HEALTH TIPS

ಯಾವುದೇ ಶೀರ್ಷಿಕೆಯಿಲ್ಲ

           ಚುನಾವಣೆ ಸಂದರ್ಭದಲ್ಲಿ ಫೇಸ್ ಬುಕ್ ದುರ್ಬಳಕೆ ತಡೆಗೆ 'ವಾರ್ ರೂಂ' ಕಾಯರ್ಾಚರಣೆ
     ಕ್ಯಾಲಿಫೋನರ್ಿಯಾ: ಅಮೆರಿಕ, ಭಾರತವೂ ಸೇರಿದಂತೆ ವಿವಿಧ ಸಾರ್ವತ್ರಿಕ ಚುನಾವಣೆಗಳಲ್ಲಿ ಫೇಸ್ ಬುಕ್ ದುರ್ಬಳಕೆಯಾದ ಕುರಿತು ವಿವಾದ ಉಂಟಾದ ಬೆನ್ನಲ್ಲೇ ಇದಕ್ಕೆ ತಡೆ ಹಾಕಲು ನಿರ್ಧರಿಸಿರುವ ಫೇಸ್ ಬುಕ್ ಸಂಸ್ಥೆ ದುರ್ಬಳಕೆ ತಡೆಯಲು ವಿಶೇಷ ವಾರ್ ರೂ ಸಿದ್ಧಪಡಿಸಿದೆ.
    ಚುನಾವಣಾ ಸಮಯದಲ್ಲಿ ತಪ್ಪು ಮಾಹಿತಿಗಳು, ಹಾನಿಕಾರಕ ವಿಷಯಗಳು ಹರಡುವುದನ್ನುನಿಯಂತ್ರಣ ಮಾಡುವುದಕ್ಕೆಂದೇ ಫೇಸ್ ಬುಕ್ ಸಂಸ್ಥೆ ಕ್ಯಾಲಿಫೋನರ್ಿಯಾದ ಮೆನ್ಲೋ ಪಾಕರ್್ ಪ್ರಧಾನ ಕಚೇರಿಯಲ್ಲಿ ಅತ್ಯಾಧುನಿಕ 'ವಾರ್ ರೂ' ಅನ್ನು ಸ್ಥಾಪಿಸಿದೆ.
  ಈ ವಾರ್ ರೂಂ ನಲ್ಲಿ ವಿಶೇಷ ಪರಿಣಿತಿ ಹೊಂದಿರುವ ತಂತ್ರಜ್ಞರು ಕಾರ್ಯ ನಿರ್ವಹಿಸಲಿದ್ದು, ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ಗುರುತಿಸಿ ಅದನ್ನು ತಡೆಯುವ ನಿಟ್ಟಿನಲ್ಲಿ ಕಾಯರ್ಾಚರಣೆ ನಡೆಸಲಿದ್ದಾರೆ. ಈ ವಿಶೇಷ ವಾರ್ ರೂಂ ನಲ್ಲಿ ಸುಮಾರು 20ಕ್ಕೂ ಹೆಚ್ಚು ತಂತ್ರಜ್ಞರು ಮತ್ತು ಅವರ ಸಹಾಯಕ ಸಿಬ್ಬಂದಿ ಕಂಪ್ಯೂಟರ್ ಪರದೆಯಲ್ಲಿ ಸದಾ ಕಾರ್ಯಪ್ರವೃತ್ತರಾಗಿ ಅನುಮಾನಾಲ್ಪದ ಚಟುವಟಿಕೆಗಳು ಕಂಡುಬಂದರೆ ಅದರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುತ್ತಾರೆ.
   ಈ ವಾರ್ ರೂಂ ಮುಖ್ಯವಾಗಿ ಯುನೈಟೆಡ್ ಸ್ಟೇಟ್ಸ್ ಹಾಗೂ ಮತ್ತಿತರ ಕಡೆಗಳಲ್ಲಿ ನಡೆಯಲಿರುವ ಚುನಾವಣೆಯ ಮೇಲೆ ಫೇಸ್ ಬುಕ್ ಮೂಲಕ ಪ್ರಭಾವ ಬೀರಲು ಪ್ರಯತ್ನಿಸುವ ಖಾತೆದಾರರು ತಪ್ಪು ಮಾಹಿತಿ ಬಿತ್ತರಿಸುವುದರ ವಿರುದ್ಧ ಹೋರಾಡಲಿದೆ. ವಾರ್ ರೂಂನ ಒಳಗೋಡೆಗಳಲ್ಲಿ ಹಲವು ಗಡಿಯಾರಗಳಿದ್ದು, ಅವು ಯುಎಸ್ ಹಾಗೂ ಬ್ರೆಜಿಲ್ನ ವಿವಿಧ ಪ್ರದೇಶಗಳ ಸಮಯವನ್ನು ತೋರಿಸುತ್ತವೆ. ಮ್ಯಾಪ್ ಮತ್ತು ಟಿವಿ ಪರದೆಗಳ ಮೇಲೆ ಸಿಎನ್ಎನ್, ಫಾಕ್ಸ್ ನ್ಯೂಸ್, ಟ್ವಿಟರ್ ಗಳು ಕಾಣಿಸುತ್ತವೆ.
ಮತ್ತೊಂದು ಮಾನಿಟರ್ ನೈಜ ಸಮಯದ ಫೇಸ್ ಬುಕ್ ಚಟವಟಿಕೆಯ ಗ್ರಾಫ್ ಅನ್ನು ತೋರಿಸುತ್ತಿರುತ್ತದೆ ಎಂದು ಫೇಸ್ ಬುಕ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
    ಈ ಹಿಂದೆ 2016 ರ ಅಮೆರಿಕ ಸಾರ್ವತ್ರಿಕ ಚುನಾವಣೆ ವೇಳೆ ರಷ್ಯಾ ಹಾಗೂ ಮತ್ತಿತರರು ಫೇಸ್ ಬುಕ್ ನಲ್ಲಿ ಸುಳ್ಳು ಮಾಹಿತಿಗಳನ್ನು ಹಬ್ಬಿಸಿದರೂ ಅದನ್ನು ತಡೆಯುವಲ್ಲಿ ಸಂಸ್ಥೆ ವಿಫಲವಾಗಿತ್ತು. ಇದೇ ಕಾರಣಕ್ಕೆ ಪೇಸ್ ಬುಕ್ ಸಂಸ್ಥೆ ನಿಂದನೆಗೆ ಒಳಗಾಗಿತ್ತು. ಇಂತಹ ಘಟನೆಗಳು ಮರುಕಳಿಸದಿರಲಿ ಎಂದು ಫೇಸ್ ಬುಕ್ ಇಂತಹ ಕ್ರಮಕ್ಕೆ ಮುಂದಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries