HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಭಾವ ಸ್ಪುರಣೆಗೊಂಡಾಗ ಕವಿತೆ ಹುಟ್ಟುವುದು- ಹಸು.ಒಡ್ಡಂಬೆಟ್ಟು
    ಪೆರ್ಲ: ಮನಸ್ಸಿನಲ್ಲುಂಟಾದ ಭಾವ ವೈವಿಧ್ಯದಿಂದಾಗಿ ಕವಿತೆಯ ಹರಿವು ಉಂಟಾಗುವುದು.ಕವಿತೆ ಕಟ್ಟುವಾಗ ಕವಿ ತನ್ನ ಭಾವನೆಗಳನ್ನು ಸಾರ್ವತ್ರಿಕ ಭಾವನೆಗಳನ್ನಾಗಿ ಪರಿವತರ್ಿಸಿ ಉಚಿತ ಸನ್ನಿವೇಶವನ್ನು ಸೃಷ್ಟಿಸಿ ಸಂವಹಿಸುವುದು ಅಥವಾ ತನ್ನದಲ್ಲದ ಭಾವನೆಗಳನ್ನು ತನ್ನದಾಗಿಸಿಕೊಂಡು ಅನುಭೂತಿಯಿಂದ ಸಂವಹಿಸುವನು. ಭಾವ ಸ್ಪುರಣೆಯ ಕವಿತೆ ಅಸೀಮ ಮಟ್ಟದಲ್ಲಿ ಮನಸ್ಸುಗಳನ್ನು ಪ್ರಚೊಧಿಸಿ ಖುಷಿ ನಿಡುವುದು ಎಂದು ಶಿಕ್ಷಕ, ಚುಟುಕು ರತ್ನ ಹರೀಶ್ ಸುಲಾಯ.ಒಡ್ಡಂಬೆಟ್ಟು ಅಭಿಪ್ರಾಯ ವ್ಯಕ್ತಪಡಿಸಿದರು.
   ಪೆರ್ಲದಕವಿ ಹೃದಯದಸವಿ ಮಿತ್ರರು ವೇದಿಕೆಯ ವತಿಯಿಂದ ಭಾನುವಾರ ಸಂಜೆ ಪೆರ್ಲದ ವ್ಯಾಪಾರಿ ಭವನದಲ್ಲಿ ನಾಡಹಬ್ಬ ದಸರಾ ಪ್ರಯುಕ್ತ ಆಯೋಜಿಸಲಾಗಿದ್ದ ಕವಿ ಕಾವ್ಯ ಸಂಭ್ರಮ 2018 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
   ಕವಿಗೋಷ್ಠಿಗಳಿಂದ ಕವಿಗಳ ಭೌತಿಕ ಮಿಲನದ ಜೊತೆ ಕವನಗಳ ಆಲಿಸುವಿಕೆಯಿಂದಾಗಿ ಬೌದ್ದಿಕ ಮಟ್ಟ-ಸಾಹಿತ್ಯ ಸಮೃದ್ದಿಯಾಗುವುದು. ಹಿರಿಯ ಕವಿಗಳ ಕೃತಿಗಳನ್ನು ಪರಿಚಯಿಸುವ ಕೆಲಸಗಳೂ ಇಂತಹ ಕಾರ್ಯಕ್ರಮಗಳಿಂದ ಆಗಬೇಕು. ಇದರಿಂದ ಯುವ ತಲೆಮಾರಿಗೆ ಕೃತಿಗಳ ಮಾಹಿತಿಯ ಜೊತೆ ಓದು ಹೆಚ್ಚಾಗುತ್ತದೆ ಎಂದು ಅವರು ತಿಳಿಸಿದರು. ಕಾಸರಗೋಡಿನ ಕನ್ನಡ ಪರಂಪರೆಯನ್ನು ಬೆಳೆಸುವ ಇಂತಹ ಚಟುವಟಿಕೆ ಹೆಚ್ಚು ಪರಿಣಾಮಕಾರಿಯಾಗಿ ನಮ್ಮತನವನ್ನು ಉಳಿಸಿ ಬೆಳೆಸುವಲ್ಲಿ ಪರಿಣಾಮಕಾರಿಯಾಗಿದೆ ಎಂದು ಅವರು ಶ್ಲಾಘಿಸಿದರು.
   ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ನಿವೃತ್ತ ಪ್ರಾಂಶುಪಾಲ, ಸಾಹಿತಿ ಪ್ರೊ.ಪಿ.ಎನ್.ಮೂಡಿತ್ತಾಯ ಅವರು, ಬರಹಗಳು, ಕವಿತೆಗಳು ಯಾರ ಭಾವನೆಗಳನ್ನೂ ಘಾಸಿಗೊಳಿಸದೆ ಎಲ್ಲರಿಗೂ ಮುದನೀಡುವಂತಾದಾಗ ಕವಿತೆಯ ಶಕ್ತಿ ವೃದ್ದಿಯಾಗುತ್ತದೆ. ನಿಗೂಢ, ಅರ್ಥಗಭರ್ಿತ ಹಾಗೂ ಬದುಕಿನ ತತ್ವಗಳಿಂದ ಭೂಯಿಷ್ಠವಾದಕಾವ್ಯವು, ಅಣುರೂಪದಲ್ಲಿ ಪರಸ್ಪರ ಬೆಸೆದು ಬೆಳೆಯಲು ಪ್ರೇರಣೆ ನೀಡುತ್ತದೆ ಎಂದು ತಿಳಿಸಿದರು. ಹೆಚ್ಚು ಜಟಿಲವಾದ, ಶಬ್ದಾಡಂಬರಗಳ ಕವಿತೆಗಳು ಆಧುನಿಕ ತಲೆಮಾರನ್ನು ಸೆಳೆಯುವಲ್ಲಿ ಸೋತಿದ್ದು, ಈ ನಿಟ್ಟಿನಲ್ಲಿ ಸರಳ ಶೈಲಿಯನ್ನು ಯುವ ಕವಿಗಳು ಬಳಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಹೆಚ್ಚೆಚ್ಚು ಜನರನ್ನು ಮುಟ್ಟಬೇಕೆಂಬ ತವಕದ ಆಧುನಿಕ ಕವಿತೆಗಳು ಕೆಲವೊಮ್ಮೆ ಜಳ್ಳು ಸಾಹಿತ್ಯವೆನಿಸಿ ಮೂಲೆಗುಂಪಾಗುವ ಸಾಧ್ಯತೆಗಳಿದ್ದು, ಚಲನಶೀಲ, ವೈವಿಧ್ಯಮಯ ಕವಿತೆಗಳು ಹುಟ್ಟಿಬರಲಿ ಎಂದು ಹಾರೈಸಿದರು.
   ವ್ಯಾಪಾರಿ ವ್ಯವಸಾಯೀ ಏಕೋಪನ ಸಮಿತಿ ಪೆರ್ಲ ಘಟಕಾಧ್ಯಕ್ಷ ಅಬ್ದುಲ್ ರಹಿಮಾನ್ ಪೆರ್ಲ, ಹಿರಿಯ ಸಾಹಿತಿ ಹರೀಶ್ ಪೆರ್ಲ ಉಪಸ್ಥಿತರಿದ್ದು ಶುಭಹಾರೈಸಿದರು. ಕವಿಹೃದಯದಸವಿ ಮಿತ್ರರು ವೇದಿಕೆಯ ಸಂಚಾಲಕ ಮಣಿರಾಜ್ ವಾಂತಿಚ್ಚಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.
  ಬಳಿಕ ನಡೆದ ಕವಿಗೋಷ್ಠಿಯಲ್ಲಿ ಸುಕುಮಾರ ಬೆಟ್ಟಂಪಾಡಿ, ಗೋಪಾಲಕೃಷ್ಣ ಭಟ್ ಕಟ್ಟತ್ತಿಲ,ಶುಭಾಶ್ ಪೆರ್ಲ, ಶ್ವೇತಾ ಕಜೆ, ಚೇತನಾ ಕುಂಬಳೆ, ತಿರುಮಲಾಸೇಸಪ್ಪ, ಅಭಿಲಾಷ್ ಪೆರ್ಲ, ದಯಾನಂದ ರೈ ಕಲ್ವಾಜೆ, ಉದಯರವಿ ಕುಂಬ್ರಾಜೆ, ರಿತೇಶ್ ಕಾಟುಕುಕ್ಕೆ, ಪೃಥ್ವಿ ಶೆಟ್ಟಿ ಕೆ, ಬಾಲಕೃಷ್ಣ ಬೇಕೂರು, ಜ್ಯೋತ್ಸ್ನಾ ಎಂ.ಕಡಂದೇಲು, ಚಿನ್ಮಯಾ ಕಡಂದೇಲು, ಶಂಕರ ಎಂ.ಎಸ್, ಆನಂದ ರೈ ಅಡ್ಕಸ್ಥಳ, ಆಕಾಶ್ ಪೆರ್ಲ, ಶಮರ್ಿಳಾ ಬಜಕ್ಕೂಡ್ಲು, ದೇವರಾಜ್ ಕೆ.ಎಸ್ ಸ್ವರಚಿತ ಕವಿತೆಗಳನ್ನು ವಾಚಿಸಿದರು. ಪುರುಷೋತ್ತಮ ಭಟ್ ಕೆ.ಸ್ವಾಗತಿಸಿ, ಶಂಕರ ಎಂ.ಎಸ್.ವಂದಿಸಿದರು. ಆನಂದ ರೈ ಅಡ್ಕಸ್ಥಳ ಕಾರ್ಯಕ್ರಮ ನಿರೂಪಿಸಿದರು.

     

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries