HEALTH TIPS

ಯಾವುದೇ ಶೀರ್ಷಿಕೆಯಿಲ್ಲ

        ಪೆರ್ಲದಲ್ಲಿ ಮಹಷರ್ಿ ವಾಲ್ಮೀಕಿ ಜಯಂತಿ ಆಚರಣೆ
    ಪೆರ್ಲ:  ವಾಲ್ಮೀಕಿ  ಮಹಷರ್ಿಗಳ  ಬದುಕು ಪರಿವರ್ತನೆಯ ಸಂಕಲ್ಪದಿಂದ  ಕೂಡಿದ್ದು, ಪಾಪ  ಮತ್ತು ಪುಣ್ಯಗಳಳಿಂದ  ಮನುಜ ಜನ್ಮ  ಹೇಗೆ ಒಳಿತನ್ನು  ಸ್ವೀಕರಿಸಿ, ಕೆಡುಕು ತ್ಯಜಿಸಿ  ಧರ್ಮದ ಮೂಲಕವಾಗಿ ತ್ಯಾಗಮಯ ಬದುಕನ್ನು ಬೆಳಗಿಸಿಕೊಳ್ಳಬೇಕೆನ್ನುವುದನ್ನು  ಕಲಿಸಿಕೊಡುತ್ತದೆ. ರಾಮನಾಮದ  ಭವ್ಯತೆ,ಕಾರಣಿಕದ ಮಹಿಮೆಯಿಂದ  ತಾನು  ಪರಿವರ್ತನೆಯಾಗುವುದಲ್ಲದೆ ಅದರ  ಚರಿತಾಮೃತವನ್ನು  ಲೋಕಕಲ್ಯಾಣಾರ್ಥ  ಬರೆದು  ಇಂದಿಗೂ  ಧರ್ಮ  ಜಾಗೃತವಾಗುವಂತೆ  ಮಾಡಿದ  ಶೇಷ್ಠತೆ  ವಾಲ್ಮೀಕಿ  ಮಹಷರ್ಿಗಳಿಗೆ  ಸಲ್ಲುತ್ತದೆ  ಎಂದು  ಕೇರಳ ಪ್ರಾಂತ್ಯ  ಕನ್ನಡ ಅಧ್ಯಾಪಕರ  ಸಂಘದ   ಅಧ್ಯಕ್ಷರೂ, ಯುವ  ಕವಿಗಳೂ ಆದ ಶ್ರೀಧರ್ ನಾಯಕ್  ಕುಕ್ಕಿಲ ಅಭಿಪ್ರಾಯ ವ್ಯಕ್ತಪಡಿಸಿದರು.   
   ಪೆರ್ಲದ ಕವಿ ಹೃದಯದ  ಸವಿ ಮಿತ್ರರು ವೇದಿಕೆಯ ಆಶ್ರಯದಲ್ಲಿ  ಸ್ವಸ್ತಿ  ಡಿಜಿಟಲ್  ಸ್ಟುಡಿಯೋದಲ್ಲಿ ಬುಧವಾರ ನಡೆದ ಆದಿ  ಕವಿ ಮಹಷರ್ಿ ವಾಲ್ಮೀಕಿ  ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
    ಹಿರಿಯ ಸಾಹಿತಿ ಹರೀಶ್  ಪೆರ್ಲ  ಅವರು  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಲೋಕದಲ್ಲಿ  ಯಾರೂ  ಕೆಟ್ಟವರಾಗಿ  ಬೆಳೆಯುವುದಿಲ್ಲ. ಕೆಲವೊಂದು  ಸಂದರ್ಭಗಳು  ಮನುಷ್ಯರನ್ನು  ಕೆಟ್ಟವರನ್ನಾಗಿ  ಮಾಡುತ್ತದೆ. ಆದರೆ  ಕೆಟ್ಟದ್ದನ್ನು  ತ್ಯಜಿಸಿ  ಜೀವನವನ್ನು  ಪರಿವರ್ತನೆಯೊಂದಿಗೆ ಸಾರ್ಥಕ್ಯ  ಕಂಡುಕೊಂಡ  ವಾಲ್ಮೀಕಿ  ಮಹಷರ್ಿಗಳ  ಜೀವನ  ನಮಗೆ  ಪರಿವರ್ತನೆಗಿರುವ  ದಾರಿ ಮತ್ತು ಪ್ರೇರಣೆ ಎಂದು  ತಿಳಿಸಿದರು.
   ಮಣಿರಾಜ್ ವಾಂತಿಚ್ಚಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಭಾಷ್  ಪೆರ್ಲ  ಸ್ವಾಗತಿಸಿ, ಶಿಕ್ಷಕ,ಚುಟುಕು ಸಾಹಿತಿ  ಸುಕುಮಾರ  ಬೆಟ್ಟಂಪಾಡಿ  ವಂದಿಸಿದರು



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries