ಗದ್ದಿಕಾ-2018 ಜನಪದ ಕಲೆ ವಸ್ತು ಪ್ರದರ್ಶನ ಮೇಳ
ಡಿ.22 ರಿಂದ 30 ರ ತನಕ ಕಾಲಿಕಡವ್ ಮೈದಾನದಲ್ಲಿ
ಕಾಸರಗೋಡು: ತ್ರಿಕರಪುರದ ಕಾಲಿಕಡವಿನಲ್ಲಿ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಗದ್ದಿಕಾ-2018 -ವಿಶೇಷ ರಾಜ್ಯದ ಜಾನಪದ ಗುಡಿಕೈಗಾರಿಕೆಯ ಪ್ರದರ್ಶನ ಮತ್ತು ಮಾರಾಟ ಮೇಳದ ಪೂರ್ವಭಾವಿ ಸ್ವಾಗತ ಸಮಿತಿ ಸಭೆ ಪಿಲಿಕ್ಕೋಡ್ ಹಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಿತು.
ಶಾಸಕ ಒ.ರಾಜಗೋಪಾಲ್ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಪರಿಶಿಷ್ಟ ವರ್ಗ ಮತ್ತು ಜಾತಿ ಸಹಿತ ಬುಡಕಟ್ಟು ಜನರ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮವು ಡಿ.22 ರಿಂದ 30 ರ ತನಕ ನಡೆಯಲಿದೆ. ಜಿಲ್ಲೆಯಲ್ಲಿ ಮೊದಲ ಬಾರಿಗೆ ಆಯೋಜಿಸಲ್ಪಟ್ಟ ಕಾರ್ಯಕ್ರಮದಲ್ಲಿ ಜನಪದ ಸಂಸ್ಕೃತಿ ಬಿಂಬಿಸುವ ಚಿತ್ರಗಳು ಮತ್ತು ಜೀವನ ಸಂಸ್ಕೃತಿಯ ಭಾಗವಾಗಿ ಉಪಯೋಗಿಸುತ್ತಿದ್ದ ಹಲವು ವಸ್ತುಗಳನ್ನು ಪ್ರದಶರ್ಿಸಲಾಗುವುದು ಎಂದು ಶಾಸಕ ಒ.ರಾಜಗೋಪಾಲ್ ಹೇಳಿದರು. ಜನಸಾಮಾನ್ಯರಿಗೆ ವರ್ಷಗಳ ಹಿಂದಿನ ಸಂಸ್ಕೃತಿಯ ಅರಿವಾಗಬೇಕು, ವಯನಾಡಿನ ಬುಡಕಟ್ಟು ಜನರ ಜೌಷಧೋಪಚಾರ, ಆಹಾರ ವೈವಿಧ್ಯಗಳು ಪ್ರದರ್ಶನದ ಭಾಗವಾಗಲಿದೆ. ಸಪ್ತ ಭಾಷಾ ವೈವಿಧ್ಯ ಸಹಿತ ಜಾನಪದರ ಸಂಸ್ಕೃತಿಯನ್ನು ಬಿಂಬಿಸುವ ಕಲಾ ಪ್ರದರ್ಶನ ಗದ್ದಿಕಾ ಮೇಳದಲ್ಲಿ ನಡೆಯಲಿದೆ. ನೀಲೇಶ್ವರ ಬ್ಲಾ.ಪಂ ಅಧ್ಯಕ್ಷೆ ವಿ.ಪಿ ಜಾನಕಿ ಅಧ್ಯಕ್ಷತೆ ವಹಿಸಿದರು. ಪ.ವರ್ಗ, ಪ.ಜಾತಿ ಕ್ಷೇಮ ಇಲಾಖೆ ಹೆಚ್ಚುವರಿ ಕಾರ್ಯದಶರ್ಿ ಕೆ.ಪದ್ಮರಾಜನ್ ಗದ್ದಿಕಾ -2018 ರ ಬಗ್ಗೆ ವಿವರನೆ ನೀಡಿದರು. ಮಾಜಿ ಶಾಸಕ ಕೆ.ಕುಞರಾಮನ್, ಎಂ.ನಾರಾಯಣನ್, ಸ್ಥಳೀಯಾಡಳಿತ ಪ್ರತಿನಿಧಿಗಳು, ರಾಜಕೀಯ ಪಕ್ಷ ಪ್ರತಿನಿಧಿಗಳು ಉಪಸ್ಥಿತರಿದ್ದರು.