HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                    ಜೀವಸ್ನೇಹೀ ವ್ಯಕ್ತಿತ್ವಗಳ ಆದರ್ಶ ಪಾಲನೆ ಅಗತ್ಯ-ಎಸ್.ಪಿ.ಡಾ.ಶ್ರೀನಿವಾಸ್
ಬದಿಯಡ್ಕ: ಪ್ರಕೃತಿಯ ಮೂಲ ಸ್ವರೂಪವನ್ನು ಕಾಯ್ದುಕೊಳ್ಳುವುದು ಭೂಗೋಲದ ಅಸ್ತಿತ್ವವನ್ನು ಬಲಗೊಳಿಸುವುದು. ಈ ನಿಟ್ಟಿನಲ್ಲಿ ಅಸಂಖ್ಯಾತ ಗಿಡಗಳನ್ನು ನೆಡುವ ಮೂಲಕ ರಾಷ್ಟ್ರಕ್ಕೇ ಮಾದರಿಯಾದ ಸಾಲುಮರದ ತಿಮ್ಮಕ್ಕ ಅವರಿಂದ ಪ್ರೇರಣೆ ಪಡೆದು ಪ್ರತಿಯೊಬ್ಬರೂ ಹಸಿರು ಸೇವಕರಾಗುವುದು ಬದುಕಿನ ಮಹತ್ವದ ಸಾಧನೆ ಎಂದು ಜಿಲ್ಲಾ ಪೋಲೀಸ್ ವರಿಷ್ಠ ಡಾ.ಎ.ಶ್ರೀನಿವಾಸ್ ತಿಳಿಸಿದರು.
   ವಾಂತಿಚ್ಚಾಲ್ ನ ಜಿ.ಕೆ.ಚಾರಿಟೇಬಲ್ ಟ್ರಸ್ಟ್ ನೇತೃತ್ವದಲ್ಲಿ ತುಳುನಾಡಿನ ಮಕ್ಕಳ ಮಹೋನ್ನತ ಮಹೋತ್ಸವವಾದ ತುಳುನಾಡ ಜೋಕ್ಲ ಪರ್ಬ 2018 ಕಾರ್ಯಕ್ರಮವನ್ನು ಭಾನುವಾರ ಪೆರಡಾಲ ಉದನೇಶ್ವರ ಸಭಾ ಭವನದಲ್ಲಿ ಉದ್ಘಾಟಿಸಿದ ಹಿರಿಯ ಪರಿಸರ ಪ್ರೇಮಿ ನಾಡೋಜ ಡಾ.ಸಾಲುಮರದ ತಿಮ್ಮಕ್ಕ ಅವರಿಗೆ ತುಳುನಾಡ ಸಿರಿ ಪಜಿರ್ದ ಐಸಿರೊ ವಿಶೇಷ ಪ್ರಶಸ್ತಿ ನೀಡಿ ಅಭಿನಂದಿಸಿ ಅವರು ಮಾತನಾಡಿದರು.
   ಆಧುನಿಕ ವ್ಯಾವಹಾರಿಕ ಜಗತ್ತು ಬೃಹತ್ ಕೈಗಾರಿಕೆ, ತಾಂತ್ರಿಕತೆಯ ಉದ್ಮಾದದಲ್ಲಿ ಮೈಮರೆತಿದ್ದು, ಜೀವಸಂಕುಲದ ಅಸ್ತಿತ್ವ, ಶುದ್ದ ವಾತಾವರಣದ ಬಗ್ಗೆ ಗಂಭೀರವಾಗಿ ಗಮನಿಸದಿರುವುದು ದುದರ್ೈವ. ನಿರುಪಯುಕ್ತ ಆದರ್ಶಗಳನ್ನು ಅನುಸರಿಸುವ ಬದಲು ಸಾಲುಮರದ ತಿಮ್ಮಕ್ಕ ಅವರಂತಹ ಜೀವ ಸ್ನೇಹೀ ವ್ಯಕ್ತಿತ್ವಗಳ ಆದರ್ಶ ಪಾಲನೆ ಅಗತ್ಯವಿದೆ ಎಂದು ಅವರು ಕರೆನೀಡಿದರು.
   ಜಿ.ಕೆ.ಚಾರಿಟೇಬ್ಲ್ ಟ್ರಸ್ಟ್ನ ನಿದರ್ೇಶಕ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್ ದಂಪತಿಗಳು, ಪೆರಡಾಲ ಉದನೇಶ್ವರ ಶ್ರೀಕ್ಷೇತ್ರದ ಚಂದ್ರಹಾಸ ರೈ ಪೆರಡಾಲಗುತ್ತು, ಜಯಾ ಮಣಿಯಂಪಾರೆ, ನಿರಂಜನ ರೈ ಪೆರಡಾಲ, ಜಗನ್ನಾಥ ರೈ ಪೆರಡಾಲಗುತ್ತು ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries