ಕನ್ನಡದ ಸಾಹಿತ್ಯದ ಭವಿಷ್ಯ ಪುಟ್ಟ ಕೈಗಳಲ್ಲಿ ಭದ್ರವಾಗಿದೆ- ಡಾ.ಬೇ.ಸಿ
ಬದಿಯಡ್ಕ: ಕವನಗಳಿಗೆ ಸ್ವರವಾಗುವ ಧೈರ್ಯ ಹಾಗೂ ವಸ್ತುಗಳ ಸರಿಯಾದ ಆಯ್ಕೆಯ ಗಟ್ಟಿತನ ಪುಟ್ಟ ಕವಿಗಳ ಆತ್ಮ ಸ್ಥೈರ್ಯ ಹಾಗೂ ನಾಳಿನ ಸಾಹಿತ್ಯ ಲೋಕದಲ್ಲಿ ಉಂಟಾಗಬಹುದಾದ ಬೆಳವಣಿಗೆಗೆ ಕಾರಣವಾಗಬೇಕಿದೆ. ಕಾಸರಗೋಡಿನ ಕನ್ನಡದ ಭವಿಷ್ಯ ಪುಟ್ಟ ಕೈಗಳಲ್ಲಿ ಭದ್ರವಾಗಿದೆ ಎಂದು ನಿವೃತ್ತ ಮುಖ್ಯೋಪಾಧ್ಯಾಯ, ಸಾಹಿತಿ ಡಾ.ಬೇ.ಸಿ.ಗೋಪಾಲಕೃಷ್ಣ ಭಟ್ ತಿಳಿಸಿದರು.
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಇದರ ಆಶ್ರಯದಲ್ಲಿ ಉದಯಗಿರಿಯ ಎಸ್.ಎಸ್.ಪಿ. ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಜರಗಿದ ಚಿಣ್ಣರ ಕಲರವ 2 ಮತ್ತು ದಸರಾ ನಾಡಹಬ್ಬದಂಗವಾಗಿ ನಡೆದ ಮಕ್ಕಳ ಕವಿಗೋಷ್ಠಿಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಎಳೆಯ ಹರೆಯದ ಸಾಹಿತ್ಯಾಸಕ್ತತೆ ಭವಿಷ್ಯದಲ್ಲಿ ಹೆಮ್ಮರವಾಗಿ ಬಲಗೊಳ್ಳಬೇಕು. ವಿವಿಧ ಸಾಹಿತ್ಯ ಕೃತಿಗಳ ಓದು, ಕವಿಗೋಷ್ಠಿಗಳಲ್ಲಿ ಭಾಗವಹಿಸುವ ಮೂಲಕ ಅನುಭವಗಳನ್ನು ಹೆಚ್ಚಿಸಿಕೊಳ್ಳುವಲ್ಲಿ ಮಕ್ಕಳು ಉತ್ಸುಕರಾಗಬೇಕು ಎಂದು ಅವರು ತಿಳಿಸಿದರು. ಸಾಹಿತ್ಯ ಬರಹಗಳ ರಚನೆ ಮತ್ತು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿಕೆಯಿಂದ ಭಾಷೆಯ ಜ್ಞಾನ ವಿಸ್ತಾರತೆ ಅಧಿಕಗೊಳ್ಳುತ್ತದೆ. ವಸ್ತು-ವಿಷಯಗಳನ್ನು ವಿಭಿನ್ನವಾಗಿ ನೋಡುವ, ಅಥರ್ೈಸುವ ಸಾಮಥ್ರ್ಯ ಬೆಳವಣಿಗೆಗೆ ಪೂರಕವಾಗುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಚಿಣ್ಣರ ಕಲರವ ಸರಣಿ ಕಾರ್ಯಕ್ರಮ ಜಿಲ್ಲೆಯ ಕನ್ನಡತನವನ್ನು ಗಟ್ಟಿಗೊಳಿಸಿ ಕ್ರಿಯಾತ್ಮಕವಾಗಿರುವಲ್ಲಿ ಹೊಸ ಭರವಸೆ ಮೂಡಿಸಲಿ ಎಂದು ಕರೆನೀಡಿ ಹಾರೈಸಿದರು.
ಕವಿಗಳಾದ ಸುಂದರ ಬಾರಡ್ಕ , ಸುಭಾಷ್ ಪೆರ್ಲ, ಸಂಧ್ಯಾಗೀತಾ ಬಾಯಾರು, ಚೇತನಾ ಕುಂಬಳೆ, ಸುರೇಖಾ ಬಾರಡ್ಕ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾರ್ಯದಶರ್ಿ ಅಖಿಲೇಶ್ ನಗುಮುಗಂ, ಮಿಡಿಯಾ ಕ್ಲಾಸಿಕಲ್ ಅಧ್ಯಕ್ಷ ಶ್ರೀಕಾಂತ್ ನೆಟ್ಟಣಿಗೆ, ರುತಿಕ್ ಯಾದವ್, ನಿತಿನ್ ಮುಂತಾದವರು ಉಪಸ್ಥಿತರಿದ್ದರು.
ಕಿರಿಯ ಕವಿಗಳಾದ ಉಪಾಸನಾ ಪಂಜರಿಕೆ, ಶೈಲೇಶ್ ಕಿದೂರು, ಮೌನೇಶ್ .ಎಸ್.ಕಳತ್ತೂರು, ರುಕ್ಮಿಣಿ ಸಿ.ಎಸ್ ಪುತ್ತಿಗೆ, ಪ್ರಶಾಂತ್ ಕುಮಾರ್, ಅಭಿಲಾಶ್ ಎಸ್ ಪೆರ್ಲ, ಪೃಥ್ವಿ ಶೆಟ್ಟಿ ಕಾಟುಕುಕ್ಕೆ, ಚಿತ್ತರಂಜನ್ ಕಡಂದೇಲು, ಮನೋಹರ ಮುಂತಾದವರು ಸ್ವರಚಿತ ಕವನ ವಾಚಿಸಿದರು.