HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಶಬರಿಮಲೆ ವಿವಾದ-ನಾಲ್ವರು ಬಂದವರು ಮರಳಿದರು
   ಕಾಸರಗೋಡು: ಶಬರಿಮಲೆ ವಿವಾದ ಭಾನುವಾರ ತೀವ್ರತೆಗೇರಿದ್ದು, ಭಾನುವಾರ ತೆಲಂಗಾಣ ಗುಂಟೂರಿನ ಯಾತ್ರಾ ತಮಡದಲ್ಲಿದ್ದನಾಲ್ವರು ಮಹಿಳೆಯರನ್ನು ಮರಳಿಕಳಿಸಲಾಯಿತು.
   ಭಾನುವಾರ ಗುಂಟೂರಿನ 40 ಅಯ್ಯಪ್ಪ ಭಕ್ತರ ತಮಡದಲ್ಲಿದ್ದವಾಸಂತಿ, ಆದಿಶೇಶಿ ಎಂಬವರನ್ನು ವಿರೋಧಿ ತಮಡ ಪಂಪೆಯಲ್ಲಿ ತಡೆಹಿಡಿಯಲಾಯಿತು.ಪೋಲೀಸರು ರಕ್ಷಣೆಯೊದಗಿಸಿ ಅಯ್ಯಪ್ಪ ದರ್ಶನ ಮಾಡಿಸುವ ಭರವಸೆ ನೀಡಿದರೂ ಪ್ರತಿಭಟನಕಾರರ ಪ್ರತಿರೋಧ ಗಮನಿಸಿ ಅವರು ಅಯ್ಯಪ್ಪ ದರ್ಶನ ಆಕಾಂಕ್ಷೆಯನ್ನು ಕೈಬಿಟ್ಟು ತೆರಳಿದರು.
  ಶಬರಿಮಲೆ ಹಾದಿಯ ನಡುಪಂದಲ್ ಎಂಬಲ್ಲಿ ಬಾಲಮ್ಮ ಎಂಬವರನ್ನು ತಡೆಹಿಡಿಯಲಾಯಿತು.ಈ ವೇಳೆ ಗಾಬರಿಯಿಂದ ಅಸ್ವಸ್ಥರಾದ ಅವರನ್ನು ಬಳಿಕಪೋಲೀಸರು ಪಂಪೆಗೆ ತಲಪಿಸಿ ಕಳಿಸಲಾಯಿತು.ಜೊತೆಗೆ ಇದೇ ಸಂದರ್ಭ ಶಬರಿಮಲೆ ಕಾನನ ಪ್ರವೇಶಿ ಸುವ ಮರಕ್ಕೂಟಂ ನಲ್ಲಿ ಪುಷ್ಪಲತಾ ಅವರನ್ನೂ ಅಯ್ಯಪ್ಪ ಕ್ರಿಯಾ ಸಮಿತಿ ತಡೆಹಿಡಿದು ಮರಳಿ ಕಳಿಹಿಸಿತು.
   ತಂತ್ರಿಗಳ ಹೇಳಿಕೆ ಬಗ್ಗೆ ವಿವಾದ:
   ಮಹಿಳಾ ಪ್ರವೇಶದ ಬಗ್ಗೆ ಶಬರಿಮಲೆ ತಂತ್ರಿವರ್ಯರು ಶುಕ್ರವಾರ ನೀಡಿದ ಹೇಳಿಕೆ ವಿವಾದವಾಗಿದೆ.ತಂತ್ರಿವರ್ಯ ಮಹೇಶ್ವರರು ಶಬರಿಮಲೆಗೆ ಮಹಿಳೆಯರು ಪ್ರವೇಶಿಸಿದರೆ ಶಬರಿಮಲೆಗರ್ಭಗೃಹ ಮುಚ್ಚಲಾಗುವುದೆಂಬ ಹೇಳಿಕೆ ವಿವಾದವಾಗಿದ್ದು, ದೈವಸ್ವಂ ಬೋಡರ್್ ಈ ಹೇಳಿಕೆ ಖಂಡಿಸಿ ತಂತ್ರಿವರ್ಯರಿಗೆ ಅಂತಹ ಹಕ್ಕಿಲ್ಲವೆಂದು ಪ್ರತಿಪಾದಿಸಿದೆ. ಬೋಡರ್್ ಸದಸ್ಯ ಕೆ.ಪಿ.ಶಂಕರದಾಸ್ ಅವರು ಭಾನುವಾರ ಮಾತನಾಡಿ ತಂತ್ರಿವರ್ಯರಿಗೆ ಸರಕಾರ ಸಂಬಳ ನೀಡುತ್ತಿರುವುದನ್ನು ಮರೆಯಬಾರದು ಎಂದು ತಿಳಿಸಿದರು. ಈ ಬಗ್ಗೆ ಮಾತನಾಡಿರುವ ಪಂದಳಂ ಅರಮನೆಯ ಪ್ರತಿನಿಧಿ ಶಶಿಕುಮಾರ ವರ್ಮ ಅವರು ತಂತ್ರಿಗಳಿಗೆ ಗರ್ಭಗೃಹ ಮುಚ್ಚುವ ಹಕ್ಕಿದೆ. ದೈವಸ್ವಂ ಬೋಡರ್್ ವೃಥಾ ವಿವಾದ ಸೃಷ್ಟಿಸುತ್ತಿದೆ ಎಂದು ಹೇಳಿಕೆ ನೀಡಿರುವರು.
    ಬಿಜೆಪಿಯಿಂದ ಪ್ರತಿಭಟನೆ:
  ಶಬರಿಮಲೆ ವಿವಾದ ಸಂಬಂಧಿಸಿ ಭಾನುವಾರ ಬಿಜೆಪಿ-ಸಂಘಪರಿವಾರ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿಗೆಪ್ರತಿಭಟನಾ ಮೆರವಣಿಗೆನಡೆಸಿತು. ಇದೇ ವೇಳೆ ನಿಶೇಧಾಜ್ಞೆ ಜಾರಿಯಲ್ಲಿರುವ ಪಂಪೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗಿದ್ದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಪಿ.ಎನ್ ವೇಲಾಯುಧನ್ ಅವರನ್ನು ಪೋಲೀಸರು ಬಂಧಿಸಿದ್ದಾರೆ.
   ಇಂದು ಶಬರಿಮಲೆ ಬಾಗಿಲು ಮುಚ್ಚುವಿಕೆ:
   ತುಲಾಮಾಸದ ಒಂದನೇ ದಿನ ಗರ್ಭಗೃಹದಬಾಗಿಲು ತೆರೆಯಲ್ಪಟ್ಟ ಶಬರಿಮಲೆ ಧರ್ಮಶಾಸ್ತಾ ಕ್ಷೇತ್ರದಗರ್ಭಗೃಹ ಐದನೇ ದಿನವಾದ ಇಂದು ರಾತ್ರಿ 10 ಗಂಟೆಗೆ ಮುಚ್ಚಲ್ಪಡುವುದು.ಸುಪ್ರೀಂ ಕೋರ್ಟ ತೀಪರ್ಿನ ಬಳಿಕ  ಭಾರೀ ವಿವಾದಕ್ಕೊಳಗಾಗಿ ಸಂಘರ್ಷ ಸ್ಥಿತಿ ಸೃಷ್ಟಿಸಿರುವ ಮಲೆ ಇಂದು ಮುಚ್ಚುಗಡೆಗೊಳ್ಳುತ್ತಿದ್ದು, ಮುಮದಿನ ಮಾಸ ಮತ್ತೆ ಐದು ದಿನದ ಮಟ್ಟಿಗೆತೆರೆದುಕೊಳ್ಳಲಿದೆ. ಈ ಮಧ್ಯೆ ಇಂದು ಕ್ಷೇತ್ರ ಮುಚ್ಚಲ್ಪಡುವುದರಿಂದ ಭಾರೀ ವಿವಾದಗಳು ಸೃಷ್ಟಿಯಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಭಾರೀ ಪೋಲೀಸ್ ಭದ್ರತೆಒದಗಿಸಲು ನಿದರ್ೇಶಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries