HEALTH TIPS

ಯಾವುದೇ ಶೀರ್ಷಿಕೆಯಿಲ್ಲ

             ಪೆರ್ಲದಲ್ಲಿ ಅಯ್ಯಪ್ಪ ಭಕ್ತ ಸಂಗಮ; ಶರಣು ಮಂತ್ರ ಜಪಯಾತ್ರೆ ಸಂಪನ್ನ
   ಪೆರ್ಲ: ಪುರಾಣ ಶಾಸ್ತ್ರಗಳು, ಋಷಿ ಮುನಿಗಳ ಉಲ್ಲೇಖದ ಪ್ರಕಾರ ಧರ್ಮದ ಆಚಾರ ವಿಚಾರ ನಡೆಯುತ್ತಾ ಬಂದಿದೆ. ಧಾಮರ್ಿಕ ಮುಖಂಡರು ಈ ಬಗ್ಗೆ ತಲೆ ಕೆಡಿಸಬೇಕೇ ಹೊರತು ನಾಸ್ತಿಕರು ಮೂಗು ತೂರಿಸುತ್ತಿರುವುದು ಸರಿಯಲ್ಲ. ಪ್ರಾಕೃತಿಕ ದುರಂತದ ಕಹಿ ನೆನಪು ಮಾಸುವ ಮುಂಚೆಯೇ ಪ್ರಜೆಗಳ ಆಶೀವರ್ಾದದಿಂದ  ಚುನಾಯಿಸಲ್ಪಟ್ಟ ಸರಕಾರ ಪ್ರಜೆಗಳ ಯೋಗ ಕ್ಷೇಮದ ಬಗ್ಗೆ ಚಿಂತಿಸದೆ ಸಮಾಜದ ಸ್ವಾಸ್ಥ್ಯವನ್ನು ಕದಡಲು ಪ್ರಯತ್ನಿಸುತ್ತಿದೆ.ಹಿಂದೂ ಧಮರ್ೀಯರು ಭಕ್ತಿ ಹಾಗೂ ಒಗ್ಗಟ್ಟಿನಿಂದ ಸ್ವಸ್ಥ ಸಮಾಜ ನಿಮರ್ಿಸಬೇಕಾಗಿದೆ ಎಂದು ಕೊಂಡೆವೂರು ಶ್ರೀನಿತ್ಯಾನಂದಯೋಗಾಶ್ರಮದ ಶ್ರೀಯೋಗಾನಂದ ಸರಸ್ವತೀ ಶ್ರೀಗಳು ಆಶೀರ್ವಚನಗೈದು ತಿಳಿಸಿದರು.
   ಕೇರಳದ ಪವಿತ್ರ, ಪುಣ್ಯ ತೀಥರ್ಾಟನ ಕೇಂದ್ರವಾದ ಶಬರಿಮಲೆಯ ಆಚಾರ ಅನುಷ್ಠಾನ ಸಂರಕ್ಷಣೆ, ಶ್ರೀ ಕ್ಷೇತ್ರದ ಪರಂಪರಾಗತ ನಡವಳಿಕೆಯಲ್ಲಿ ಅನ್ಯರ ಹಸ್ತಕ್ಷೇಪ ಮತ್ತು 800 ವರ್ಷಗಳ ಪರಂಪರೆಗೆ ಚ್ಯುತಿ ಬಾರದಂತೆ ಕ್ಷೇತ್ರ ಕಾರ್ಯ ನಡೆಸಲು ಆಗ್ರಹಿಸಿ ಬುಧವಾರ ಸಂಜೆ ಪೆರ್ಲದಲ್ಲಿ ನಡೆದ 'ಶ್ರೀ ಸ್ವಾಮಿ ಅಯ್ಯಪ್ಪ ಭಕ್ತಸಂಗಮ' ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
  ಸದಾನಂದ ಶೆಟ್ಟಿ ಕುದ್ವ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸುಧಾ ಎಸ್.ಭಟ್ ಕಶೆಕೋಡಿ ಅವರು ಮಾತನಾಡಿ, ಪುರಾಣ ಕಾಲದಲ್ಲಿ ದುಷ್ಟ ನಿಗ್ರಹಕ್ಕಾಗಿ ಜಗನ್ಮಾತೆಯ ಮೊರೆ ಹೋಗಲಾಗಿತ್ತು. ಇತಿಹಾಸ ಕಾಲದಲ್ಲಿ ಝಾನ್ಸಿ ರಾಣಿ, ಕಿತ್ತೂರು ಚೆನ್ನಮ್ಮ, ಒನಕೆ ಓಬವ್ವ ಮೊದಲಾಗಿ ಸ್ತ್ರೀಯರು ಪುರುಷ ಸಮಾನರಾಗಿ ಯುದ್ಧ ಮಾಡಿ ಪುರಾಣ, ಋಷಿ ಮುನಿಗಳ ಕಾಲದಿಂದಲೂ ಭಾರತೀತ ಸ್ತ್ರೀಗೆ ಪವಿತ್ರ ಸ್ಥಾನ ಕಲ್ಪಿಸಲಾಗಿದೆ ವಿಜಯಿಸಿದ್ದಾರೆ. ಒಟ್ಟಿನಲ್ಲಿ ಹಿಂದೂ ಧರ್ಮದಲ್ಲಿ ಸ್ತ್ರೀಗೆ ಉತ್ಕೃಷ್ಟ ಸ್ಥಾನ ಕಲ್ಪಿಸಲಾಗಿದೆ.ಯಾವುದೇ ಕಾಲವಿರಲಿ ಹಿಂದೂ ಧರ್ಮದಲ್ಲಿ ಸ್ತ್ರೀ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಿಲ್ಲ ಹೇಳಿದರು.
   ಶೈಕ್ಷಣಿಕ, ಆಡಳಿತಾತ್ಮಕ, ಸಾರ್ವಜನಿಕವಾಗಿ ಹಿಂದೂ ಮಹಿಳೆಯರು ಉತ್ಕೃಷ್ಟ ಸ್ಥಾನಗಳನ್ನು ಅಲಂಕರಿಸಿದ್ದು ಇದೀಗ ಧಾಮರ್ಿಕವಾಗಿ ಸಂಪ್ರದಾಯಗಳ ಮೇಲೆ ತುಳಿಯುವ ಯತ್ನ  ನಡೆಯುತ್ತಿದೆ.ಅನ್ಯ ಧರ್ಮಗಳಲ್ಲಿರುವಂತೆ ಆರಾಧನಾಲಯಗಳಿಗೆ ಹೋಗಲೇ ಬೇಕಾದ ನಿರ್ಬಂಧ , ಕಟ್ಟು ಪಾಡುಗಳು, ಪ್ರಸ್ನಿಸುವ ವೈಖರಿ ಹಿಂದೂ ಧರ್ಮದಲ್ಲಿಲ್ಲ. ಶಬರಿಮಲೆಯ ಪಾವಿತ್ರ್ಯಕ್ಕೆ ಧಕ್ಕೆ  ತರುವ ಸಂಚು ಹೂಡಲಾಗಿದೆ. ಯಾವುದೇ ಹಿಂದೂ ಮಹಿಳೆಯೂ ಶಬರಿಮಲೆ ಸ್ತ್ರೀ ಪ್ರವೇಶ ಕಲ್ಪಿಸುವಂತೆ ನ್ಯಾಯಾಲಯದ ಮೆಟ್ಟಿಲು ಏರಿಲ್ಲ. ನಾಸ್ತಿಕರಾದ ಅಸಹಿಷ್ಣುತಾ ವಾದಿಗಳು ಸ್ತ್ರೀ ಪ್ರವೇಶ ಸಂಬಂದಿಸಿ  ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡಬೇಕಾದ ಸರಕಾರ ಹಾಗೂ ನ್ಯಾಯಾಂಗ ಕೇವಲ ಐದೇ ಐದು ಮಹಿಳೆಯರಿಗೋಸ್ಕರ ಐದು ಕೋಟಿಗೂ ಅಧಿಕ ಜನರ ಧಾಮರ್ಿಕ ಭಾವನೆಗಳಿಗೆ ನೋವುಂಟು ಮಾಡಲಾಗಿದೆ ಎಂದರು.
   ಸೇವ್ ಶಬರಿಮಲ ಫಾಮರ್್ ಸಂಘಟನೆಯ ಮುಖ್ಯಸ್ಥ ರೂಪೇಶ್ ಕಣ್ಣೂರು ಮಾತನಾಡಿ, ಶಬರಿಮಲೆ ಸ್ತ್ರೀ ಪ್ರವೇಶ ಸಂಬಂಧಿಸಿ  ಸುಪ್ರಿಂ ಕೋಟರ್್ ತೀರ್ಪನ್ನು ನಾಸ್ತಿಕರು ಚಾರಿತ್ರಿಕ ವಿಧಿ ಎಂದಾಗ ಕೋಟಿಗಟ್ಟಲೆ ವಿಶ್ವಾಸಿಗಳು ಚಾರಿತ್ರಿಕ ದುವರ್ಿಧಿ ಎಂದು ಕರೆದರು.ಶಬರಿಮಲೆ ವ್ಯತ್ಯಸ್ತ ರೀತಿಯ ಕ್ಷೇತ್ರವಾಗಿದ್ದು ಅದರದ್ದೇ ಆದ ಆಚಾರ ಪದ್ಧತಿಗಳಿವೆ.ಪೂವರ್ಿಕರು ತಲೆಮಾರುಗಳಿಂದ ಆಚರಿಸುತ್ತಾ ಬಂದಿರುವ ಸನಾತನ ಹಿಂದೂ ಧರ್ಮದ ದಿವ್ಯ ಹಾಗೂ ಧಾಮರ್ಿಕ ಪರಂಪರೆಯನ್ನು ಯಾವುದೇ ದುಷ್ಟ ಕೂಟಗಳಿಂದಲೂ ನಾಶ ಪಡಿಸಲು ಸಾಧ್ಯವಿಲ್ಲ ಎಂದರು.
     ಸಹಕಾರ ಭಾರತಿ ರಾಷ್ಟ್ರೀಯ ಕಾರ್ಯದಶರ್ಿ ಕರುಣಾಕರನ್ ನಂಬ್ಯಾರ್ ಮಾತನಾಡಿದರು. ಸ್ವರ್ಣಲತಾ ಜಿ.ಶೆಟ್ಟಿ, ಅವಿನಿಶ್ ಜಿ.ಶೆಟ್ಟಿ ಪ್ರಾಥರ್ಿಸಿದರು. ಉದಯ ಪೆರ್ಲ ಸ್ವಾಗತಿಸಿ ಪ್ರವೀಣ್ ಬಜಕೂಡ್ಲು ವಂದಿಸಿದರು.ಸುಮಿತ್ ರಾಜ್ ನಿರೂಪಿಸಿದರು.
   ಇದಕ್ಕೂ ಮೊದಲು ಇಡಿಯಡ್ಕ ಶ್ರೀಕ್ಷೇತ್ರ ಪರಿಸರದಿಂದ ಬೃಹತ್ ನಾಮ ಸಂಕೀರ್ತನಾ ಮೆರವಣಿಗೆ ಪೆರ್ಲಕ್ಕೆ ಸಾಗಿಬಂತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries