ಕುಂಬಳೆಯ ನಾಟ್ಯ ವಿದ್ಯಾಲಯದ ಸಾಧನೆಗೆ ಮತ್ತೊಂದು ಗರಿ
ವಿದುಷಿಃ ವಿದ್ಯಾಲಕ್ಷ್ಮೀ ಕುಂಬಳೆಯವರ ನಾಲ್ವರು ಶಿಷ್ಯೆಯರಿಗೆ ಮೊದಲ ಬಾರಿಗೆ ವಿದ್ಯತ್ ಉತ್ತರ ಪೂರ್ಣ
ಕುಂಬಳೆ: ನೃತ್ಯಾಚಾರ್ಯ ಬಾಲಕೃಷ್ಣ ಮಾಸ್ತರ್ ಮಂಜೇಶ್ವರ ಅವರ ಶಿಷ್ಯೆ, ಕುಂಬಳೆಯಲ್ಲಿ ಹಲವಾರು ವರ್ಷಗಳಿಂದ ನಾಟ್ಯ ವಿದ್ಯಾಲಯವನ್ನು ಕಟ್ಟಿ ಬೆಳೆಸಿ ಆಸಕ್ತ ವಿದ್ಯಾಥರ್ಿಗಳಿಗೆ ಭರತನಾಟ್ಯ ಕೌಶಲ್ಯವನ್ನು ನೀಡುತ್ತಿರುವ ವಿದುಷಿಃ ವಿದ್ಯಾಲಕ್ಷ್ಮೀ ಬೇಳ ಇವರ ನಾಲ್ವರು ವಿದ್ಯಾಥರ್ಿಗಳು ಪ್ರಥಮ ಸಾಲಿನ ಭರತನಾಟ್ಯ ವಿದ್ವತ್ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿ ನಾಡಿಗೆ ಕೀತರ್ಿ ತಂದಿದ್ದಾರೆ.
ಕುಂಬಳೆಯ ದಿವ್ಯಾ ಕೆ, ಶ್ರುತಿ ಬಿ, ಮೇಘನಾ ಹಾಗೂ ಸಂಗೀತಾ ನಾಗೇಶ್ ಇವರು ಕನರ್ಾಟಕ ಫ್ರೌಢಶಿಕ್ಷಣ ಮಂಡಳಿ ನಡೆಸಿದ2018ನೇಸಾಲಿನ ನೃತ್ಯ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ.
ದಿವ್ಯಾ ಕೆ ಅವರು ಕುಂಬಳೆಯ ದಿ.ಶಂಕರ ಮತ್ತು ಕುಮುದಟೀಚರ್ ದಂಪತಿಗಳ ಪುತ್ರಿಯಾಗಿದ್ದು, ಬೆಂಗಳೂರಿನ ಬಸವೇಶ್ವರ ಮಹಿಳಾ ಕಾಲೇಜಿನಲ್ಲಿ ಪ್ರಸ್ತುತ ಉಪನ್ಯಾಸಕಿಯಾಗಿರುವ ಇವರು ಮಂಗಳೂರು ವಿವಿಯ ಸಂಶೋಧನಾ ವಿದ್ಯಾಥರ್ಿಯಾಗಿದ್ದಾರೆ. ಮೋಹನ್ ಮತ್ತು ಭಾರತೀ ದಂಪತಿಗಳ ಪುತ್ರಿಯಾಗಿರುವ ಶ್ರುತಿ ಬಿ. ಅವರು ಕುಂಬಳೆಯ ನಾಟ್ಯ ವಿದ್ಯಾಲಯದಲ್ಲಿ ನೃತ್ಯ ಶಿಕ್ಷಕಿಯಾಗಿದ್ದಾರೆ. ಮೇಘನಾ ಅವರು ಕುಂಬಳೆಯ ರಾಜಗೋಪಾಲ ಓಕುಣ್ಣಾಯ ಮತ್ತು ಸರಸ್ವತೀ ಟೀಚರ್ ದಂಪತಿಗಳ ಪುತ್ರಿಯಾಗಿದ್ದು, ಬೆಂಗಳೂರಿನ ಐಟಿ ಕಂಪೆನಿ ಉದ್ಯೋಗಿಯಾಗಿದ್ದಾರೆ. ಸಂಗೀತಾ ನಾಗೇಶ್ ಅವರು ನಾಗೇಶ್ ಕೆ. ಮತ್ತು ಪ್ರೇಮಾ ಕೆ. ದಂಪತಿಗಳ ಪುತ್ರಿಯಾಗಿದ್ದು, ಎಂ.ಬಿ.ಎ.ಪದವೀಧರೆಯಾಗಿದ್ದಾರೆ.
ನೃತ್ಯಗುರು ವಿದ್ಯಾಲಕ್ಷ್ಮೀ ಬೇಳ ಅವರ ನಿರಂತರ ಅಧ್ಯಾಪನದ ತರಬೇತಿಯಿಂದ ತಾವು ಈ ಸಾಧನೆಗೈಯ್ಯಲು ಕಾರಣವಾಗಿದ್ದು, ನೃತ್ಯಗುರುಗಳಾಗಿ ವಿದ್ಯಾಥರ್ಿಗಳಿಗೆ ಭರತನಾಟ್ಯದ ಅರಿವನ್ನು ವಿಸ್ತರಿಸುವ ಬಯಕೆಯನ್ನು ನಾಲ್ವರು ವಿದ್ಯಾಥರ್ಿಗಳೂ ಹಂಚಿಕೊಂಡಿದ್ದಾರೆ.