HEALTH TIPS

ಯಾವುದೇ ಶೀರ್ಷಿಕೆಯಿಲ್ಲ

            ಜಿಲ್ಲಾ ಮಿನಿ ಕ್ಯಾಂಪೂರಿಯ ಕಛೇರಿ ಉದ್ಘಾಟನೆ
    ಕುಂಬಳೆ: ಶಿಸ್ತು, ಸ್ವರಕ್ಷಣೆ, ರಾಷ್ಟ್ರಪ್ರೇಮ ಸಹಿತ ಜೀವನ ಮೌಲ್ಯಗಳ ಶಿಕ್ಷಣ ನೀಡುವ ಸ್ಕೌಟ್- ಗೈಡ್ಸ್ ತರಬೇತಿಯು ವಿದ್ಯಾಥರ್ಿ ಜೀವನದ ಮಹತ್ವಪೂರ್ಣ ವಿಭಾಗವಾಗಿದೆ. ಅವಕಾಶಗಳನ್ನು ಸದ್ವಿನಿಯೋಗಪಡಿಸಿ ಮುನ್ನಡೆಯುವ ಛಲ ಗೆಲುವಿಗೆ ಕಾರಣವಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಮೊತ್ತಮೊದಲ ಬಾರಿಗೆ ಆಯೋಜಿಸಲಾಗುವ ವಿಶೇಷ ಕ್ಯಾಂಪೂರಿ ಶಿಬಿರ ಯಶಸ್ವಿಯಾಗುವುದರೊಂದಿಗೆ ಪ್ರೇರಣೆ ನೀಡಲಿ ಎಂದು ನೀಚರ್ಾಲು ಮಹಾಜನ ವಿದ್ಯಾಸಂಸ್ಥೆಗಳ ಸಂಚಾಲಕ ಜಯದೇವ ಖಂಡಿಗೆ ಅಭಿಪ್ರಾಯ ವ್ಯಕ್ತಪಡಿಸಿದರು.
    ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದಲ್ಲಿ ನವೆಂಬರ್ 9 ರಿಂದ 11ರ ವರೆಗೆ ನಡೆಯಲಿರುವ ಕೇರಳ ರಾಜ್ಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕಾಸರಗೋಡು ಜಿಲ್ಲಾ ಮಿನಿ ಕ್ಯಾಂಪೂರಿಯ ಕಾರ್ಯಕಾರೀ ಸಮಿತಿ ಕಛೇರಿಯನ್ನು ಮಂಗಳವಾರ ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
    ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತಾಧ್ಯಕ್ಷರೂ, ಕ್ಯಾಂಪೂರಿ ಕಾರ್ಯಕ್ರಮ ಸಮಿತಿ ಅಧ್ಯಕ್ಷರೂ ಆದ ಎಸ್.ಎನ್.ರಾವ್ ಮುನ್ನಿಪ್ಪಾಡಿ ಸ್ಕೌಟ್ ಮತ್ತು ಗೈಡ್ ಎಂಬುದು ಎಲ್ಲಾ ಚಟುವಟಿಕೆಗಳಿಗೆ ಪ್ರೇರಣೆ ಹಾಗೂ ಈ ಸಂಸ್ಥೆಯ ಅಭಿವೃದ್ಧಿಗೆ ಮೇಲ್ಪಂಕ್ತಿ ಎಂದರು.
    ವಿದ್ಯಾಥರ್ಿನಿ ಕು.ಕೃತಿಕಾ ಮತ್ತು ತಂಡದವರು ಪ್ರಾರ್ಥನೆ ಹಾಡಿದರು. ಶಾಲಾ ಆಡಳಿತಾಧಿಕಾರಿ ಶ್ಯಾಂಭಟ್ ದಭರ್ೆಮಾರ್ಗ ಸ್ವಾಗತಿಸಿ, ಶಿಕ್ಷಕಿ ಶಿವಕುಮಾರಿ ಕುಂಚಿನಡ್ಕ ವಂದಿಸಿದರು. ಶಿಕ್ಷಕ ಹರಿಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries