HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               ಶರಣಂ ಮಂತ್ರದ ಮುಂದೆ ಮಂಡಿಯೂರಿದ ಪಿಣರಾಯಿ ಸರಕಾರ-ಕೆ. ಶ್ರೀಕಾಂತ್
    ಮಂಜೇಶ್ವರ: ಆಸ್ತಿಕರ ನಂಬಿಕೆ, ದೇವರ ಶಕ್ತಿ, ಮಂತ್ರ ತಂತ್ರ ಗಳಲ್ಲಿರುವ ವೈಜ್ಞಾನಿಕತೆ ನಾಸ್ತಿಕ ಕಮ್ಯುನಿಸ್ಟ್ರಿಗೆ ಅರಿವಾಗದು. ತಂತ್ರವರಿಯದ ಅವರಿಗೆ ಕುತಂತ್ರ ಮಾತ್ರ ತಿಳಿದಿದೆ. ಕೋಟ್ಯಂತರ ಭಕ್ತರು ಶರಣಂ ಮಂತ್ರ ಜಪಿಸುತ್ತ ಎಡರಂಗ ಸರಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡುತ್ತಿರುವುದನ್ನು ಕಾಣದ ಪಿಣರಾಯಿ ಸರಕಾರ ಹಿಂದೂಯೇತರ ಧರ್ಮ ವಿರೋಧಿಗಳನ್ನು ಪೊಲೀಸ್ ಬಲ ಉಪಯೋಗಿಸಿ ಶಬರಿಮಲೆ ಗೆ ಕೊಂಡೊಯ್ಯಲೇ ಬೇಕೆಂದು ನಿಧರ್ಾರ ಮಾಡಿರುವುದು ಎಡರಂಗ ಹಿಂದೂ ಧಾಮರ್ಿಕತೆ ನಾಶ ಮಾಡುವ ಗೂಢ ಉದ್ದೇಶದಿಂದ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ. ಕೆ. ಶ್ರೀಕಾಂತ್ ಎಡರಂಗ ಸರಕಾರದ ಧೋರಣೆ ಯನ್ನು ಖಂಡಿಸಿದರು.
    ಮಂಜೇಶ್ವರ ತೂಮಿನಾಡಿನಲ್ಲಿ ಅಯ್ಯಪ್ಪ ಕರ್ಮ ಸಮಿತಿ ನೇತೃತ್ವದಲ್ಲಿ ಮಂಗಳವಾರ ನಡೆದ ನಾಮಜಪ ಪ್ರತಿಭಟನೆ ಉದ್ಘಾಟಿಸಿ ಅವರು ಮಾತನಾಡಿದರು.
   ಧಾಮರ್ಿಕ, ಸಾಮಾಜಿಕ ಮುಖಂಡ ಶ್ರೀಕೃಷ್ಣ ಶಿವಕೃಪಾ ಕುಂಜತ್ತೂರು ಅಧ್ಯಕ್ಷತೆ ವಹಿಸಿ ಈ ಸಂದರ್ಭ ಮಾತನಾಡಿ, ಧಾಮರ್ಿಕ ನಂಬಿಕೆಗಳಿಗೆ ಘಾಸಿಯಾಗುವ ಪರಮೋಚ್ಚ ನ್ಯಾಯಾಲಯದ ತೀಪರ್ಿಗೆ ಮರು ಪರಿಶೀಲಾ ಅಜರ್ಿ ಸಲ್ಲಿಸದೆ ಪೂರ್ವಯೋಜಿತವೆಂಬಂತೆ ತೀಪರ್ು ಜಾರಿಗೊಳಿಸಲು ಯತ್ನಿಸುವ ರಾಜ್ಯ ಸರಕಾರದ ಉತ್ಸಾಹದ ಹಿಂದೆ ದುರುದ್ದೇಶ ಅಡಗಿದೆ. ಬೇಲಿಯೇ ಎದ್ದು ಬೆಳೆ ನಾಶಕ್ಕೆ ಹವಣಿಸಿದಲ್ಲಿ ಪರಿಣಾಮ ದುರಂತದಲ್ಲಿ ಪರ್ಯವಸಾನಗೊಳ್ಳುವುದೆಂದು ತಿಳಿಸಿದರು.   
  ಗುರುಸ್ವಾಮಿ ಸಂಜೀವ ಶೆಟ್ಟಿ, ಉಪಸ್ಥಿತರಿದ್ದರು. ಶ್ರೀ ಮಹಾಕಾಳಿ ಕ್ಷೇತ್ರ ದಿಂದ ನಾಮಜಪ ಮೆರವಣಿಗೆ ಆರಂಭವಾಯಿತು ಮುಖಂಡರಾದ ಆದಶರ್್ ಬಿಎಂ, ರಾಜೇಶ್ ತುಮಿನಾಡ್, ಮಾಧವ ಬಲ್ಯಾಯ, ಪದ್ಮನಾಭ ಕಡಪ್ಪರ, ಯಾದವ ಬಡಾಜೆ, ವಿಷ್ಣು ಆಚಾರ್ಯ, ಕಮಲಾಕ್ಷ,  ಕಿರಣ್, ರಾಕೇಶ್ ಮೊದಲಾದವರು ನೇತೃತ್ವ ನೀಡಿದರು. ಹರೀಶ್ ಶೆಟ್ಟಿ ಮಾಡ ಸ್ವಾಗತಿಸಿ, ಸಂದೇಶ್ ವಂದಿಸಿದರು.

  

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries