ಬದುಕು ತೆರೆದಿಟ್ಟು ಪ್ರಕೃತಿಯೊಂದಿಗೆ ಬದಕಲು ಕರೆನೀಡಿದ ಸಾಲುಮರದ ತಿಮ್ಮಕ್ಕ
ಬದಿಯಡ್ಕ: ಜೀವಕೋಟಿಗಳ ಸೌಖ್ಯದ ಬಾಳಿಗೆ ಪ್ರಕೃತಿಯನ್ನು ಉಳಿಸಿಬೆಳೆಸುವ ಮನಸ್ಸುಗಳು ವಿಸ್ತರಿಸಬೇಕು. ಪ್ರಾಕೃತಿಕ ಅಸಮತೋಲನಗಳಿಂದ ಜೀವಕೋಟಿಗಳಿಗೆ ಅಸ್ತಿತ್ವ ಸವಾಲಾಗುತ್ತಿರುವುದರಿಂದ ಜಾಗೃತಸಮಾಜ, ವ್ಯವಸ್ಥೆಗಳು ಈ ಬಗ್ಗೆ ಇನ್ನಷ್ಟು ಗಂಭೀರ ಕಾರ್ಯಯೋಜನೆಗಳನ್ನು ಸಿದ್ದಗೊಳಿಸುವುದೇ ನನಗೆ ಖುಷಿ ನೀಡುತ್ತದೆ ಎಂದು ರಾಷ್ಟ್ರ, ರಾಜ್ಯ ಪ್ರಶಸ್ತಿ ವಿಜೇತೆ, ನಾಡೋಜ, ಡಾ.ಸಾಲುಮರದ ತಿಮ್ಮಕ್ಕ ಅಭಿಪ್ರಾಯ ವ್ಯಕ್ತಪಡಿಸಿದರು.
ವಾಂತಿಚ್ಚಾಲ್ ನ ಜಿ.ಕೆ.ಚಾರಿಟೇಬಲ್ ಟ್ರಸ್ಟ್ ನೇತೃತ್ವದಲ್ಲಿ ತುಳುನಾಡಿನ ಮಕ್ಕಳ ಮಹೋನ್ನತ ಮಹೋತ್ಸವವಾದ ತುಳುನಾಡ ಜೋಕ್ಲ ಪರ್ಬ 2018 ಕಾರ್ಯಕ್ರಮವನ್ನು ಭಾನುವಾರ ಪೆರಡಾಲ ಉದನೇಶ್ವರ ಸಭಾ ಭವನದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಲ್ಲದ ನಾವು ಮರಗಳ ನೆಡುತೋಪುಗಳನ್ನು ನಿಮರ್ಿಸುವ ಮೂಲಕ ಸಾರ್ಥಕತೆಯನ್ನು ಪಡೆಯಲು ಸಾಧ್ಯವಾಯಿತು ಎಂದು ತಮ್ಮ ಬದುಕು ಸಾಧನೆಗಳನ್ನು ಅವರು ಎಳೆಎಳೆಯಾಗಿ ವಿವರಿಸಿದರು. ರಾಷ್ಟ್ರದ ಸಮಗ್ರ ನೆಮ್ಮದಿಯ ಸಂಸ್ಕೃತಿಯು ಪ್ರಕೃತಿಯೊಂದಿಗೆ ಬೆಸೆದು ಬಂದಿರುವುದಾಗಿದ್ದು, ಪ್ರಕೃತಿಯ ಮುನಿಸು ಜೀವಕೋಟಿಗಳ ಅವಸಾನಕ್ಕೆ ನಾಂದಿಯಾಗುವುದೆಂದು ಅವರು ಕಿವಿಮಾತು ಹೇಳಿದರು. ತೌಳವ ಸಂಸ್ಕೃತಿಯು ಪ್ರಕೃತಿಯೊಂದಿಗೆ ನಿಕಟ ಸಂಬಂಧಗಳಿಂದ ವಿಶಿಷ್ಟವಾಗಿದ್ದು ಆಧುನಿಕತೆಯ ಪ್ರವಾಹದಲ್ಲಿ ಮೂಲ ಸಂಸ್ಕೃತಿಗೆ ತೊಡಕುಗಳಾಗದಿರಲಿ ಎಂದು ಅವರು ತಿಳಿಸಿದರು.
ಸಮಾರಂಭದಲ್ಲಿ ತುಳುನಾಡ ಜೋಕ್ಲೆ ಪರ್ಬಕ್ಕೆ ಬಲೂನುಗಳನ್ನು ಪುಟಾಣಿಗಳಿಗೆ ಹಸ್ತಾಂತರಿಸಿ ಉದ್ಘಾಟಿಸಿ ಮಾತನಾಡಿದ ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀಸಾಧ್ವಿ ಮಾತಾನಂದಮಯೀ ಅವರು ಮಾತನಾಡಿ, ಜೀವನ ಯಶಸ್ವಿಗೆ ಭಾವನೆ ಉತ್ತಮವಾಗಿರಬೇಕು. ತುಳುನಾಡ ಭಾಷೆ, ಸಂಸ್ಕೃತಿಗೆ ಭಾರೀ ಹಿನ್ನೆಲೆಯಿದೆ. ಒಂದೊಮ್ಮೆ ಉಚ್ಚ್ರಾಯತೆಯಲ್ಲಿದ್ದ ತುಳು ಸಂಸ್ಕೃತಿ ಹಲವು ಕಾರಣಗಳಿಂದ ಮೂಲೆಗುಂಪಾಗಬೇಕಾಯಿತು. ಆದರೆ 15ನೇ ಶತಮಾನದಲ್ಲಿ ಕುಂಬಳೆಯ ಅರಸರ ಮೂಲಕ ತುಳು ಭಾಷೆಗೆ ಮತ್ತೆ ಮನ್ನಣೆ ನೀಡಲ್ಪಟ್ಟಿರುವುದು ಉಲ್ಲೇಖಿಸಲಾಗಿದೆ. ಈ ಕಾರಣದಿಂದ ಇಲ್ಲಿಯ ಮಣ್ಣಿಗೆ ಮಹತ್ತರ ಸಾಂಸ್ಕೃತಿಕ ಹಿನ್ನೆಲೆಯಿದೆ ಎಂದು ಅವರು ತಿಳಿಸಿದರು. ತುಳುಭಾಷೆಯ ಸಾಂಸ್ಕೃತಿಕತೆಯನ್ನು ಬೆಳೆಸುವಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ಮಣ್ಣಿನ ವಾಸನೆಯ ಜಾನಪದ, ಸಂಸ್ಕೃತಿ, ಜೀವನ ಕ್ರಮವನ್ನು ಕಲಿಸುವ, ಅದರಂತೆ ಬದುಕು ಕಟ್ಟಿಕೊಳ್ಳುವ ಪರಿಪಾಠವನ್ನು ನೆನಪಿಸಲು ಆಗಾಗ ಇಂತಹ ಕಾರ್ಯಕ್ರಮ ಆಯೋಜಿಸಬೇಕು ಎಂದು ಅವರು ಆಶೀರ್ವಚನ ನೀಡಿ ಹಾರೈಸಿದರು.
