಿಂ ಮಮಾತ್ ಮಂಡಳಿಯಿಂದ ಉಚ್ಛಾಟನೆಗೊಳಿಸಿತ್ತು. ಶಬರಿಮಲೆ ಪ್ರವೇಶ ಮಾಡಲು ಯತ್ನ ಮಾಡಿದ ಹಿನ್ನಲೆಯಲ್ಲಿ ಕಳೆದ ಶುಕ್ರವಾರ ರೆಹಾನ ಮನೆಯನ್ನು ಧ್ವಂಸಗೊಳಿಸಲಾಗಿತ್ತು.