HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                  ಗಮನ ಸೆಳೆದ ಚಿಣ್ಣರ ಕಲರವ ಕಾರ್ಯಕ್ರಮ

    ಬದಿಯಡ್ಕ : ಉನ್ನತವಾದ ಧ್ಯೇಯವನ್ನಿಟ್ಟುಕೊಂಡು ಮಕ್ಕಳ ಸರ್ವತೋಮುಖ ಬಳವಣಿಗೆಗೆ ಪೂರಕವಾಗುವ ಕಾರ್ಯಕ್ರಮಗಳನ್ನು  ಆಯೋಜಿಸಿ ಬಾಲಪ್ರತಿಭೆಗಳಳಿಂದಲೇ ಕಾರ್ಯಕ್ರಮದ ಉದ್ಘಾಟನೆಯನ್ನು  ಮಾಡಿಸುತ್ತಿರುವುದು ಸಂತೋಷದ ವಿಷಯ. ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡುತ್ತಿರುವ ಪ್ರತಿಯೊಂದು ಪ್ರತಿಭೆಯನ್ನೂ ತಮ್ಮ ವೇದಿಕೆಯ ಮೂಲಕ ಜನರಿಗೆ ಪರಿಚಯಿಸುವ ಕಾರ್ಯ ಶ್ಲಾಘನೀಯ. ಹಾಗೇಯೇ ಅವಕಾಶ ಹಾಗೂ ಅಂಗೀಕಾರ ನಮ್ಮಂತ ಮಕ್ಕಳ ಪುಟ್ಟ ಪುಟ್ಟ   ಪ್ರಯತ್ನಗಳನ್ನು ದೊಡ್ಡ ಸಾಧನೆಯೆಡೆಗೆ ಕರೆದೊಯ್ಯುತ್ತದೆ ಎಂದು ದ.ಕ.ಜಿಲ್ಲಾ  ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಪಂಚಮುಖಿ ಶಿಕ್ಷಣವನ್ನು  ಪಡೆಯುತ್ತಿರುವ ಬಾಲಪ್ರತಿಭೆ ಚೇತನ್ ಯಾದವ್ ಸಂತಸ ವ್ಯಕ್ತಪಡಿಸಿದರು.
    ಅವರು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಆಶ್ರಯದಲ್ಲಿ  ಬದಿಯಡ್ಕ ಎಸ್.ಎಸ್.ಪಿ.ಎ.ಎಲ್.ಪಿ.ಎಸ್ ಶಾಲೆಯಲ್ಲಿ ಶನಿವಾರ ಜರುಗಿದ ಚಿಣ್ಣರ ಕಲರವ ಎಂಬ ಮಕ್ಕಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
    ಅಧ್ಯಕ್ಷತೆ ವಹಿಸಿದ ಅಕಾಡೆಮಿಯ ಅಧ್ಯಕ್ಷರಾದ ಪ್ರಭಾಕರ ಕಲ್ಲೂರಾಯ ಬನದಗದ್ದೆ ಅವರು ಮಾತನಾಡಿ ಮಕ್ಕಳ ಸೃಜನಾತ್ಮಕ ಚಿಂತನೆಗಳಿಗೆ ಸಾಹಿತ್ಯ ಸಾಂಸ್ಕೃತಿಕ ಸೊಗಡನ್ನು  ಸೇರಿಸಿ ಕ್ರಿಯಾಶೀಲ ಚಟುವಟಿಕೆಗಳಿಗೆ ಪ್ರೇರಣೆ ನೀಡುವುದೇ ನಮ್ಮ ಪ್ರಯತ್ನ ಎಂದು ಹೇಳಿದರು.
     ಡಾ.ಬೇ.ಸಿ, ಗೋಪಾಲಕೃಷ್ಣ ಭಟ್ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಕನ್ನಡ ಅಧ್ಯಾಪಕ ಸಂಘಟಣೆಯ ಅಧ್ಯಕ್ಷರಾದ  ಶ್ರೀಧರ ನಾಯ್ಕ್  ಶೇಣಿ ,   ಕನರ್ಾಟಕ ಜನಪದ ಪರಿಷತ್ತ್ ಪ್ರಶಸ್ತಿ ಪುರಸ್ಕೃತರಾದ ಜಯರಾಮ ಪಾಟಾಳಿ ಪಡುಮಲೆ, ಕವಿಗಳಾದ ಸುಭಾಷ್ ಪೆರ್ಲ, ರವಿಕಾಂತ ಕೇಸರಿ ಕಡಾರು, ಶಾಲಾ ಮುಖ್ಯೋಪಾಧ್ಯಾಯಿನಿ ಅಂಬಿಕಾ ಸರಸ್ವತಿ , ರಕ್ಷಕ ಶಿಕ್ಷಕ ಸಂಘದ  ಅಧ್ಯಕ್ಷ ಕುಸುಮಾ ಮುಂತಾದವರು ಶುಭಾಸಂಶನೆಗೈದರು. ಪತ್ರಕರ್ತ ವಿರಾಜ್ ಅಡೂರು ದಸರಾ ಹಬ್ಬದ ಕುರಿತು ಉಪನ್ಯಾಸ ನೀಡಿದರು. ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡಮಿಯ ಕಾರ್ಯದಶರ್ಿ ಅಖಿಲೇಶ್ ನಗುಮುಗಂ ಸ್ವಾಗತಿಸಿ , ಶಾಲಾ ಅಧ್ಯಾಪಕ ರಾಜೇಶ್ ಮಾಸ್ಟರ್ ವಂದಿಸಿದರು. ಮೀಡಿಯಾ ಕ್ಲಾಸಿಕಲ್ನ ಶ್ರೀಕಾಂತ್ ನೆಟ್ಟಣಿಗೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ  ಡಾ.ಬೇ.ಸಿ, ಗೋಪಾಲಕೃಷ್ಣ ಭಟ್ ಅಧ್ಯಕ್ಷತೆಯಲ್ಲಿ  ಮಕ್ಕಳ ಕವಿಗೋಷ್ಠಿ  ನಡೆಯಿತು. ಕವಿಯತ್ರಿ ಸಂಧ್ಯಾ ಗೀತಾ ಬಾಯಾರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಪುಟಾಣಿ ಚಿಣ್ಣರಿಗೆ ಕನ್ನಡ ಹಾಡುಗಳನ್ನು ಕಲಿಸಿಕೊಟ್ಟರು. ದಸರಾ ನಾಡೋತ್ಸವದಂಗವಾಗಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
  ಕೇರಳ ವಿಧಾನ ಸಭೆಯಲ್ಲಿ ಕನ್ನಡದಲ್ಲಿಯೇ ಪ್ರತಿಜ್ಞೆ ಯನ್ನು  ಮಾಡಿದ, ಕಾಸರಗೋಡಿನ ಕನ್ನಡಿಗರಿಗೆ ಪ್ರೋತ್ಸಾಹ ಮತ್ತು ಬೆಂಬಲವಾಗಿದ್ದು ಶನಿವಾರ ಅಗಲಿದ ಮಂಜೇಶ್ವರ ಶಾಸಕ ಅಬ್ದುಲ್ ರಝಾಕ್ ಅವರಿಗೆ ಶ್ರದ್ಧಾಂಜಲಿ ಅಪರ್ಿಸಿ ಆತ್ಮ ಶಾಂತಿಗಾಗಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.


   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries