HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               ಕನ್ನಡ ಬಾರದ ಶಿಕ್ಷಕ ನೇಮಕಾತಿಯ ಮರ್ಮ ಏನು?
    ಕಾಸರಗೋಡಿನ ಕನ್ನಡ ಮಾಧ್ಯಮ ಶಾಲಾ ವಿದ್ಯಾಥರ್ಿಗಳ ವಿವಿಧ ಪಠ್ಯ ಬೋಧನೆಗೆ ಸಂಬಂಧಿಸಿ ಶಿಕ್ಷಕ ನೇಮಕಾತಿಯಲ್ಲಿ  ರಾಜ್ಯ ಲೋಕಸೇವಾ ಆಯೋಗವು ಇತ್ತೀಚೆಗೆ ವಹಿಸುತ್ತಿರುವ ನಿರ್ಲಕ್ಷ್ಯ ಮತ್ತು ಇದರ ಹಿನ್ನೆಲೆಯಲ್ಲಿ ಕನ್ನಡ ಬಾರದ ಮಲೆಯಾಳಿ ಶಿಕ್ಷಕರ ನೇಮಕದಲ್ಲಿ ಕನ್ನಡಿಗರ ಕೈವಾಡ ಇದೆ ಎಂಬ ಗುಲ್ಲಿನ ಮಧ್ಯೆ ಕಾಸರಗೋಡು ಸರಕಾರಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ, ಸಾಹಿತಿ, ಸಂಶೋಧನಾ ನಿದರ್ೇಶಕಿ ಡಾ.ಯು.ಮಹೇಶ್ವರಿ ತಮ್ಮ ಅನಿಸಿಕೆಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.ಅಭಿಪ್ರಾಯಗಳು ಡಾ.ಯು.ಮಹೇಶ್ವರಿ ಅವರ ಖಾಸಗೀ ಚಿಂತನೆಗಳಾಗಿದ್ದು, ಸಮರಸ ಲೇಖನದ ಹಕ್ಕು ಹೊಂದಿರುವುದಿಲ್ಲ.
 
              ಅನಿಸಿಕೆ
      ಕಾಸರಗೋಡಿನಲ್ಲಿ ಕನ್ನಡ ಮಾಧ್ಮಮ ಶಾಲೆಗಳಿಗೆ ಕನ್ನಡ ಗೊತ್ತಿಲ್ಲದ ಅಭ್ಯಥರ್ಿಗಳು ಕೇರಳ ಲೋಕಸೇವಾ ಆಯೋಗದ ಆಯ್ಕೆ ಪಟ್ಟಿಯಲ್ಲಿ ಬಂದು ಅವರು ನೇಮಕಾತಿಗೊಳ್ಳುತ್ತಿರುವ ಬಗ್ಗೆ  ಕನ್ನಡಿಗರಲ್ಲಿ ಎಲ್ಲೆಡೆ ಆತಂಕ ಆವರಿಸಿರುವ ಈ ಹೊತ್ತಿನಲ್ಲಿ ಒಂದೆರಡು ವಿಷಯಗಳನ್ನು ಹಂಚಿಕೊಳ್ಳಬೇಕೆನಿಸಿದೆ. ಹೀಗೆ ಅನರ್ಹರು ಆಯ್ಕೆಗೊಳ್ಳಲು ಕನ್ನಡ ಭಾಷಾ ತಜ್ಞರೇ ಹೊಣೆ ಎಂಬಂತೆ  ಜಾಲತಾಣಗಳಲ್ಲಿ ಪತ್ರಿಕಾ ಮಾಧ್ಯಮಗಳಲ್ಲಿ ಬಹಳಷ್ಟು ಮಾತುಗಳು ಕೇಳಿ ಬರುತ್ತಿವೆ.ಹಾಗೆ ಮಾತಾಡಿದವರ ಕನ್ನಡದ ಬಗೆಗಿನ ಕಳಕಳಿ, ಕನ್ನಡ ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿ ನನಗೆ ಅರ್ಥವಾಗುತ್ತದೆ.
        ಆದರೆ ನೇಮಕಾತಿಯ ಪ್ರಕ್ರಿಯೆಯಲ್ಲಿ ಸಂದರ್ಶನದ ವೇಳೆ ಆಯ್ಕೆ ಸಮಿತಿಯಲ್ಲಿ ಒಟ್ಟು ಮೂವರು ಯಾ ನಾಲ್ವರು ಇರುತ್ತಾರೆ. ಆಯಾ ವಿಷಯತಜ್ಞರು(ಇವರು ಕನ್ನಡಮಾಧ್ಯಮದವರು ಎಂಬುದರ ಬಗೆಗೆ ಖಾತರಿ ಇಲ್ಲ),ಪಿ ಎಸ್. ಸಿ ಯ ಸದಸ್ಯರು(ಒಬ್ಬರು/ಇಬ್ಬರು) ಕೂಡ ಒಳಗೊಂಡಿದ್ದು ಅದರ ಅಧ್ಯಕ್ಷರು ಪಿ. ಎಸ್. ಸಿಯ ಸದಸ್ಯರೇ ಆಗಿರುತ್ತಾರೆ. ಇವರ ಜೊತೆಗೆ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಗಣಿತ, ಸಮಾಜ ವಿಜ್ಞಾನ,ಇತ್ಯಾದಿ ವಿಷಯಗಳ ಬೋಧನೆಗೆ ಕನ್ನಡ ಭಾಷಾಜ್ಞಾನದ ಖಾತರಿಗೆ ಆಯ್ಕೆ ಪ್ರಕ್ರಿಯೆಯಲ್ಲಿ ಸಹಾಯಕರಾಗಿ ಭಾಷಾ ತಜ್ಞರನ್ನು  ಕರೆಯುತ್ತಾರೆ. ಅಭ್ಯಥರ್ಿಗೆ ಕನ್ನಡ ಭಾಷಾ ಜ್ಞಾನ ಇದೆಯೆಂಬ ಖಾತರಿ ಅತ್ಯಂತ ಅವಶ್ಯಕವೆನ್ನುವುದು ನಿಜವಾದರೂ ಭಾಷಾ ತಜ್ಞರಾಗಿದ್ದುಕೊಂಡು ಆಯ್ಕೆಸಮಿತಿಗೆ ಸಹಾಯಕರಾಗಿ ಹೋದವರ ನಿರ್ಣಯವೇ ಅಂತಿಮವಾಗಿ ನಿಲ್ಲುತ್ತದೆ ಎನ್ನುವುದಕ್ಕೆ ಆಧಾರವಿಲ್ಲ.ಅದು ಗೌಪ್ಯವಿಷಯವಾಗಿರುವ ಕಾರಣ ನಿಜವಾಗಿ ನಡೆದದ್ದೇನು ಎಂಬುದನ್ನು ಮಾಹಿತಿ ಹಕ್ಕಿನ ಮೂಲಕ ತಿಳಿಯಲೂ ಸಾಧ್ಯವಿಲ್ಲ.
         ಆಯ್ಕೆ ಸಮಿತಿಯ ಅಧ್ಯಕ್ಷರು (ಅಂದರೆ ಪಿ ಎಸ್ .ಸಿಯ ಓರ್ವಸದಸ್ಯರು) ನಿಷ್ಠೆಯುಳ್ಳವರೂ ಪ್ರಾಮಾಣಿಕರೂ ಆಗಿದ್ದರೆ ಭಾಷಾತಜ್ಞರಾಗಿ ಹೋದವರ ಅಭಿಪ್ರಾಯವನ್ನು ಮಾನಿಸಬಹುದು.  ಹಾಗಲ್ಲವಾದರೆ 'ನೀವೇನು ಬೇಕಾದರೂ ಬರೆಯಿರಿ; ನಾವು ಮಾಡುವುದನ್ನು ಮಾಡುತ್ತೇವೆ' ಎಂದು ನಿರ್ಲಕ್ಷ್ಯವನ್ನು ತೋರಿ ಮಲಯಾಳಿ ಅಭ್ಯಥರ್ಿಗಳಿಗೆ ಹಾದಿ ಸುಗಮವಾಗಿಸಬಹುದು. ಮಲಯಾಳಿ ಅಭ್ಯಥರ್ಿಗಳೊಂದಿಗೆ ಮೊದಲೇ ಕೊಟ್ಟ ಸೂಚನೆಯಂತೆ ಪ್ರಶ್ನೆಗಳನ್ನು ಕೇಳಿ ಅವರು ಕಂಠಪಾಠ ಮಾಡಿ ಒಪ್ಪಿಸಿದುದನ್ನೇ ಅರ್ಹತೆಯೆಂದು ಪರಿಗಣಿಸಿ ಅದರ ಸುಳುಹನ್ನು ತಿಳಿದ ಭಾಷಾ ತಜ್ಞರ ಅಭಿಪ್ರಾಯವನ್ನು ಮೀರಿ ಅವರು ಆಯ್ಕೆ ಪಟ್ಟಿಯಲ್ಲಿ ಸೇರ್ಪಡೆಯಾಗಬಹುದು. ಈಗ ಆರೋಪಿಸ್ಥಾನದಲ್ಲಿರುವ ಭಾಷಾ ತಜ್ಞರೊಬ್ಬರು  ಹಿಂದೊಮ್ಮೆ ಆಯ್ಕೆ ಸಮಿತಿಯಲ್ಲಿ ತಾವು ಭಾಷಾ ತಜ್ಞರಾಗಿ ಹೋದ ಸಂದರ್ಭದಲ್ಲಿ  ಸಂದರ್ಶನಕ್ಕೆ ಬಂದ 13 ಅಭ್ಯಥರ್ಿಗಳೂ ಕನ್ನಡ ಭಾಷಾ ಜ್ಞಾನವಿಲ್ಲದವರೆಂಬ ಕಾರಣದಿಂದ ಅನರ್ಹರು ಎಂದು ತಾವು  ಷರಾ ಬರೆದುದನ್ನು ಆಗ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದವರು ಮಾನ್ಯ ಮಾಡಿದ್ದನ್ನು ನೆನೆದುಕೊಳ್ಳುತ್ತಾರೆ. ಅದರಂತೆ ಆಯ್ಕೆ ಪಟ್ಟಿ ಸಿದ್ಧವಾಗಿತ್ತು ಕೂಡ. ತಮ್ಮ ಕರ್ತವ್ಯದಲ್ಲಿ ನಿಷ್ಠೆ ಪ್ರಾಮಾಣಿಕತೆ ಇಲ್ಲದ ಅಧಿಕಾರಿಗಳು ಇದ್ದಾಗ ಹೀಗೆ ತಾವು ತಪ್ಪು ಮಾಡಿ ಇತರರ ಮೂತಿಗೆ ಬೆಣ್ಣೆ ಸವರಿ ಅವರೇ ಹೊಣೆಗಾರರೆಂದು ಹೇಳಿ ತಮ್ಮೊಳಗೆ ಪರಸ್ಪರ ಬೈದಾಡುವ ಚಂದವನ್ನು ನೋಡುತ್ತಾರೆ. ಮತ್ತೊಂದು ವಿಷಯವೇನೆಂದರೆ  ಮೇಲೆ ಹೇಳಲಾದ ಅಧ್ಯಾಪಕ ಹುದ್ದೆಗೆ ಪಿ.ಎಸ್.ಸಿ ನೋಟಿಫಿಕೇಶನ್ ಆದ ಸಂದರ್ಭದಲ್ಲಿ ಆ ಹುದ್ದೆಗೆ ಕನ್ನಡ ಭಾಷಾ ಜ್ಞಾನದ ಅರ್ಹತೆಯನ್ನು ಸ್ಪಷ್ಟವಾಗಿ ಸೂಚಿಸಿರಲಿಲ್ಲ.
       ಆದರೆ ಸಂದರ್ಶನ ನಡೆಯುವದಕ್ಕಿಂತ ಮುಂಚಿತವಾಗಿ  ಅಂದರೆ 2016ರಲ್ಲಿಕನ್ನಡಿಗರ ಹೋರಾಟದ ಫಲವಾಗಿ ಬಂದ ಕೇರಳ ಸರಕಾರದ ಆದೇಶದಲ್ಲಿ ಅಭ್ಯಥರ್ಿಯು ಎಸ್. ಎಸ್ ಎಲ್. ಸಿ ವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತಿರಬೇಕು ಎಂದು  ಅರ್ಹತೆಯನ್ನು ಸ್ಪಷ್ಟಪಡಿಸಿದೆ.ವಿದ್ಯಾಥರ್ಿಗಳ ಹಿತದೃಷ್ಟಿಯಿಂದ ಈ ಆದೇಶವನ್ನು ತಿಳಿದು ಅದನ್ನು ಗೌರವಿಸಬೇಕಾದ್ದು ಪಿ.ಎಸ್. ಸಿಯ ಹೊಣೆ. ಯಾಕೆಂದರೆ ಇದು ಶೈಕ್ಷಣಿಕ ಕ್ಷೇತ್ರ.  ಅಧ್ಯಾಪಕ ಹುದ್ದೆ ಎನ್ನುವುದು ಒಂದು ಕಟ್ಟ ಅಥವಾ ತಲೆಹೊರೆೆಯನ್ನು ತೆಗೆದುಕೊಂಡುಹೋಗಿ ಇಳಿಸುವ ದೈಹಿಕಶ್ರಮದ ಕೆಲಸವಲ್ಲ.ಇಲ್ಲಿ ಭಾಷೆಯ ಮೂಲಕವೇ ಸಂವಹನವೆನ್ನುವುದು ಯಾವ ಭಾಷಾ ತಜ್ಞರ ಸಹಾಯವಿಲ್ಲದೆಯೂ ಅರ್ಥವಾಗುವಂತದ್ದು.ಆದ್ದರಿಂದ  ಅಭ್ಯಥರ್ಿಗಳ ಅಂಕಪಟ್ಟಿ ಪ್ರಮಾಣಪತ್ರಗಳ ಪರಿಶೀಲನೆಯ ಸಂದರ್ಭದಲ್ಲಿಯೇ 2016ರ ಸರಕಾರದ ಆದೇಶವನ್ನು ಆಧಾರವಾಗಿಟ್ಟುಕೊಂಡು ವಿವೇಚನೆಯನ್ನು ತೋರಿ ಕನ್ನಡ ಮಾಧ್ಯಮದಲ್ಲಿ ಹತ್ತನೆಯ ತರಗತಿಯವರೆಗೆ ಓದದವರನ್ನು ಸಂದರ್ಶನದಿಂದ ಹೊರತುಪಡಿಸಬಹುದಿತ್ತು. 'ನೋಟಿಫಿಕೇಶನ್ ಆದದ್ದು ಸರಕಾರದ ಆದೇಶಕ್ಕಿಂತ ಮೊದಲು; ಆದ್ದರಿಂದ ನಂತರ ಬಂದ ಆದೇಶವು ಇದಕ್ಕೆ ಅನ್ವಯವಲ್ಲ' ಎಂದು ನಿಯಮವನ್ನು ಕುರುಡಾಗಿ ಅಮಾನವೀಯವಾಗಿ ವ್ಯಾಖ್ಯಾನಿಸುವವರನ್ನು ನಾವು ಪ್ರಶ್ನಿಸಬೇಡವೇ?ಕನ್ನಡ ಅಧ್ಯಾಪಕರ ನೇಮಕಾತಿಯ ವಿಷಯದಲ್ಲಿ ಮಾತ್ರ ವ್ಯವಸ್ಥೆಯಲ್ಲಿ ಇರುವ ಈ ದೋಷವನ್ನು ತಮಗೆ ಬೇಕಾದಂತೆ ವ್ಯಾಖ್ಯಾನಿಸಿಕೊಂಡು  ವಿವೇಚನೆಯಿಲ್ಲದೆ ಅಧಿಕಾರವನ್ನು ಬಳಸಿಕೊಂಡು ಅರ್ಹಕನ್ನಡ ಅಭ್ಯಥರ್ಿಗಳನ್ನು ವಂಚಿಸಿ ಮಲಯಾಳಿ ಅಭ್ಯಥರ್ಿಗಳಿಗೆ ಅವಕಾಶವನ್ನು ಅನ್ಯಾಯವಾಗಿ ಒದಗಿಸಿಕೊಡುತ್ತಿರುವವರ ಬಗ್ಗೆ ನಾವು ದನಿಯೆತ್ತಬೇಡವೇ?. ಜಾಲತಾಣಗಳಲ್ಲಿ ನಾವು ನಾವೇ ಬೈದಾಡಿಕೊಳ್ಳುವ ಒಂದು ಪ್ರವೃತಿಯಿಂದ್ತ ನಿಜವಾದ ಅಪರಾಧಿಗಳು ಸುರಕ್ಷಿತರಾಗಿರುವುದಕ್ಕೆ ನಾವು ಅನುಕೂಲ ಮಾಡುತ್ತಿದ್ದೇವೆಯೆಂದು ನನಗನಿಸುತ್ತಿದೆ.ಅಲ್ಲದೆ 'ಲಿಖಿತ ' ಪರೀಕ್ಷೆಯೆಂದು ಕರೆಸಿಕೊಳ್ಳುವ ಒ.ಎಮ್. ಆರ್ ಪರೀಕ್ಷೆಯಲ್ಲಿ ಕೇವಲ ಒಂದು ಎರಡು ಅಂಕಗಳನ್ನು ಗಳಿಸಿದವರು ಕೂಡ ಸಂದರ್ಶನಕ್ಕೆ ಅರ್ಹರಾಗುತ್ತಾರೆ  ಎಂದರೆ ಈ ವ್ಯವಸ್ಥೆಯ ಬಗ್ಗೆ ಏನೆನ್ನಬೇಕು?ಮತ್ತು ಸಂದರ್ಶನದಲ್ಲಿ ಲಿಖಿತ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಕನ್ನಡದ ಅರ್ಹ ಅಭ್ಯಥರ್ಿಗಳನ್ನು ಕನಿಷ್ಠ ಅಂಕಗಳಿಸಿದ ಈ ಮಲಯಾಳಿ ಅಭ್ಯಥರ್ಿಗಳು ಹಿಂದಿಕ್ಕಿದ್ದಾರೆ ಎಂದರೆ ಆಯ್ಕೆ ಸಮಿತಿಯಲ್ಲಿ ನಿಜವಾಗಿ ಅಧಿಕಾರ ಹೊಂದಿದವರ ಕೈವಾಡವು ಕಾಣಿಸುವುದಿಲ್ಲವೇ.?

                                                                    ಮಹೇಶ್ವರಿ ಯು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries