HEALTH TIPS

ಯಾವುದೇ ಶೀರ್ಷಿಕೆಯಿಲ್ಲ

          ಭಾರತ ನೇತಾಜಿ ಕಲ್ಪನೆಯ ಸೇನೆಯನ್ನು ನಿಮರ್ಿಸುತ್ತಿದೆ: ಪ್ರಧಾನಿ ನರೇಂದ್ರ ಮೋದಿ
    ದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸರು ರಾಷ್ಟ್ರ ನಿಮರ್ಾಣದಲ್ಲಿ ಈಶಾನ್ಯ ರಾಜ್ಯಗಳ ಮಹತ್ವವನ್ನು ಮನಗಂಡಿದ್ದರು, ಅಂತೆಯೇ ನಮ್ಮ ಸಕರ್ಾರ ಸಹ ಈಶಾನ್ಯ ರಾಜ್ಯಗಳ ಮಹತ್ವವನ್ನು ಅರಿತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. 
      ನೇತಾಜಿ ಸುಭಾಷ್ ಚಂದ್ರ ಬೋಸರು ಸ್ಥಾಪಿಸಿದ್ದ ಆಝಾದ್ ಹಿಂದ್ ಫೌಜ್ ನ 75 ನೇ ವಾಷರ್ಿಕೋತ್ಸವದ ಹಿನ್ನೆಲೆಯಲ್ಲಿ ಇಂದು ದೆಹಲಿಯ ಕೆಂಪು ಕೋಟೆ ಮೇಲೆ ಧ್ವಜಾರೋಹಣ ನೆರವೇರಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ನೇತಾಜಿ ಬೋಸರ ನೇತೃತ್ವದಲ್ಲಿ ಆಝಾದ್ ಹಿಂದ್ ಫೌಜ್ ನ ಸಾಧನೆಗಳನ್ನು ಸ್ಮರಿಸಿದ್ದು, ಸೂರ್ಯ ಮುಳುಗದ ಸಾಮ್ರಾಜ್ಯದವರ ವಿರುದ್ಧ ನೇತಾಜಿ ಜನತೆಯನ್ನು ಒಗ್ಗೂಡಿಸಿದ್ದರು ಎಂದು ಹೇಳಿದ್ದಾರೆ.
   ಸ್ವಾಮಿ ವಿವೇಕಾನಂದರಿಂದ ಸುಭಾಷ್ ಚಂದ್ರ ಬೋಸರು ಪ್ರೇರಣೆ ಪಡೆದಿದ್ದರು. ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಹೋರಾಟ ನಡೆಸುತಿದ್ದ ಬೋಸರು ಕಾಂಗ್ರೆಸ್ ನ  ಬದಲಾಗಿ ಸಶಸ್ತ್ರ ಹೋರಾಟವನ್ನು ಪ್ರಾರಂಭಿಸಿದ್ದರು. ದಕ್ಷಿಣ ಆಫ್ರಿಕಾದ ವಿದ್ಯಾಥರ್ಿ ಚಳುವಳಿಯ ನಾಯಕರು ಬೋಸರನ್ನು ತಮ್ಮ ಹಿರೋ ಎಂದು ಪರಿಗಣಿಸಿದ್ದರೆಂದು ನೆಲ್ಸನ್ ಮಂಡೇಲಾ ಬೋಸರ ಬಗ್ಗೆ ಹೇಳಿದ್ದರು.  ಪ್ರತಿಯೊಬ್ಬರಿಗೂ ಸಮಾನ ಹಕ್ಕು ಹಾಗೂ ಅವಕಾಶಗಳಿರುವ, ತನ್ನ ಸಂಪ್ರದಾಯಗಳ ಬಗ್ಗೆ ಹೆಮ್ಮೆ ಇರುವ ಎಲ್ಲಾ ರಂಗಗಳಲ್ಲಿಯೂ ಬೆಳವಣಿಗೆ ಸಾಧಿಸುವ ಸಂವೃದ್ಧ  ರಾಷ್ಟ್ರದ ಕಲ್ಪನೆಯನ್ನು ಬೋಸರು ಹೊಂದಿದ್ದರು. ಸ್ವಾತಂತ್ರ್ಯಾ ನಂತರ ಭಾರತ ಸಾಕಷ್ಟು ಮುಂದೆ ಬಂದಿದೆ. ಆದರೆ ನ್ ಅವರ ಪರಿಕಲ್ಪನೆಯಲ್ಲಿದ್ದ ದೇಶವಾಗಿಲ್ಲ" ಎಂದು ಮೋದಿ ಹೇಳಿದರು.
   ನೇತಾಜಿ ಸುಭಾಷ್ ಚಂದ್ರ ಬೋಸರ ಕಲ್ಪನೆಯ ಸೇನೆಯನ್ನು ಭಾರತ ನಿಮರ್ಿಸುತ್ತಿದೆ,  ನೇತಾಜಿ ಅವರಿಗೆ ಸಂಬಂಧಿಸಿದ ರಹಸ್ಯ ಕಡತಗಳನ್ನು ಬಹಿರಂಗಗೊಳಿಸುವ ನಿಧರ್ಾರವನ್ನು ನಮ್ಮ ಸಕರ್ಾರ ತೆಗೆದುಕೊಂಡಿತು. ಈಗ ನೇತಾಜಿ ಅವರ ಗೌರವಾರ್ಥ ಪ್ರಶಸ್ತಿಯೊಂದನ್ನು ಸ್ಥಾಪಿಸಲಾಗುತ್ತಿದೆ ಎಂದು ಪ್ರಧನಿ ಮೋದಿ ಘೋಷಿಸಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries