ಶ್ವಾನ-ನಾಗರ- ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್!
ಬೆಂಗಳೂರು: ಅಪರೂಪದ ಘಟನೆ ಎಂಬಂತೆ ಸೂರ್ಯನ ಕಿರಣಗಳಿಗೆ ನಾಗರ ಹಾವಿನ ಹೆಡೆ ಹೊಳೆಯುತ್ತಿದ್ದ ದೃಶ್ಯ ಬುಧವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮಾಧ್ಯಮವೊಂದರ ವರದಿಯಂತೆ, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕು ಹೊಳೆಮಕ್ಕಿ ಗ್ರಾಮದ ಕಾಫಿ ತೋಟದಲ್ಲಿ ಈ ದೃಶ್ಯ ಕಂಡು ಬಂದಿದ್ದು, ತೋಟದಲ್ಲಿ ಹೆಡೆ ಎತ್ತಿದ್ದ ಹಾವಿನ ತಲೆ ಮೇಲೆ ನೇರವಾಗಿ ಸೂರ್ಯನ ಕಿರಣಗಳು ಬೀಳುತ್ತಿದ್ದವು. ಈ ವೇಳೆ ಹಾವಿನ ಹೆಡೆ ಕೆಂಪಾಗಿ ಹೊಳೆಯುತ್ತಿತ್ತು. ತೋಟದಲ್ಲಿ ವ್ಯಕ್ತಿಗಳು ಈ ದೃಶ್ಯಾವಳಿಯನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಕ್ಕೆ ಹರಿ ಬಿಟ್ಟಿದ್ದಾರೆ. ಈ ಫೋಟೋ ವೈರಲ್ ಆಗುತ್ತಿದೆ.
ಹೊಳೆಮಕ್ಕಿಯ ಕಾಫಿ ತೋಟ ಅವಿನಾಶ್ ಎಂಬವರರದ್ದಾಗಿದ್ದು. ತೋಟದಲ್ಲಿ ನಾಯಿ ಮತ್ತು ನಾಗರಹಾವು ಮಧ್ಯೆ ಅರ್ಧ ಗಂಟೆಗಳ ಕಾಲ ಜಗಳವಾಡಿದ್ದವು. ಶ್ವಾನದ ಮೇಲೆ ನಾಗರಾಜ ಎರಗಲು ಮುಂದಾಗಿದ್ದು, ಈ ವೇಳೆ ನಾಯಿ ಬೊಗಳಲು ಆರಂಭಿಸಿದೆ. ನಾಯಿ ಬೊಗಳುತ್ತಿರುವ ಶಬ್ದ ಕೇಳಿದ ಅವಿನಾಶ್ ಅವರು ಕೂಡಲೇ ಎದ್ದು ಬಂದಿದ್ದು, ನಾಗರ ಹಾವು ನಾಯಿಯ ಜಗಳ ಕಂಡು ದಂಗಾಗಿದ್ದಾರೆ. ಹಾವಿನ ಹೆಡೆ ಹೊಳೆಯುತ್ತಿರುವ ದೃಶ್ಯವನ್ನು ಅವರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದ್ದಾರೆ.
ಈ ಮಧ್ಯೆ ನಾಯಿಯ ಸಹವಾಸವೂ ಬೇಡ, ಪೋಟೋ ವೀಡಿಯೀಗಳೂ ಬೇಡ ಎಂದು ನಾಗರ ಹಾವು ಬಳಿಕ ಅಪ್ರತ್ಯಕ್ಷಗೊಂಡಿತು.