ಸಮಾರಂಭವನ್ನು ದೀಪ ಬೆಳಗಿಸಿ ಚಾಲನೆ ನೀಡದ ಪೈವಳಿಕೆ ಅರಮನೆಯ ರಂಗತ್ರೈ ಬಲ್ಲಾಳ ಅರಸರು ಮಾತನಾಡಿ, ತುಳುನಾಡಿನ ಸಾಂಸ್ಕೃತಿಕತೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುವುದು ಉತ್ತಮ ಬೆಳವಣಿಗೆಯಾಗಿದ್ದು ನಿರಂತರವಾಗಿ ನಡೆಯುತ್ತಿರಲಿ. ಹೊಸ ತಲೆಮಾರಿನ ಯುವಜನರಿಗೆ ತುಳುನಾಡಿನ ಪರಂಪರೆ, ಕಲೆ, ಕ್ರೀಡೆಗಳನ್ನು ತಿಳಿಯಪಡಿಸುವ, ಅದರೊಂದಿಗೆ ಜೊತೆಯಾಗಿ ಬದುಕು ಕಟ್ಟುವ ನಿದರ್ೇಶನಗಳನ್ನು ಈ ಮೂಲಕ ನೀಡಲು ಸಾಧ್ಯವಾಗುವುದೆಂದು ತಿಳಿಸಿದರು.
ಭಾರತೀಯ ವೈದ್ಯಕೀಯ ಸಂಘದ ಕನರ್ಾಟಕ ರಾಜ್ಯ ವಕ್ತಾರ ಡಾ.ಅಣ್ಣಯ್ಯ ಕುಲಾಲ್ ಉಳ್ತೂರು ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ತುಳು ಭಾಷೆ ಸಂಸ್ಕೃತಿ ಇಂದು ಸವಾಲುಗಳನ್ನು ಎದುರಿಸುತ್ತಿದ್ದು, ಒಗ್ಗಟ್ಟಿನ ಮೂಲಕ ಭಾಷೆ ಸಂಸ್ಕೃತಿ ಉಳಿಸುವ ಪ್ರಬಲ ಹೋರಾಟಗಳ ಅಗತ್ಯವಿದೆ. ಹರಿದು ಹಂಚಿರುವ ತುಳು ಸಾಂಸ್ಕೃತಿಕತೆಯ ಪುನರುತ್ಥಾನಕ್ಕೆ ಜೊತೆಯಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು. ಆಡಳಿತಾತ್ಮಕವಾಗಿ ಕೇರಳದ ಭಾಗವಾದ ಕಾಸರಗೋಡಿನಲ್ಲಿ ತುಳು ಸಂಸ್ಕೃತಿಯು ನಿಶ್ಚಬ್ದವಾಗಿ ಗಟ್ಟಿತನದಲ್ಲಿ ಸಂಸ್ಕೃತಿ ಸಂವರ್ಧನೆಯಲ್ಲಿ ನಿರತವಾಗಿ ಕಾರ್ಯನಿರ್ವಹಿಸುತ್ತಿರುವುದು ಸ್ವಾಗತಾರ್ಹ ಎಂದು ಶ್ಲಾಘಿಸಿದರು.
ಜಿ.ಕೆ.ಚಾರಿಟೇಬಲ್ ಟ್ರಸ್ಟ್ನ ಲಾಂಛನವನ್ನು ಸಮಾರಂಭದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದ ಶ್ರೀಮದ್ ಎಡನೀರು ಮಠದ ಕಾರ್ಯನಿರ್ವಹಣಾಧಿಕಾರಿ ಜಯರಾಮ ಮಂಜತ್ತಾಯ ಎಡನೀರು ಅವರು ಮಾತನಾಡಿ, ತುಳುನಾಡಿನ ಆಚಾರ ವಿಚಾರಗಳ ಪೂರಕ ಚಟುವಟಿಕೆಗಳು ವರ್ತಮಾನದ ಅಗತ್ಯವಾಗಿದ್ದು, ಮಣ್ಣಿನ ಮೂಲಸತ್ವದ ಪಸರಿಸುವಿಕೆಗೆ ಪ್ರೇರಣೆ ನೀಡುತ್ತದೆ ಎಂದು ತಿಳಿಸಿದರು.
ಕನರ್ಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದಶರ್ಿ ರಾಮಕೃಷ್ಣ ಮಲ್ಲಾರ, ಉದ್ಯಮಿ ನರಸಿಂಹ ಕುಲಾಲ್ ಕಡಂಬಾರ್ ಕಟ್ಟೆ, ಕೆ.ಟಿ.ಸುವರ್ಣ ತೊಕ್ಕೋಟು, ಪ್ರೇಮಾನಂದಕುಲಾಲ್ ಕೋಡಿಕಲ್, ಆಶಾ ಶೆಟ್ಟಿ ಅತ್ತಾವರ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಚಂದ್ರಹಾಸ ರೈ ಪೆರಡಾಲಗುತ್ತು, ಪರಿಸರ ಪ್ರೇಮಿ ರಾಜು ಮಾಸ್ತರ್ ಕಿದೂರು, ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿ ಚೇತನಾ ಎಂ, ಪೆರಡಾಲ ಕ್ಷೇತ್ರ ಟ್ರಸ್ಟಿ ಜಗನ್ನಾಥ ರೈ ಪೆರಡಾಲಗುತ್ತು, ಚೆನ್ನಪ್ಪ ಕುಲಾಲ್ ಎರುಗಲ್ಲು, ಶಂಕರ್ ಸಾರಡ್ಕ, ಹರೀಶ್ ಬೊಟ್ಟಾರಿ, ಶೇಖರ ಅಜೆಕ್ಕಾರ್, ಡಾ.ರಾಜೇಶ್ ಆಳ್ವ ಬದಿಯಡ್ಕ, ಸಿ.ಎಚ್.ವೆಂಕಟರಮಣ ಭಟ್ ಚಂಬಲ್ತಿಮಾರ್, ಪರಮೇಶ್ವರ ಮಾದನಮನೆ, ಗುರುಪ್ರಸಾದ್ ಕೋಟೆಕಣಿ, ಹರೀಶ್ ಸುಲಾಯ ಒಡ್ಡಂಬೆಟ್ಟು, ಶ್ರೀಶ ಕುಮಾರ್ ಪಂಜಿತ್ತಡ್ಕ, ಜಯಶಮರ್ಿಳಾ ಪಂಜ, ಐಸಿಡಿಎಸ್ ಮೇಲ್ವಿಚಾರಕಿ ಜ್ಯೋತಿ ಪಿ ಉಪಸ್ಥಿತರಿದ್ದರು.
ಜಿ.ಕೆ.ಚಾರಿಟೇಬಲ್ ಟ್ರಸ್ಟ್ ನ ನಿದರ್ೇಶಕ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್ ಸ್ವಾಗಗತಿಸಿ, ನಿರಂಜನ ರೈ ಪೆರಡಾಲ ವಂದಿಸಿದರು. ದಿವಾಕರ ಪ್ರತಾಪನಗರ, ಜಯ ಮಣಿಯಂಪಾರೆ,ಶ್ರುತಿ ಹರ್ಷ ರೈ ಪುತ್ರಕಳ ಕಾರ್ಯಕ್ರಮ ನಿರೂಪಿಸಿದರು.
ಬಳಿಕ 6 ತಿಂಗಳ ಹರೆಯದಿಂದ 1ರ ಹರೆಯದ ಪುಟಾಣಿಗಳ ಜೋಕ್ಲಾಟಿಕೆ, ಒಂದರಿಂದ ಮೂರರ ಹರೆಯದ ಮಕ್ಕಳ ಸಿರಿ ಪುರುಬಾಲೆ, ಮೂರರಿಂದ ಐದರ ಹರೆಯದ ಮಕ್ಕಳ ತಉತೈತ ತಊಪರಿಕೆ, ಹಾಗೂ ಇತರ ವೈವಿಧ್ಯಮಯ ಸ್ಪಧರ್ೆಗಳು, ಯಕ್ಷಗಾನ ಪ್ರದರ್ಶನಗಳು ನಡೆಯಿತು.ರತ್ನಾಕರ ಎಸ್ ಓಡಂಗಲ್ಲು ಪ್ರಾರ್ಥನಾ ಗೀತೆ ಹಾಡಿದರು.