`ಅಮರಾವತಿ' ಕೃತಿ ಯಕ್ಷ ಸಾಹಿತ್ಯ ಲೋಕದಲ್ಲಿ ಅಮರವಾಗಲಿ : ಡಾ.ರಮಾನಂದ ಬನಾರಿ
ಮುಳ್ಳೇರಿಯ: ಕೃತಿಯೆಂಬುದು ಕೃತಿಕಾರನ ಮಗುವಿದ್ದ ಹಾಗೆ. ಜನಿಸಿದ ಮಗು ಸದ್ದೆಬ್ಬಿಸಬೇಕು. ಆಗಲೇ ತಾಯಿಗೆ ಮತ್ತು ಬಂಧು ಮಿತ್ರರಿಗೆ ಸಂಭ್ರಮ. ಕೃತಿಯ ಬಗೆಗೆ ಕಲ್ಪನೆ ಕೃತಿಕಾರನ ಮನದಲ್ಲಿ ಯಾವಾಗ ಮೂಡಿತೋ ಆಗಲೇ ಕೃತಿಯ ಜನನದ ಕ್ಷಣ ಗಣನೆ ಪ್ರಾರಂಭವಾಯಿತೆಂದು ತಿಳಿಯಬೇಕು. ಎಳೆಯ ವಯಸ್ಸಿಗೆ ಈ ರೀತಿ ಅದ್ಭುತ ಮೇಧಾ ಶಕ್ತಿಯನ್ನು ಹೊಂದಿರುವ ಬಾಲೆ ಸನ್ನಿಧಿ ಗುರು ಹಿರಿಯರ ಮಾರ್ಗದರ್ಶದೊಂದಿಗೆ ಬಹಳಷ್ಟು ಬೆಳೆಯಬಲ್ಲಳು ಮತ್ತು ಈಕೆಯ ಕೃತಿ ಯಕ್ಷ ಸಾಹಿತ್ಯ ಲೋಕದಲ್ಲಿ ಅಮರವಾಗಲಿ ಎಂದು ಹಿರಿಯ ಕವಿ, ಯಕ್ಷಗಾನ ಅರ್ಥಧಾರಿ, ಸಾಹಿತಿ, ವೈದ್ಯ ಡಾ.ರಮಾನಂದ ಬನಾರಿ ಅವರು ಹೇಳಿದರು.
ದೇಲಂಪಾಡಿ ಬನಾರಿ ಕೀರಿಕ್ಕಾಡು ವಿಷ್ಣು ಮಾಸ್ಟರ್ ಸಭಾಭವನದಲ್ಲಿ ನಡೆದ ಕಾಸರಗೋಡಿನ ಬಹುಮುಖ ಪ್ರತಿಭಾನ್ವಿತೆ ಕುಮಾರಿ ಸನ್ನಿಧಿ ಟಿ.ರೈ ಪೆರ್ಲ ಅವರ `ಅಮರಾವತಿ' ಯಕ್ಷಗಾನ ಪ್ರಸಂಗ ಪುಸ್ತಕ ಲೋಕಾರ್ಪಣೆ ಮಾಡಿ ಅವರು ಶುಭಹಾರೈಕೆಯ ನುಡಿಗಳನ್ನಾಡಿದರು.
ಹಿರಿಯರಾದ ವನಮಾಲಾ ಕೇಶವ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಡಾ.ಧನಂಜಯ ಕುಂಬ್ಳೆ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಗುರುಗಳಾದ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳಿಗೆ ಸನ್ನಿಧಿಯಿಂದ ಗುರುವಂದನೆಯು ನಡೆಯಿತು. ಡಿ.ವೆಂಕಟ್ರಮಣ ಭಟ್ ಅರಮಂಗಿಲ, ನಾರಾಯಣ ರೈ ಮತ್ತು ಸನ್ನಿಧಿ ಟಿ.ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಾರಾಯಣ ಕಾರ್ಯಕ್ರಮವನ್ನು ನಿರೂಪಿಸಿದರು. ಗುರುಗಳಾದ ವಿಶ್ವವಿನೋದ ಬನಾರಿ ಅವರ ಮಾರ್ಗದರ್ಶನದಲ್ಲಿ `ಅಮರಾವತಿ' ಯಕ್ಷಗಾನದ ಅಮೋಘ ಪ್ರಥಮ ಪ್ರದರ್ಶನ ನಡೆಯಿತು.