ಶುಳುವಾಲಮೂಲೆಯಲ್ಲಿ ನವರಾತ್ರಿ ಉತ್ಸವ ಸಂಪನ್ನ
ಪೆರ್ಲ: ನಲ್ಕ ಸಮೀಪದ ಶುಳುವಾಲಮೂಲೆ ಶ್ರೀಸದನದಲ್ಲಿ ವಾಷರ್ಿಕ ನವರಾತ್ರಿ ಮಹೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಶುಕ್ರವಾರ ಸಂಪನ್ನಗೊಂಡಿತು.
ಕಾರ್ಯಕ್ರಮದ ಅಂಗವಾಗಿ ಗುರುವಾರ ರಾತ್ರಿ ಯಕ್ಷ ಗಾನ ವೈಭವ ವಿಶಿಷ್ಟವಾಗಿ ಮೂಡಿಬಂತು. ಭಾಗವತಿಕೆಯ ಉದಯೋನ್ಮುಖ ಪ್ರತಿಭೆಗಳಾದ ಹೇಮಾಸ್ವಾತಿ ಎ.ಕುಯರ್ಾಜೆ, ಶರಣ್ಯ ಕೆರೆಮೂಲೆ ಹಾಗೂ ಅಮೃತ ಪಳ್ಳತ್ತಡ್ಕ ಮೊದಲ ಭಾಗದಲ್ಲಿ ಭಾಗವತಿಕೆಯೊಂದಿಗೆ ರಂಗಪ್ರವೇಶ ನಡೆಸಿದರು. ಬಳಿಕ ಸತೀಶ ಪುಣಿಚಿತ್ತಾಯ ಪೆರ್ಲ, ಅವಿನಾಶ ಶಾಸ್ತ್ರಿ ಕೊಲ್ಲೆಂಕಾನ, ಗಣಪತಿ ಶಮರ್ಾ ಪಳ್ಳತ್ತಡ್ಕ ಹಾಗೂ ಅನ್ವಯಕೃಷ್ಣ ಪಳ್ಳತ್ತಡ್ಕ ವೈವಿಧ್ಯಮಯವಾಗಿ ಗಾನ ವೈಭವ ನಡೆಸಿಕೊಟ್ಟರು. ಹಿರಿಯ ಭಾಗವತರಾದಹೊಸಮೂಲೆ ಗಣೇಶ್ ಭಟ್ ವಿಶೇಷವಾಗಿ ಆಗಮಿಸಿ ಪಾಲ್ಗೊಂಡರು. ಹಿಮ್ಮೇಳದಲ್ಲಿ ಅನೂಪ್ ಸ್ವರ್ಗ(ಮದ್ದಳೆ), ನಾರಾಯಣ ಶಮರ್ರ್ಾ ನೀಚರ್ಾಲು(ಚೆಂಡೆ) ಹಾಗೂ ಸಮೃದ್ದ ಪುಣಿಚಿತ್ತಾಯ ಪೆರ್ಲ(ಚಕ್ರತಾಳ)ದಲ್ಲಿ ಸಹಕರಿಸಿದರು. ಉದಯಶಂಕರ ಭಟ್ ಅಮೈ ನಿರೂಪಿಸಿದರು.
ಬೆಳಿಗ್ಗೆ ಶ್ರೀಚಂಡಿಕಾ ಹೋಮಾರಂಭ, ಮಧ್ಯಾಹ್ನ ಪೂಣರ್ಾಹುತಿ, ಪ್ರಸಾದವಿತರಣೆ ನಡೆಯಿತು. ಬೆಳಿಗ್ಗೆ 10ಕ್ಕೆ ಬಳ್ಳಪದವು ವಿದ್ವಾನ್ ನಟರಾಜ ಶಮರ್ಾ ಅವರ ಶಿಷ್ಯರಾದ ಕಾತೀಕ್ ಶಾಮ ಮತ್ತು ಬಳಗದವರಿಂದ ಕನರ್ಾಟಕ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಿತು. ಬಳಿಕ ರಾತ್ರಿ ಗಾನ ವೈಭವದ ಬಳಿಕ ಶ್ರೀದೇವಿಗೆ ಮಹಾಮಂಗಳಾರತಿ, ಪ್ರಸಾದವಿತರಣೆ, ಅನ್ನಸಂತರ್ಪಣೆ ನೆರವೇರಿತು.ಬ್ರಹ್ಮಶ್ರೀ ಶಿವಸುಬ್ರಹ್ಮಣ್ಯ ಭಟ್ ವೈದಿಕ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು. ವಿಜಯದಶಮಿಯಂದು ವಿಶೇಷಪೂಜೆ, ಹವನಗಳೊಂದಿಗೆ ನವರಾತ್ರಿ ಉತ್ಸವ ಸಂಪನ್ನಗೊಂಡಿತು.