HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               ಕಾಸರಗೋಡು ಜಿಲ್ಲಾ  ಪಂಚಾಯತ್ ಸಭೆ : ಕ್ರೀಡೋಪಕರಣಗಳ ವಿತರಣಾ ಯೋಜನೆ
    ಕಾಸರಗೋಡು: ಕಾಸರಗೋಡು ಜಿಲ್ಲೆಯ ಹದಿಹರೆಯದವರ ಕ್ರೀಡಾಸಕ್ತಿಯನ್ನು  ಹೆಚ್ಚಿಸುವ ಸಲುವಾಗಿ ಜಿಲ್ಲಾ  ಪಂಚಾಯತ್ ನೇತೃತ್ವದಲ್ಲಿ 2015-16ನೇ ವಾಷರ್ಿಕ ಯೋಜನೆಯಡಿ ಜಾರಿಗೊಳಿಸಿದ ಕ್ರೀಡೋಪಕರಣಗಳನ್ನು  ವಿತರಿಸುವ ಯೋಜನೆಗೆ ಸಂಬಂಧಿಸಿ ಕೇರಳ ಹೈಕೋಟರ್್ನ ಇತ್ತೀಚಿನ ತೀಪರ್ಿನ ಹಿನ್ನೆಲೆಯಲ್ಲಿ  ವಿವಿಧ ಕ್ರಮಗಳನ್ನು  ಕೈಗೊಳ್ಳಲು ನಿರ್ಧರಿಸಲಾಯಿತು. ಈ ನಿಟ್ಟಿನಲ್ಲಿ  ಜಿಲ್ಲಾ  ಪಂಚಾಯತ್ ಅಧ್ಯಕ್ಷ  ಎ.ಜಿ.ಸಿ.ಬಶೀರ್ ಅವರ ನೇತೃತ್ವದಲ್ಲಿ ಜಿ.ಪಂ. ಆಡಳಿತ ಸಮಿತಿಯ ಸಭೆ ಶನಿವಾರ ನಡೆಯಿತು.
    ಕ್ರೀಡಾ ಕ್ಷೇತ್ರದಲ್ಲಿ  ಜಿಲ್ಲೆಯು ಅನುಭವಿಸುತ್ತಿರುವ ಹಿನ್ನೆಡೆಗಳಿಗೆ ಒಂದು ಪರಿಹಾರ ಎಂಬ ನೆಲೆಯಲ್ಲಿ  ಕಾರ್ಯಗತಗೊಳಿಸಿದ ಈ ಯೋಜನೆಯಲ್ಲಿ  ವಿದ್ಯಾಲಯಗಳಲ್ಲಿ  ಗುಣಮಟ್ಟದ ಕ್ರೀಡೋಪಕರಣಗಳನ್ನು  ವಿತರಿಸುವುದರ ಮೂಲಕ ಬೆಳೆಯುತ್ತಿರುವ ಕ್ರೀಡಾಪಟುಗಳನ್ನು  ದೊಡ್ಡ ಮಟ್ಟದ ಸ್ಪಧರ್ೆಗಳನ್ನು  ಎದುರಿಸುವ ನಿಟ್ಟಿನಲ್ಲಿ  ಸಜ್ಜುಗೊಳಿಸಲು ಜಿಲ್ಲಾ  ಪಂಚಾಯತ್ ಉದ್ದೇಶಿಸಿದೆ ಎಂದು ಜಿ.ಪಂ. ಅಧ್ಯಕ್ಷರು ತಿಳಿಸಿದ್ದಾರೆ.
    ಆದರೆ ಯೋಜನೆಯನ್ವಯ ಈ ತನಕ ವಿತರಿಸಿದ ಕ್ರೀಡೋಪಕರಣಗಳಿಗೆ ಸಂಬಂಧಿಸಿ ಆರೋಪಗಳು ಎದುರಾದ ಪರಿಣಾಮ ಜಿಲ್ಲಾ  ಪಂಚಾಯತ್ ಆಡಳಿತ ಸಮಿತಿಯು ತಜ್ಞರ ಸಮಿತಿಯೊಂದನ್ನು  ರೂಪಿಸಿದೆ. ಗುತ್ತಿಗೆ ಸ್ವೀಕರಿಸಿದ ಪ್ಲೇ ವೆಲ್ ಎಂಬ ಸಂಸ್ಥೆಯು ವಿತರಿಸಿದ ಕ್ರೀಡೋಪಕರಣಗಳಲ್ಲಿ  ಮಕ್ಕಳಿಗೆ ಉಪಯೋಗ ಯೋಗ್ಯವಲ್ಲದ ಇಪ್ಪತ್ತರಷ್ಟು  ಉಪಕರಣಗಳು ಇರುವುದಾಗಿ ಸಮಿತಿಯು ಪತ್ತೆಹಚ್ಚಿದ ಪರಿಣಾಮ ಉದ್ದೇಶಿತ ಯೋಜನೆಯನ್ನು  ಕೈಬಿಡಲು ಜಿಲ್ಲಾ  ಪಂಚಾಯತ್ ಆಡಳಿತ ಸಮಿತಿಯು ತೀಮರ್ಾನಿಸಿತ್ತು.
     ಯೋಜನೆಗೆ ಸಂಬಂಧಿಸಿ ಎಲ್ಲ  ಕ್ರೀಡೋಪಕರಣಗಳನ್ನು  ವಿತರಿಸಿರುವುದರಿಂದ ಅವುಗಳ ಮೊತ್ತ  ಮಂಜೂರು ಮಾಡಬೇಕು ಎಂದು ಆಗ್ರಹಿಸಿ ಗುತ್ತಿಗೆ ಸ್ವೀಕರಿಸಿದ ಸಂಸ್ಥೆಯು ರಾಜ್ಯ ಉಚ್ಛ ನ್ಯಾಯಾಲಯವನ್ನು  ಸಂಪಕರ್ಿಸಿತ್ತು. ವಿತರಿಸಿದ ಉಪಕರಣಗಳಲ್ಲಿ  ಗುಣಮಟ್ಟವಿರುವ ಹಾಗೂ ಉಪಯೋಗಕ್ಕೆ ಯೋಗ್ಯವಾಗಿರುವವುಗಳ ಮೊತ್ತವನ್ನು  ಸಂಸ್ಥೆಗೆ ನೀಡಲು ಹೈಕೋಟರ್್ ಇತ್ತೀಚೆಗೆ ಆದೇಶಿಸಿತ್ತು. ಹೈಕೋಟರ್್ ಹೊರಡಿಸಿದ ಇತ್ತೀಚೆಗಿನ ತೀರ್ಪನ ಕುರಿತು ಆಡಳಿತ ಸಮಿತಿಯ ಸಭೆಯಲ್ಲಿ  ಸಮಗ್ರವಾಗಿ ಚಚರ್ೆ ನಡೆಸಲಾಯಿತು.
    ಜಿಲ್ಲಾ  ಪಂಚಾಯತ್ ನೇತೃತ್ವದಲ್ಲಿ ರಚಿಸಲಾದ ಸಮಿತಿಯು ಕ್ರೀಡೋಪಕರಣಗಳನ್ನು  ದಾಸ್ತಾನಿಟ್ಟಿರುವ ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆ, ವೆಳ್ಳಿಕ್ಕೋತ್ ಎಂಪಿಎಸ್ಜಿಎಚ್ಎಸ್ಎಸ್ನಲ್ಲಿ  ತಪಾಸಣೆ ನಡೆಸಿ ಉಪಕರಣಗಳ ಕಾರ್ಯದಕ್ಷತೆಯ ಮೌಲ್ಯಮಾಪನ ನಡೆಸಿದ ಬಳಿಕ ವರದಿ ಸಲ್ಲಿಸಿ ಹೈಕೋಟರ್್ನ ತೀಪರ್ು ಅನುಸರಿಸಿ ಸಂಸ್ಥೆಯ ಹಣ ಮಂಜೂರುಗೊಳಿಸಲು ಯೋಜನೆಯ ನಿರ್ವಹಣಾ ಅಧಿಕಾರಿಯಾದ ಶಿಕ್ಷಣ ಉಪನಿದರ್ೇಶಕರಿಗೆ ಸಭೆಯಲ್ಲಿ  ಹೊಣೆಗಾರಿಗೆ ನೀಡಲಾಯಿತು.
   ಜಿಲ್ಲಾ  ಪಂಚಾಯತ್ ಅಧ್ಯಕ್ಷ  ಎ.ಜಿ.ಸಿ.ಬಶೀರ್ ಜಿ.ಪಂ. ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಉಪಾಧ್ಯಕ್ಷೆ  ಶಾಂತಮ್ಮ  ಫಿಲಿಪ್, ಸದಸ್ಯರಾದ ಫರೀದಾ ಝಕೀರ್ ಅಹಮ್ಮದ್, ಎ.ಪಿ.ಉಷಾ, ಶಾನವಾಸ್ ಪಾದೂರು, ಸುಪೈಜಾ ಅಬೂಬಕ್ಕರ್, ಇ.ಪದ್ಮಾವತಿ, ಎಂ.ಕೇಳು ಪಣಿಕ್ಕರ್, ಮುಮ್ತಾಜ್, ಪದ್ಮಜಾ, ಎಂ.ಎಂ.ಶಂನಾದ್ ಮುಂತಾದವರು ಉಪಸ್ಥಿತರಿದ್ದರು.
     ವಿಶೇಷ ಸಮಿತಿ ರೂಪೀಕರಣ : ಕ್ರೀಡಾ ಉಪಕರಣಗಳ ಉಪಯೋಗ ದಕ್ಷತೆ ಖಾತರಿಪಡಿಸಲು ವಿಶೇಷ ಸಮಿತಿಯನ್ನು  ರೂಪಿಸಲಾಗಿದೆ. ಜಿಲ್ಲಾ  ಪಂಚಾಯತ್ ಶಿಕ್ಷಣ ಮತ್ತು  ಆರೋಗ್ಯ ಸ್ಥಾಯೀ ಸಮಿತಿಯ ಅಧ್ಯಕ್ಷ  ಶಾನವಾಸ್ ಪಾದೂರು, ಜಿ.ಪಂ. ಸದಸ್ಯ ಜೋಸ್ ಪತಾಲಿಲ್, ಶಿಕ್ಷಣ ಉಪನಿದರ್ೇಶಕ ಡಾ.ಗಿರೀಶ್ ಚೋಲಯಿಲ್, ಕಾಸರಗೋಡು ಸರಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ರಾಜು ಎಂ.ಪಿ., ಕ್ರೀಡೋಪಕರಣಗಳನ್ನು  ದಾಸ್ತಾನಿಡಲಾದ ಶಾಲೆಗಳ ಕ್ರೀಡಾ ಅಧ್ಯಾಪಕರು, ಪ್ಲೇ ವೆಲ್ ಸ್ಪೋಟ್ಸರ್್ ಕೋಚ್ನ ಪ್ರತಿನಿಧಿ ಅವರನ್ನು  ಒಳಗೊಂಡ ಸಮಿತಿಯನ್ನು  ರಚಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries