HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ರೆಹನಾ ಫಾತಿಮಾಗೆ ಇಸ್ಲಾಂ ಉಚ್ಚಾಟನೆ=ಶಬರಿಮಲೆ ವಿವಾದ :ಇಬ್ಬರು ಮಹಿಳಾ ಭಕ್ತಾಧಿಗಳ ಬಂಧನ, ಟಿಡಿಬಿ, ಮತ್ತು ಸಕರ್ಾರದಿಂದ ಪರಿಸ್ಥಿತಿ ಪರಮಾಶರ್ೆ
   ಕಾಸರಗೋಡು: ಆಂಧ್ರ ಪ್ರದೇಶದ ಗುಂಟೂರಿನಿಂದ ಪುರುಷ ಭಕ್ತಾಧಿಗಳ ಗುಂಪಿನಲ್ಲಿ ಆಗಮಿಸಿದ್ದ ಇಬ್ಬರು ಮಹಿಳಾ ಭಕ್ತಾಧಿಗಳನ್ನು ಕೇರಳ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
   ಆಂಧ್ರ ಪ್ರದೇಶದಿಂದ ಬಂದಿದ್ದ ಯಾತ್ರಾಥರ್ಿಗಳ ಗುಂಪಿನಲ್ಲಿ  ಮಹಿಳಾ ಭಕ್ತಾಧಿಗಳ ಬಂದಿದ್ದರು.  ಆದರೆ, ಶಬರಿಮಲೆಯಲ್ಲಿ ವಿಶೇಷ ಆಚರಣೆ ಬಗ್ಗೆ ಏನೂ ಗೊತ್ತಿಲ್ಲದ ಅವರಿಗೆ ಕೆಲವರು ಹಿಂದಕ್ಕೆ ಹೋಗುವಂತೆ ಹೇಳಿದರು. ಆದರೆ, ಹಿಂದೆ ಹೋಗಲು ಒಪ್ಪದ ಅವರು ನಿಲಕ್ಕಲ್ ಗೆ ವಾಪಾಸ್ ಹೋಗಲು ಬಯಸಿದ್ದರು ಎಂದು ಐಜಿ ಎಸ್ . ಶ್ರೀಜಿತ್ ತಿಳಿಸಿದ್ದಾರೆ.
   ಅಯ್ಯಪ್ಪ ದೇವಸ್ಥಾನ ಮುಚ್ಚುವ ಬೆದರಿಕೆಯ ನಡುವೆ  ತಿರುವಾಂಕೂರ್  ದೇವಸ್ವಂ ಮಂಡಳಿ ಮತ್ತು  ಎಲ್ ಡಿಎಫ್ ಸಕರ್ಾರ ಇಡೀ ಪರಿಸ್ಥಿತಿಯ ಪರಾಮಶರ್ೆ ನಡೆಸುವುದಾಗಿ ಹೇಳಿಕೆ ನೀಡಿವೆ.
   ಶಬರಿಮಲೆ ಸನ್ನಿಧಾನದಲ್ಲಿ ಅಶಿಸ್ತು ಎಲೆ ಮೀರದಂತೆ  ಕ್ರಮ ಕೈಗೊಳ್ಳಲಾಗುವುದು, ಈ ವಿಚಾರದಲ್ಲಿ ಟಿಡಿಬಿ ಸೂಕ್ತ ಕ್ರಮ ಕೈಗೊಳ್ಳಬಹುದೆಂದು  ಕೇರಳ ದೇವಸ್ವಂ ಸಚಿವ ಕಡನಂಪಳ್ಳಿ ಸುರೇಂದ್ರನ್ ಹೇಳಿದ್ದಾರೆ.
   ವಿಶೇಷ ಭದ್ರತೆಯೊಂದಿಗೆ ಕೇರಳ ದಲಿತ ಮಹಿಳಾ ಒಕ್ಕೂಟದ ಅಧ್ಯಕ್ಷೆ ಎಸ್ ಪಿ ಮಂಜು ಶಬರಿಮಲೆಗೆ ಭೇಟಿಗೆ ಶನಿವಾರ ಯತ್ನಿಸಿದ್ದರು. ಮಂಜು ಮೇಲೆ ಸುಮಾರು 14 ಅಪರಾಧ ಸಂಬಂಧಿತ ಕೇಸ್ ಗಳಿದ್ದು, ಅಯ್ಯಪ್ಪ ದರ್ಶನ ಪಡೆಯಲು ಭದ್ರತೆ ನೀಡುವಂತೆ ಮೊದಲ ಬಾರಿಗೆ ಪೊಲೀಸರಿಗೆ ಮನವಿ ಸಲ್ಲಿಸಿದ್ದರು.
   ಇದಕ್ಕೂ ಮೊದಲು  ನ್ಯೂಯಾಕರ್್ ಟೈಮ್ಸ್ ಪತ್ರಕತರ್ೆ ಸುಹಾಸಿನಿ ರಾಜ್, ಮೋಜೋ ಟಿವಿಯ ಕೋಕಿಲಾ ಜಾಕಲ್, ಸಾಮಾಜಿಕ ಕಾರ್ಯಕತರ್ೆಯರಾದ ರೆಹನಾ ಫಾತಿಮಾ ಹಾಗೂ ಮೇರಿ ಸ್ವೀಟಿ ಅವರು ದೇವಸ್ಥಾನ ಪ್ರವೇಶಿಸಲು ಯತ್ನಿಸಿದ್ದರು.

   ಹಿಂದೂಗಳಿಗೆ ಅವಮಾನ ಮಾಡಿದ್ದಕ್ಕೆ ಇಸ್ಲಾಂ ನಿಂದ ರೆಹಾನಾ ಫಾತೀಮಾ ಉಚ್ಚಾಟನೆ
    ಶಬರಿಮಲೆ ದೇವಾಲಯಕ್ಕೆ ಪ್ರವೇಶಿಸಲು ಯತ್ನಿಸಿದ್ದ ರೆಹಾನಾ ಫಾತಿಮಾ ಸುಲೈಮಾನ್ ಗೆ ಕೇರಳ ಮುಸ್ಲಿಂ ಜಮಾತ್ ಪರಿಷತ್ ಇಸ್ಲಾಂ ಧರ್ಮದಿಂದ ಉಚ್ಚಾಟನೆ ಮಾಡಿದೆ.
   ರೆಹಾನಾ ಫಾತಿಮಾ ಸುಲೈಮಾನ್ ಅವರನು ಇಸ್ಲಾಂ ಧರ್ಮದಿಂದ ಉಚ್ಚಾಟನೆಗೊಳಿಸಿರುವುದರ ಬಗ್ಗೆ ಮುಸ್ಲಿಂ ಜಮಾತ್ ಪರಿಷತ್ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ರೆಹಾನಾ ಫಾತಿಮಾ ಸುಲೈಮಾನ್ ಅವರ ನಡೆ ಲಕ್ಷಾಂತರ ಹಿಂದೂಗಳು ಹಾಗೂ ಅವರ ಧಾಮರ್ಿಕ ನಂಬಿಕೆಗಳಿಗೆ ಅವಮಾನ ಮಾಡಿದೆ. ಅಷ್ಟೇ ಅಲ್ಲದೇ ಈ ಹಿಂದೆ ಆಕೆ ಕಿಸ್ ಆಫ್ ಲವ್ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಸಿನಿಮಾಗಳಲ್ಲಿ ನಗ್ನವಾಗಿ ನಟಿಸಿದ್ದರು. ಮುಸ್ಲಿಂ ಹೆಸರನ್ನು ಬಳೆಕೆ ಮಾಡುವುದಕ್ಕೆ ರೆಹಾನಾಗೆ ಯಾವುದೇ ಹಕ್ಕಿಲ್ಲ ಎಂದು ಜಮಾತ್ ಪರಿಷತ್ ಹೇಳಿದೆ.
   ಕೋಮು, ಧಾಮರ್ಿಕ ದ್ವೇಷ ಬಿತ್ತುತ್ತಿರುವ ರೆಹಾನಾ ವಿರುದ್ಧ ಸಕರ್ಾರ ಐಪಿಸಿ ಸೆಕ್ಷನ್ 153ಂ ಅಡಿಯಲ್ಲಿ ಪ್ರಕರಣ ದಾಖಲಿಸಬೇಕೆಂದು ಮುಸ್ಲಿಂ ಜಮಾತ್ ಪರಿಷತ್ ಹೇಳಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries