HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ಸಿರಿಬಾಗಿಲು ವೆಂಕಪ್ಪಯ್ಯ ಸ್ಮಾರಕ ಪ್ರಶಸ್ತಿ ಪ್ರದಾನ
     ಕುಂಬಳೆ: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಮಂಗಳೂರು ಪುರಭವನದಲ್ಲಿ  ಇತ್ತೀಚೆಗೆ ಉಡುಪಿಯ ಯಕ್ಷಗಾನ ಕಲಾರಂಗ ಸಂಸ್ಥೆಗೆ ನುಡಿ ಗೌರವ ಮತ್ತು ಸಿರಿಬಾಗಿಲು ವೆಂಕಪ್ಪಯ್ಯ ಸ್ಮಾರಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
     ಅಧ್ಯಕ್ಷತೆ ವಹಿಸಿದ್ದ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ. ಬಿ.ಎ.ವಿವೇಕ ರೈ ಮಾತನಾಡಿ " ತಿಟ್ಟು, ಪ್ರದೇಶ, ಸಂಸ್ಥೆಗಳ ನಡುವಿನ ಅಸಮಧಾನ ಬಿಟ್ಟು ಯಕ್ಷಗಾನದ ಬೆಳವಣಿಗೆ ಆಗಲಿ. ಹೊಸಬದುಕು ಕಟ್ಟುವ ಕೆಲಸಕ್ಕೆ ಯಕ್ಷಗಾನ ವೇದಿಕೆ ಹಾಗೂ ಪ್ರೇರಣೆಯಾಗಲಿ. ಒಂದು ಸಾಂಸ್ಕೃತಿಕ ಸಂಸ್ಥೆ ಇನ್ನೊಂದ ಕಲಾ, ಸೇವಾ ಸಂಸ್ಥೆಯನ್ನು ಗುರುತಿಸಿ ಗೌರವಿಸುವುದು ತೀರಾ ಅಪೂರ್ವದ ಕಾರ್ಯ, ಅಂತಹ ಚಾರಿತ್ರಿಕ ಕಾರ್ಯದಲ್ಲಿ ನಾನು ಭಾಗವಹಿಸುವುದು ಹೆಮ್ಮೆ ಎನಿಸುತ್ತಿದೆ, ದಕ್ಷಿಣದ ಕಾಸರಗೋಡಿನ ಸಿರಿಬಾಗಿಲು ಪ್ರತಿಷ್ಠಾನ, ಉತ್ತರದ ಉಡುಪಿಯ ಕಲಾರಂಗವನ್ನು ಗೌರವಿಸುತ್ತಿರುವುದು ಶ್ಲಾಘನಾರ್ಹ" ಎಂದರು.
    ಅಭಿನಂದನಾ ನುಡಿಗಳನ್ನಾಡಿದ ಯಕ್ಷಗಾನ ಹಿರಿಯ ಕಲಾವಿದ ಕುಂಬ್ಳೆ ಸುಂದರ ರಾವ್ ಪ್ರಸ್ತುತ ಕಲಾರಂಗ ಮತ್ತು ಇತರ ಸಂಸ್ಥೆಗಳು ಯಕ್ಷಗಾನ ಕಲಾವಿದರಿಗೆ ಆಸರೆಯಾಗಿದೆ. ಯಕ್ಷಗಾನ ಕಲಾವಿದರಿಗೆ ಔಷಧ, ವಿಮೆ, ಬಸ್ ಪಾಸ್, ಮನೆ ನಿಮರ್ಾಣ, ಯಕ್ಷಗಾನ ಕಲಿಕೆ ಸಹಿತ ವಿವಿಧ ಸವಲತ್ತನ್ನು ಕಲ್ಪಿಸಿ ಕೊಡುತ್ತಿರುವ ಕಲಾರಂಗಕ್ಕೆ ಅರ್ಹವಾಗಿಯೇ ಪ್ರಶಸ್ತಿ ಸಂದಿದೆ ಎಂದರು.  ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಶಿವರಾಮ ಕಾಸರಗೋಡು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು.
     ಪ್ರಶಸ್ತಿ ವಿತರಣಾ ಕಾರ್ಯಕ್ರಮಕ್ಕೂ ಮುನ್ನ ನುಡಿ ಗೌರವವವನ್ನು ನಿವೃತ್ತ ಪ್ರಾಂಶುಪಾಲ ಪ್ರೊ. ಜಿ.ಆರ್.ರೈ. ಉದ್ಘಾಟಿಸಿದರು.ವಿದ್ವಾಂಸ ಡಾ. ಎಂ ಪ್ರಭಾಕರ ಜೋಷಿ ಅಧ್ಯಕ್ಷತೆ ವಹಿಸಿದ್ದರು. ಕಲಾರಂಗದ ಚಟುವಟಿಕೆ ಬಗ್ಗೆ ಡಾ. ಚಂದ್ರಶೇಖರ ದಾಮ್ಲೆ, ಕಲಾರಂಗದ ಪ್ರಶಸ್ತಿ ಬಗ್ಗೆ ಶ್ರೀಧರ ಡಿ.ಎಸ್, ಕಲಾವಿದರಿಗೆ ನೀಡುವ ಸಹಕಾರ ಬಗ್ಗೆ ಪ್ರೊ. ಪದ್ಮನಾಭ ಗೌಡ ಮಾತನಾಡಿದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಅಧ್ಯಕ್ಷ ಸತೀಶ ಶೆಟ್ಟಿ ಪಟ್ಲ, ಕೇರಳ ಪಾತರ್ಿಸುಬ್ಬ ಅಕಾಡಮಿಯ ಕಾರ್ಯದಶರ್ಿ ಸತೀಶ ಅಡಪ ಸಂಕಬೈಲು ಶುಭ ಹಾರೈಸಿದರು.
    ರಾಧಾಕೃಷ್ಣ ಕೆ. ಉಳಿಯತ್ತಡ್ಕ ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸಿರಿಬಾಗಿಲು ಸ್ವಾಗತಿಸಿ, ಡಾ. ಶ್ರುತಕೀತರ್ಿರಾಜ್ ಉಜಿರೆ ವಂದಿಸಿದರು. ಗುರುರಾಜ ಹೊಳ್ಳ ಬಾಯಾರು ನಿರ್ವಹಿಸಿದರು. ಬಳಿಕ ತೆಂಕುತಿಟ್ಟಿನ ಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ " ಆತ್ಮಾನಂ ಮಾನುಷಂ ಮನ್ಯೇ" ಯಕ್ಷಗಾನ ಪ್ರದರ್ಶನ ಜರಗಿತು.
   ಸಮಾರಂಭದಲ್ಲಿ ಯಕ್ಷಗಾನ ಕಲಾರಂಗದ ಪರವಾಗಿ ಕಲಾರಂಗದ ಅಧ್ಯಕ್ಷ ಕೆ.ಗಣೇಶ ರಾವ್ ಪ್ರಶಸ್ತಿ ಸ್ವೀಕರಿಸಿದರು.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries