ಬದಿಯಡ್ಕ: ಸ್ವ ಉದ್ಯೋಗ, ಸ್ವಾವಲಂಬನೆ ಕ್ಷೇತ್ರದಲ್ಲಿ ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ಹೊಸ ಭಾಷ್ಯ ಬರೆದಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ನಾಡಿನ ಹೆಮ್ಮೆಯಾಗಿದೆ. ಬಹುಮುಖ ಯೋಜನೆಗಳಿಂದ ಪರಿಣಾಮಕಾರಿ ಬದಲಾವಣೆ ಸಾಧ್ಯವಾಗಿದೆ ಎಂದು ಬದಿಯಡ್ಕ ಗ್ರಾ.ಪಂ. ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ತಿಳಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ಘಟಕದಾಶ್ರಯದಲ್ಲಿರುವ ನೀಚರ್ಾಲು ಸಮೀಪದ ಮಾನ್ಯದ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ನೇತೃತ್ವದಲ್ಲಿ ಭಾನುವಾರ ಅಪರಾಹ್ನ ಮಾನ್ಯ ಜ್ಞಾನೋದಯ ಅನುದಾನಿತ ಶಾಲೆಯಲ್ಲಿ ನಡೆದ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಮಗ್ರ ಗ್ರಾಮಾಭಿವೃದ್ದಿಯ ಸಾಕಾರತೆಯಲ್ಲಿ ದಾಖಲೆಯ ಸಾಧನೆ ಮೆರೆಯುತ್ತಿರುವ ಶ್ರೀಕ್ಷೇತ್ರದ ಯೋಜನೆಗಳ ಸಾಮಾಜಿಕ ಕಳಕಳಿಗೆ ಎಲ್ಲರೂ ಆಭಾರಿಗಳು. ಸಣ್ಣ ಹಿಡುವಳಿದಾರರಿಂದ ತೊಡಗಿ ಬೃಹತ್ ಮಟ್ಟದ ಉದ್ಯಮ, ಉಳಿತಾಯ, ಪಿಡುಗುಗಳ ವಿರುದ್ದವಾದ ನಿಮರ್ೂಲನ ಚಟುವಟಿಕೆ, ಸ್ವಾವಲಂಬನೆ, ನೈತಿಕ ಶಿಕ್ಷಣ ಮೊದಲಾದ ಬದುಕಿಗೆ ಮಾರ್ಗದರ್ಶಕವಾದ ಚಟುವಟಿಕೆಗಳು ಉತ್ತಮ ಸಮಾಜವನ್ನು ನಿಮರ್ಿಸುವಲ್ಲಿ ಯಶಸ್ವಿಯಾಗಿದೆ. ಹೆಚ್ಚು ಜವಾಬ್ದಾರಿಯುತವಾಗಿ ಯೋಜನೆಯ ಇನ್ನಷ್ಟು ಅಭಿವೃದ್ದಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಅವರು ತಿಳಿಸಿದರು.
ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಚೇತನಾ ಎಂ. ಉಪಸ್ಥಿತರಿದ್ದು ಚಟುವಟಿಕೆಗಳ ಸಮಗ್ರ ಮಾಹಿತಿ ನೀಡಿ ಅವಲೋಕನ ನಡೆಸಿದರು. ಅವರು ಮಾತನಾಡಿ, ಸುಶಿಕ್ಷಿತರ ನಾಡೆಂದು ಪ್ರಸಿದ್ದಿಪಡೆದಿರುವ ಕೇರಳದೊಳಗಿನ ಕಾಸರಗೋಡಿನ ಎರಡು ಸಾವಿರಕ್ಕಿಂತಲೂ ಮಿಕ್ಕಿದ ವಿವಿಧ ಘಟಕಗಳಲ್ಲಿ ಗಮನೀಯ ಯಶಸ್ಸನ್ನು ಸಾಧಿಸಲಾಗಿದೆ. ಕನರ್ಾಟಕದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ದಾಖಲೆ ಮಟ್ಟದ ಯಶಸ್ಸು ಕಾಸರಗೋಡು ಜಿಲ್ಲೆಯ ಹೆಗ್ಗಳಿಕೆ ಎಂದು ತಿಳಿಸಿದರು. ಈ ನಿಟ್ಟಿನಲ್ಲಿ ಜಿಲ್ಲೆಯ ಸಹೃದಯ ನಾಗರಿಕರ ಸಹಕಾರ ಅತ್ಯಪೂರ್ವವಾದುದು. ಇದರಿಂದಲೇ ಈ ಯಶಸ್ಸು ಸಾಧ್ಯವಾಯಿತು. ಬದುಕಿನ ಪಾಠ ತಿಳಿಸುವಲ್ಲಿ ಯೋಜನೆ ಸಮಗ್ರ ಅಭಿವೃದ್ದಿಗೆ ಶ್ರಮಿಸುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಪ್ರೊ.ಎ.ಶ್ರೀನಾಥ್, ಬದಿಯಡ್ಕ ಗ್ರಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ, ಉಳ್ಳೋಡಿ ಅಂಚೆ ಕೇಂದ್ರದ ಅಂಚೆಪಾಲಕ ಸುಂದರ ಶೆಟ್ಟಿ ಕೊಲ್ಲಂಗಾನ, ಮಾನ್ಯ ಶಾಲಾ ಮುಖ್ಯೋಪಾಧ್ಯಾಯ ಗೋವಿಂದನ್ ನಂಬೂದಿರಿ ಉಪಸ್ಥಿತರಿದ್ದು ಶುಭಹಾರೈಸಿದರು.
ಈ ಸಂದರ್ಭ ನೂತನ ಪದಾಧಿಕಾರಿಗಳಾದಮಧುಮತಿ(ಅಧ್ಯಕ್ಷೆ), ನಮಿತಾ(ಕಾರ್ಯದಶರ್ಿ), ಅನಿತಾ(ಜೊತೆಕಾರ್ಯದಶರ್ಿ), ಸವಿತಾ(ಖಜಾಂಜಿ) ಹಾಗೂ ಖದೀಜ ಅವರಿಗೆ ಅಧಿಕಾರ ಹಸ್ತಾಂತರ ನಡೆಯಿತು. ಈ ಹಿಂದಿನ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳಾದ ಹೇಮಲತಾ, ಸರೋಜಿಸಿ, ಸುನಿತಾ, ಪುಷ್ಪಾವತಿ, ಶಮೀನಾ ಉಪಸ್ಥಿತರಿದ್ದು ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿ ಕಾಗದಪತ್ರಗಳನ್ನು ಹಸ್ತಾಂತರಿಸಿದರು. ಸೇವಾ ಪ್ರತಿನಿಧಿ ಸುಮಿತ್ರಾ ಸ್ವಾಗತಿಸಿ, ಕವಿತಾ ವಂದಿಸಿದರು. ಮೇಲ್ಚಿಚಾರಕ ಧನಂಜಯ ಕಾರ್ಯಕ್ರಮ ನಿರೂಪಿಸಿದರು. ಜೊತೆಗೆ ಈ ಸಂದರ್ಭ ಹೊಸತಾಗಿ ಅಸ್ತಿತ್ವಕ್ಕೆ ಬಂದ ಶ್ರೀಹರಿ ಸ್ವಸಹಾಯ ಸಂಘವನ್ನು ಉದ್ಘಾಟಿಸಲಾಯಿತು.


