HEALTH TIPS

ಯಾವುದೇ ಶೀರ್ಷಿಕೆಯಿಲ್ಲ

             ಶಬರಿಮಲೆ ಬೌದ್ಧ ವಿಹಾರ ಆಗಿತ್ತು ಎಂಬುದನ್ನು ಅಲ್ಲೆಗೆಳೆಯುವಂತಿಲ್ಲ- ಸ್ವಾಮಿ ಸಂದೀಪಾನಂದ ಗಿರಿ
      ಕಾಸರಗೋಡು: ಶಬರಿಮಲೆ ಸ್ತ್ರೀ ಪ್ರವೇಶದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ, ಶಬರಿಮಲೆ ಬೆಟ್ಟದಲ್ಲಿರುವ ಅಯ್ಯಪ್ಪ ಸ್ವಾಮಿಯ ಹಿನ್ನೆಲೆಯ ಬಗ್ಗೆ ಚಚರ್ೆ ಆರಂಭವಾಗಿದೆ.
   ಮೂಲದಲ್ಲಿ ಧರ್ಮಶಾಸ್ತ ಎಂದು ಕರೆಯಲ್ಪಡುವ ಅಯ್ಯಪ್ಪ ಕ್ಷೇತ್ರವು ಬೌದ್ಧ ವಿಹಾರವಾಗಿತ್ತು, ಕೆಲ ಬೌದ್ಧ ವಿಹಾರಗಳಲ್ಲಿ ಮಹಿಳೆಯರಿಗೆ ಇಂದಿಗೂ ಪ್ರವೇಶವಿಲ್ಲ ಎಂದು ಸಾಲಗ್ರಾಮಂ ಆಶ್ರಮದ ಸಂದೀಪಾನಂದ ಸ್ವಾಮಿಗಳು ಹೇಳಿದ್ದಾರೆ.
    ಕೇರಳದ ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಶನಿವಾರ ಮಾತನಾಡುತ್ತಿದ್ದ ಅವರು ಅಯ್ಯಪ್ಪ ಸ್ವಾಮಿಯ ಮೂಲಸ್ವರೂಪ ಬುದ್ಧನನ್ನು ಹೋಲುತ್ತದೆ. ಮುದ್ರಾ ಭಂಗಿಯಲ್ಲಿ ಧ್ಯಾನ ಸ್ಥಿತಿಯಲ್ಲಿ ಕುಳಿತುಕೊಂಡಿರುವ ಅಯ್ಯಪ್ಪನ ವಿಗ್ರಹ ಮತ್ತು ಶಬರಿಮಲೆಯಲ್ಲಿನ ಶರಣು ಮಂತ್ರ ಸ್ಮರಣೆಯು ಬೌದ್ಧ ಧರ್ಮದ ಹಿನ್ನೆಲೆಯನ್ನು ಸಾದರಪಡಿಸುತ್ತದೆ ಎಂದಿದ್ದು, ಕ್ಷೇತ್ರದ ಐತಿಹಾಸಿಕತೆಯನ್ನು ಮರೆಮಾಚುವಂತಿಲ್ಲ ಎಂದು ಅವರು ತಿಳಿಸಿದ್ದಾರೆ. ಶ್ರಮಣ ಪರಂಪರೆ ದೇಶದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಸಂದರ್ಭ ಬೌದ್ಧ ಬಿಕ್ಷುಗಳು ಎತ್ತರದ ಗಿರಿ ಪ್ರದೇಶ ಸಹಿತ ಕಾನನಗಳಲ್ಲಿ ತಮ್ಮ ವಿಹಾರಗಳನ್ನು ಸ್ಥಾಪಿಸಿದ್ದರು ಎಂದು ಅವರು ಹೇಳಿದ್ದಾರೆ.
    ದಟ್ಟ ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಹಾವಳಿ ಜಾಸ್ತಿ ಇದ್ದ ಕಾರಣ ಮಹಿಳೆಯರ ಪ್ರವೇಶಕ್ಕೆ ತಡೆ ಬಂದಿರಬಹುದು ಎಂಬುದಾಗಿ ಅವರು ತಿಳಿಸಿದ್ದು, ಪ್ರಸ್ತುತ ಕಾಲಘಟ್ಟದಲ್ಲಿ ಮಹಿಳೆಯರ ಮುಕ್ತ ಪ್ರವೇಶಕ್ಕೆ ಸಮಾಜ ಸಮುದಾಯಗಳು ಆಸ್ಪದ ನೀಡವಂತಾಗಬೇಕು, ಮೂಢ ಆಚರಣೆಗಳನ್ನು ಬಿಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries