ಶಬರಿಮಲೆಯ ಸಾಂಪ್ರದಾಯಿಕ ಸೌಂದರ್ಯ ಉಳಿಯಲಿ: ವೀರೇಂದ್ರ ಹೆಗ್ಗಡೆ
ಧರ್ಮಸ್ಥಳ: ಶಬರಿಮಲೆಯ ಸಾಂಪ್ರದಾಯಿಕ ಸೌಂದರ್ಯ ಉಳಿಯಬೇಕು. ಹೀಗಾಗಿ ಸಂಪ್ರದಾಯವನ್ನು ಮೀರದಿರುವುದು ಒಳಿತು ಎಂದು ಧರ್ಮಸ್ಥಳ ಧಮರ್ಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಧರ್ಮಸ್ಥಳದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವೀರೇಂದ್ರ ಹೆಗ್ಗಡೆ "ಶಬರಿಮಲೆಗೆ ತೆರಳುವವರು 48 ದಿನ ಬ್ರಹ್ಮಚರ್ಯ ವ್ರತ ಪಾಲನೆ ಮಾಡಿರುತ್ತಾರೆ. ಭಕ್ತರು ವ್ರತ ಆಚರಣೆ ಮಾಡುವುದರ ಹಿಂದೆ ಅವರಲ್ಲಿ ಸಂಯಮವನ್ನು ಬೆಳೆಸಿಕೊಳ್ಳುವ ಉದ್ದೇಶವಿರುತ್ತದೆ. ಸಂಯಮ, ಮನೋನಿಗ್ರಹಗಳು ಮನುಷ್ಯನಿಗೆ ಅಗತ್ಯವಾಗಿದ್ದು ಒಂದು ವೇಳೆ ಸಂಯಮ ಸಡಿಲಾದರೆ ಅಸಮಾನತೆ ಉಂಟಾಗಬಹುದು. ಇದುವೇ ಮೀಟೂ ನಂತಹಾ ಪ್ರಕರಣ ನಡೆಯಲು ಕಾರಣವಾಗಬಾರದು ಎಂದಿದ್ದಾರೆ.
ಶಬರಿಮಲೆಯ ಸಾಂಪ್ರದಾಯಿಕ ಸೌಂದರ್ಯ ಉಳಿಸಿಕೊಳ್ಳಬೇಕು.ದೇವಸ್ಥಾನದ ಪಾವಿತ್ರ್ಯತೆ, ಸಾಂಪ್ರದಾಯಿಕ ಸೌಂದರ್ಯ ಹಾಳಾಗದಂತೆ ಕಾಪಾಡಿಕೊಳ್ಳುವುದು ಒಳಿತು.
ಕೆಲ ಸಂಪ್ರದಾಯಗಳು ಬದಲಾಗದೆ ಇದ್ದರೆ ಉತ್ತಮ.ಮಹಿಳೆಯರು ಶಬರಿಮಲೆಗೇ ತೆರಳಿ ಪೂಜಿಸಬೇಕಾಗಿಲ್ಲ. ಭಾರತದಲ್ಲಿ ಅಷ್ಟೇ ಅಲ್ಲದೆ ವಿದೇಸದಲ್ಲಿ ಸಹ ಕೆಲವೆಡೆ ಈ ಬಗೆಯ ನಿರ್ಬಂಧಗಳಿದೆ.ಹೀಗೆಂದ ಮಾತ್ರಕ್ಕೆ ದೇವಸ್ಥಾನಕ್ಕೆ ಪ್ರವೇಶಿಸಿದರೆ ಏನೋ ಆಗುತ್ತದೆ ಎಂದಲ್ಲ, ಆದರೆ ಪಾರಂಪರಿಕ ಪದ್ದತಿ ಅನುಸರಿಸುವುದು ಸೂಕ್ತ ಎನ್ನುವುದಷ್ಟೇ ನನ್ನ ಭಾವನೆ ಹೆಗ್ಗಡೆ ವಿವರಿಸಿದರು.